ಅಮೆರಿಕದ ಇತಿಹಾಸದಲ್ಲೇ 2 ಬಾರಿ ಮಹಾಭಿಯೋಗಕ್ಕೆ ಗುರಿಯಾದ ಡೊನಾಲ್ಡ್​ ಟ್ರಂಪ್

ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧ ಮಹಾಭಿಯೋಗ ಹೊರಡಿಸಲಾಗಿದೆ. ಇದರಿಂದ ಅಮೆರಿಕದ ಇತಿಹಾಸದಲ್ಲಿ 2 ಬಾರಿ ಮಹಾಭಿಯೋಗಕ್ಕೆ ಡೊನಾಲ್ಡ್​ ಟ್ರಂಪ್ ಗುರಿಯಾಗಿದ್ದಾರೆ.

  • TV9 Web Team
  • Published On - 7:53 AM, 14 Jan 2021
ಡೊನಾಲ್ಡ್​ ಟ್ರಂಪ್

ಅಮೆರಿಕದ ಕ್ಯಾಪಿಟಲ್ ಬಿಲ್ಡಿಂಗ್‌ನಲ್ಲಿ ಘರ್ಷಣೆ ಮತ್ತು ಹಿಂಸಾಚಾರಕ್ಕೆ ತನ್ನ ಬೆಂಬಲಿಗರನ್ನು ಪ್ರಚೋದನೆ ಮಾಡಿದ ಹಿನ್ನೆಲೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಮೂವರು ಸಂಸದರು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣಾ (ಮಹಾಭಿಯೋಗ) ಕರಡನ್ನು ಸಂಸತ್​ನಲ್ಲಿ ಮಂಗಳವಾರ ಪರಿಚಯಿಸಿದ್ದರು.

ಅಮೆರಿಕದ ಕಾಂಗ್ರೆಸ್​ನ ಡೆಮಾಕ್ರಟಿಕ್ ಪಕ್ಷದ ಜೇಮೀ ರಾಸ್ಕಿನ್, ಡೇವಿಡ್ ಸಿಸಿಲಿನ್ ಮತ್ತು ಟೆಡ್ ಲಿಯು ಮಹಾಭಿಯೋಗ ರಚಿಸಿದ್ದು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನ 211 ಸದಸ್ಯರು ಕರಡುವಿಗೆ ಬೆಂಬಲ ನೀಡಿದ್ದರು. ಅಮೆರಿಕದ ಇತಿಹಾಸದಲ್ಲೇ 2 ಬಾರಿ ಮಹಾಭಿಯೋಗಕ್ಕೆ ಡೊನಾಲ್ಡ್​ ಟ್ರಂಪ್ ಗುರಿಯಾಗಿದ್ದಾರೆ.

ಯಾರೂ ಕಾನೂನಿನ ಮೇಲಲ್ಲ, ಯುನೈಟೆಡ್ ಸ್ಟೇಟ್ಸ್ನ ಅಧ್ಯಕ್ಷರೂ ಅಲ್ಲ ಎಂಬುವುದನ್ನು ಸದನವು ತಿಳಿಸಿಕೊಟ್ಟಿದೆ ಎಂದು ಡೆಮಾಕ್ರಟಿಕ್ ಪಕ್ಷದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ರು.

ಕ್ಯಾಪಿಟಲ್ ಬಿಲ್ಡಿಂಗ್‌ ಘರ್ಷಣೆ: ಟ್ರಂಪ್ ಟ್ವಿಟ್ಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆಗಳು ಬಂದ್