5,000 ರೂ. ಕೊಟ್ಟರೆ No ಸಾಂಸ್ಥಿಕ ಕ್ವಾರಂಟೈನ್​.. ಅವ್ಯವಹಾರ ಕಂಡು ಬೇಸತ್ತ ವೈದ್ಯಾಧಿಕಾರಿ

ಬೆಂಗಳೂರು:ಕ್ವಾರಂಟೈನ್ ಕೇಂದ್ರದಲ್ಲಿ ನಡೆಯುತ್ತಿರುವ ಅವ್ಯವಹಾರದಿಂದ ಬೇಸತ್ತ ವೈದ್ಯಾಧಿಕಾರಿಯೊಬ್ಬರು ಈ ದಂಧೆಗೆ ಕಡಿವಾಣ ಹಾಕಲು ಠಾಣೆಯ ಮೆಟ್ಟಿಲೇರಲು ಸಿದ್ಧರಾಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ವಿದೇಶದಿಂದ ಬಂದವರಿಗೆ ವೈದ್ಯರು 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್​ಗೆ ಸೂಚಿಸಿದ್ದಾರೆ. ಆದರೆ ಕ್ವಾರಂಟೈನ್​ ಕೇಂದ್ರದ ಬಿಬಿಎಂಪಿ ಸಿಬ್ಬಂದಿ ಹಾಗೂ ಕೆಲವು ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಿಸದೆ  ಹಾಗೆ ಬಿಟ್ಟು ಕಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ಈ ಅವ್ಯವಹಾರಕ್ಕೆ 5 ರಿಂದ 10 ಸಾವಿರ ರೂಪಾಯಿ ವಸೂಲಿ ಸಹ ಮಾಡುತ್ತಿದ್ದಾರೆ ಎಂದು ವೈದ್ಯಾಧಿಕಾರಿಯ ಆರೋಪಿಸಿದ್ದಾರೆ.

ಈ ಹಿಂದೆ, ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ಕಳಿಸಿದರೆ, ಕೇವಲ 2,000 ರೂಪಾಯಿ ಪಡೆದು ಪ್ರಯಾಣಿಕರನ್ನ ಮನೆಗೆ ಕಳಿಸಿರುವ ಘಟನೆ ನಡೆದಿದೆ ಎಂದು ಅಧಿಕಾರಿಯು ಹೇಳಿದ್ದಾರೆ. ಈ ರೀತಿಯ ಹಲವು ಘಟನೆಗಳಿಂದ ಬೇಸತ್ತ ವೈದ್ಯಾಧಿಕಾರಿ ಇದೀಗ ಈ ಅವ್ಯವಹಾರವನ್ನ ಬಯಲಿಗೆಳೆಯಲು ಮುಂದಾಗಿದ್ದು  ಪೊಲೀಸ್ ಠಾಣೆಯ ಮೆಟ್ಟಿಲೇರಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ಜೊತೆಗೆ, ಈ ಅವ್ಯವಹಾರದ ಆಡಿಯೋ ತುಣುಕೊಂದು ಬಹಿರಂಗವಾಗಿದ್ದು, ಅದರಲ್ಲಿ ಪ್ಯಾಸೆಂಜರ್​ನಿಂದ ಹಣ ಪಡೆದ ನರ್ಸ್ ಒಬ್ಬರು ಯಾವುದೇ ಕಾರಣಕ್ಕೂ ಹಣಪಡೆದಿರುವ ವಿಚಾರವನ್ನು ಯಾರ ಬಳಿಯೂ ಹೇಳಬೇಡಿ ಎಂದು ನುಡಿದಿರುವುದು ಕೇಳಿಬಂದಿದೆ.

Related Tags:

Related Posts :

Category: