ವಿದೇಶ ವಿಮಾನ ಗೊತ್ತಿಲ್ಲ, ದೇಶೀಯ ವಿಮಾನಯಾನ ಆರಂಭ! ಯಾವಾಗ?

ದೆಹಲಿ: ಕೊರೊನಾ ಹೆಮ್ಮಾರಿಯಿಂದ ಇಡೀ ಜಗತ್ತು ಮತ್ತು ದೇಶಾದ್ಯಂತ ವಿಮಾನ ಹಾರಾಟಗಳನ್ನ ಸ್ಥಗಿತಗೊಳಿಸಲಾಗಿದೆ. ಇದೀಗ ಲಾಕ್​ಡೌನ್ ನಿಯಮಗಳಲ್ಲಿ ಸಡಿಲಿಕೆ ಮಾಡಿದ್ದು, ಅಗತ್ಯ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಬಸ್ ಸಂಚಾರ, ರೈಲು ಸಂಚಾರ ಸಹ ಶುರುವಾಗಿದೆ. ಹಾಗಾಗಿ ಮೇ 25ರಿಂದ ದೇಶೀಯ ವಿಮಾನಗಳ ಹಾರಾಟಕ್ಕೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಯಾವಾಗ ಎಂಬುದನ್ನು ಸದ್ಯಕ್ಕೆ ಇನ್ನೂ ನಿರ್ಧರಿಸಿಲ್ಲ.

ಮೇ 25ರಿಂದ ದೇಶೀಯ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಿರುವ ಕೇಂದ್ರ ವಿಮಾನಯಾನ ಸಚಿವಾಲಯ ಕೆಲವು ಶಿಷ್ಟಾಚಾರಗಳನ್ನು ಕಡ್ಡಾಯಗೊಳಿಸಿದೆ. ಪ್ರಯಾಣದ ವೇಳೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಭದ್ರತಾ ಸಿಬ್ಬಂದಿ ಮೂಲಕ‌ ಚಕ್ ಇನ್ ಇರುವುದಿಲ್ಲ. ಹೊರಗಿನಿಂದಲೇ ಬೋರ್ಡಿಂಗ್ ಪಾಸ್ ಪ್ರಿಂಟೌಟ್ ತರಬೇಕಾಗಿದೆ. ನಂತರ ಬೋರ್ಡಿಂಗ್ ಪಾಸ್ ಸ್ಕ್ಯಾನ್ ಮಾಡಿ‌ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, 3 ಗಂಟೆ ಮೊದಲೇ ವಿಮಾನ‌ ನಿಲ್ದಾಣಕ್ಕೆ ಪ್ರಯಾಣಿಕರು ಬರಬೇಕು.

Related Posts :

Category:

error: Content is protected !!