ಮಹಾಮಾರಿ ಮಧ್ಯೆ ಗಾಂಜಾ ಮಾರೋಕೆ ಬಂದವ ಖಾಕಿ ಬಲೆಗೆ, ಎಲ್ಲಿ?

ಬೆಂಗಳೂರು: ನಗರದಲ್ಲಿ ಗಾಂಜಾ ಮಾರುತ್ತಿದ್ದವನನ್ನ ಸೆರೆ ಹಿಡಿಯುವಲ್ಲಿ ಯಶವಂತಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಒಡಿಶಾ ಮೂಲದ ಗೋಪಿನಾಥ್​ ಬಾರಾಹ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ನಗರದಲ್ಲಿ ಗಾಂಜಾ ಮಾರುತ್ತಿದ್ದ ಗೋಪಿನಾಥ್​ನನ್ನು ಹಿಡಿಯಲು ಯಶವಂತಪುರ ಪೊಲೀಸರು ತಂಡವೊಂದನ್ನು ರಚಿಸಿ ಆತನಿಗೆ ಬಲೆ ಬೀಸಿದ್ದರು. ಇದೀಗ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರೋ ಪೊಲೀಸರು ಆರೋಪಿಯಿಂದ 8 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

Related Tags:

Related Posts :

Category:

error: Content is protected !!