ನಿಯಂತ್ರಣ ತಪ್ಪಿ ನಾಲೆಗೆ ನುಗ್ಗಿದ ಕಾರು.. ಮುಂದೇನಾಯ್ತು?

ಮೈಸೂರು: ನಿಯಂತ್ರಣ ತಪ್ಪಿ ಕಾರು ನಾಲೆಗೆ ನುಗ್ಗಿದ ಘಟನೆ ನಂಜನಗೂಡು ತಾಲೂಕಿನ ಕಡಜಟ್ಟಿ ಬಳಿ ನಡೆದಿದೆ. ಕಾರು ಚಾಲಕ ನಿಯಂತ್ರಣ ತಪ್ಪಿ ಕಬಿನಿ ನಾಲೆಗೆ ಕಾರು ಇಳಿಸಿದ್ದಾನೆ.

ಅದೃಷ್ಟವಶಾತ್ ನಾಲೆಗೆ ಬೀಳದೆ ಅರ್ಧದಲ್ಲೇ ಕಾರು ನಿಂತಿದೆ. ಕಾರಿನಲ್ಲಿದ್ದ ಐವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೆಡಿಯಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Related Tags:

Related Posts :

Category:

error: Content is protected !!