ಭೀಮೆಯಲ್ಲಿ ಕೊಚ್ಚಿ ಹೋಗ್ತಿದ್ದ ಮರಿಗಳನ್ನು ತಾಯಿ ಶ್ವಾನ ರಕ್ಷಣೆ ಮಾಡಿದ್ದು ಹೀಗೆ..

ವಿಜಯಪುರ: ಜಿಲ್ಲೆಯ ತಾರಾಪುರದಲ್ಲಿ ಭೀಮೆಯ ಪ್ರವಾಹಕ್ಕೆ ಸಿಲುಕಿ ಜನರ ಜೊತೆ ಪ್ರಾಣಿಗಳಿಗೂ ಸಂಕಷ್ಟ ಎದುರಾಗಿದೆ. ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಪ್ರಾಣ ಉಳಿಸಲು ಪರದಾಡುತ್ತಿರುವ ಜನರ ನಡುವೆ ತಾಯಿ ಶ್ವಾನವೊಂದು ತನ್ನ ಮರಿಗಳನ್ನ ರಕ್ಷಿಸಲು ಮುಂದಾದ ಮನ ಮಿಡಿಯುವ ಘಟನೆ ಕಂಡುಬಂತು.
ಎಂಥದ್ದೇ ಪರಿಸ್ಥಿತಿ ಇರಲಿ ಒಬ್ಬ ತಾಯಿ ತನ್ನ ಮಕ್ಕಳನ್ನು ರಕ್ಷಿಸೋಕೆ ಪಣತೊಟ್ಟರೇ ಆಕಾಶ ಭೂಮಿಗಳನ್ನ ಒಂದು ಮಾಡಿ ಬಿಡುತ್ತಾಳಂತೆ. ಅಂತೆಯೇ, ಮಾತೃ ಪ್ರೇಮದ ಪ್ರತೀಕವಾದ ಈ ಘಟನೆಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ತನ್ನ ಮರಿಗಳನ್ನು ತಾಯಿ ಶ್ವಾನವೊಂದು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ತನ್ನ ಬಾಯಿಯಲ್ಲಿ ಮರಿಯನ್ನು ಸುರಕ್ಷಿತವಾಗಿ ಸಿಕ್ಕಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ಒಯ್ದ ನಾಯಿ ಇದೇ ರೀತಿ ತನ್ನ ಎರಡು‌ ಮರಿಗಳನ್ನು ರಕ್ಷಿಸಿದೆ. ದುರಂತವೆಂದರೆ, ಶ್ವಾನದ ಮತ್ತೆರಡು ಮರಿಗಳು ಭೀಮೆಯ ಪ್ರವಾಹಕ್ಕೆ ಆಹಾರವಾಗಿ ಹೋದವು ಎಂಬುದೇ ದುಃಖಕರ ಸಂಗತಿ.

Related Tags:

Related Posts :

Category:

error: Content is protected !!