ನಾಯಿಗಳ ಪಾಲಾದ ಕೊರೊನಾ ಸೋಂಕಿತ ಶಂಕಿತ ವ್ಯಕ್ತಿಯ ಶವ

ಹೈದರಾಬಾದ್: ಕೊರೊನಾ ಇಡೀ ದೇಶವನ್ನೇ ನಲುಗುವಂತೆ ಮಾಡಿದ ಮಹಾ ವೈರಸ್. ಆದರೆ ಸರ್ಕಾರ ಮಾತ್ರ ಮಹಾಮಾರಿಯನ್ನು ಹಿಮ್ಮೆಟ್ಟಿಸುವಲ್ಲಿ ನಿರ್ಲಕ್ಷ್ಯವಹಿಸುತ್ತಿದೆ. ಆಂಧ್ರಪ್ರದೇಶದ ಒಂಗೋಲ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ  ಆಘಾತಕಾರಿ ಸುದ್ದಿಯೊಂದು ವರದಿಯಾಗಿದೆ.

ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ರಿಮ್ಸ್) ನಲ್ಲಿ ಕೊರೊನಾ ಸೋಂಕಿತ ಶಂಕಿತ ವ್ಯಕ್ತಿಯ ಮೃತ ದೇಹವನ್ನು ನಾಯಿ ಕಚ್ಚಿ ತಿಂದಿರುವ ಘಟನೆ ನಡೆದಿದೆ. ಆದರೆ ಆತ ಕೊರೊನಾ ಸೋಂಕಿತನಾ ಅಥವಾ ಅಲ್ವಾ ಎಂಬುದು ಸ್ಪಷ್ಟವಾಗಿಲ್ಲ. ಮೃತ ವ್ಯಕ್ತಿಯ ಮುಖಕ್ಕೆ ನಾಯಿ ಕಚ್ಚಿ ಗಾಯ ಮಾಡಿದೆ ಹಾಗೂ ಶವದ ಕಿವಿ ಭಾಗ ಕಾಣೆಯಾಗಿದೆ. ಮನೆಯಿಲ್ಲದವರಿಗೆ ಹಾಗೂ ಬಡವರಿಗೆ ಆಶ್ರಯವಾಗಿ ಬಳಸಿದ ಶೆಡ್‌ನಲ್ಲಿ ನಾಯಿಗಳಿಂದ ದಾಳಿಗೊಳಗಾದ ಮನುಷ್ಯನ ಶವ ಪತ್ತೆಯಾಗಿದೆ.

ಅದೇ ದಿನ ಸೋಮವಾರ, ಬೀದಿ ನಾಯಿಗಳು ಮನುಷ್ಯನ ಕಿವಿಯನ್ನು ತಿನ್ನುತ್ತಿರುವುದದನ್ನು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ನೋಡಿದ್ದ. ಮೃತ ಪ್ರಕಾಶಂ ಜಿಲ್ಲೆಯ ಜರುಗುಮಲ್ಲಿ ಮಂಡಲದ ಬಿಟ್ರಗುಂಟ ಗ್ರಾಮದ ನಿವಾಸಿ ಕಾಂತ ರಾವ್ ಎಂದು ಗುರುತಿಸಲಾಗಿದೆ.

ಈ ಘಟನೆಗೆ ರಿಮ್ಸ್ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕಾಂತ ರಾವ್ ಅವರ ಸಂಬಂಧಿಕರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ರು. ಘಟನೆಯ ಬಗ್ಗೆ ತನಿಖೆ ನಡೆಸಿದ ನಂತರ ಮೃತ ವ್ಯಕ್ತಿಯು ಇದಕ್ಕೂ ಮುಂಚೆ ಆಸ್ಪತ್ರೆಗೆ ದಾಖಲಾಗಿರಲಿಲ್ಲ ಎಂಬ ಸಂಗತಿ ಹೊರ ಬಿದ್ದಿದೆ.

Related Tags:

Related Posts :

Category: