ಹೈದರಾಬಾದ್​ ಪಾಲಿಕೆ ಚುನಾವಣೆ: ಸಚಿವ ಸುಧಾಕರ್ ಉಸ್ತುವಾರಿಯಲ್ಲಿ ರೆಡಿಯಾಯ್ತು ರಣತಂತ್ರ

  • KUSHAL V
  • Published On - 13:18 PM, 22 Nov 2020

ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಹ ಉಸ್ತುವಾರಿಯಾಗಿ ಬಿಜೆಪಿಯ ತಂಡವನ್ನು ಮುನ್ನಡೆಸಲಿರುವ ಕರ್ನಾಟಕದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನಗರದ ಬಿಜೆಪಿ ನಾಯಕರನ್ನು ಭಾನುವಾರ ಭೇಟಿಯಾದರು. ಸುಧಾಕರ್ ಅವರನ್ನು ದುಬ್ಬಾಕ ಕ್ಷೇತ್ರದ ಉಪಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಅಭ್ಯರ್ಥಿ ಎಂ.ರಘುನಂದನ್​ರಾವ್​ ಸ್ವಾಗತಿಸಿದರು.

ಹೈದರಾಬಾದ್​ನಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿಗಳಾದ ರಘುನಂದನ್​ರಾವ್​, ಪೆದ್ದಿರೆಡ್ಡಿ, ಧರ್ಮಾರಾವ್, ಚಡ ಸುರೇಶ್​ ರೆಡ್ಡಿ ಅವರನ್ನು ಭೇಟಿಯಾದ ಸುಧಾಕರ್, ವಿವಿಧ ಚುನಾವಣಾ ಕಾರ್ಯತಂತ್ರಗಳನ್ನು ಚರ್ಚಿಸಿದರು. ರಘುನಂದನ್​ರೊಂದಿಗಿರುವ ಚಿತ್ರವನ್ನು ಟ್ವೀಟ್​ ಮಾಡಿರುವ ಸುಧಾಕರ್ ತೆಲಂಗಾಣದ ಭ್ರಷ್ಟ ಟಿಆರ್​ಎಸ್​ ಸರ್ಕಾರದ ಅಂತ್ಯಕ್ಕೆ ದುಬ್ಬಾಕ ಕ್ಷೇತ್ರದಲ್ಲಿ ನಮ್ಮ ಪಕ್ಷವು ಸಾಧಿಸಿದ ಜಯವೇ ಮುನ್ನುಡಿಯಾಗಲಿದೆ. ತೆಲಂಗಾಣದ ಜನರು ಬಿಜೆಪಿಗೆ ಆಶೀರ್ವದಿಸಲಿದ್ದಾರೆ ಎಂದು ಹೇಳಿದ್ದಾರೆ.