ಸರ್ಚ್ ವಾರಂಟ್ ಹಿಡಿದು ಆದಿತ್ಯ ಆಳ್ವಾ ಇರುವ ಜಾಗಕ್ಕೆ ತೆರಳಿದ ಸಿಸಿಬಿ ಪೊಲೀಸರು

ಬೆಂಗಳೂರು: ಸ್ಯಾಂಡಲ್​ವುಡ್​ ಜೊತೆಗಿನ ಡ್ರಗ್ಸ್​ ನಂಟು ಪ್ರಕರಣದಲ್ಲಿ ಆರನೇ ಆರೋಪಿಯಾಗಿರುವ ಅದಿತ್ಯ ಆಳ್ವಾ ಇದುವರೆಗೂ ತಲೆಮರಿಸಿಕೊಂಡಿದ್ದಾರೆ. ಈ ಮಧ್ಯೆ, ಆದಿತ್ಯ ಆಳ್ವಾ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಆತನ ವಿರುದ್ಧ ಸಿಸಿಬಿ ಪೊಲೀಸರು ರೆಡ್​​ ಕಾರ್ನರ್​ ನೋಟಿಸ್ ಜಾರಿ ಮಾಡಿದ್ದರು. ಆದ್ರೆ, ಇದೀಗ ಆದಿತ್ಯ ಆಳ್ವಾನ ವೇರ್​ ಎಬೌಟ್ಸ್​ ಬಗ್ಗೆ ಸಿಸಿಬಿ ಪೊಲೀಸರಿಗೆ ಸುಳಿವು ದೊರೆತಿದೆ.

ತನ್ನ ಅಕ್ಕನ ಪತಿಯಾದ ವಿವೇಕ್ ಒಬೆರಾಯ್ ವಾಸಿಸುವ ಮುಂಬೈ ನಿವಾಸದಲ್ಲಿ ಆದಿತ್ಯ ಆಳ್ವಾ ಆಶ್ರಯ ಪಡೆದಿದ್ದಾನೆ ಎಂಬುದು ಸಿಸಿಬಿ ಪೊಲೀಸರ ಬಲವಾದ ಗುಮಾನಿ. ಹಾಗಾಗಿ, ಕೋರ್ಟ್ ಮೂಲಕ ಸರ್ಚ್ ವಾರಂಟ್ ಪಡೆದು ಸಿಸಿಬಿ ಪೊಲೀಸರು ವಿವೇಕ್ ಒಬೆರಾಯ್ ಮುಂಬೈ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅಲ್ಲೀಗ ಆದಿತ್ಯ ಆಳ್ವಾಗಾಗಿ ಶೋಧ ನಡೆಸಿದ್ದಾರೆ.

ಸಿಸಿಬಿ ಇನ್​ಸ್ಪೆಕ್ಟರ್ ಮಹಾನಂದ್, ರವಿ ಪಾಟೀಲ್ ನೇತೃತ್ವದ ತಂಡದಿಂದ ಶೋಧ ನಡೆದಿದೆ. ಜುಹೂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಿವುಡ್​ ನಟ ವಿವೇಕ್ ಒಬೆರಾಯ್ ನಿವಾಸ ಇದೆ.
ಆದಿತ್ಯ ಆಳ್ವಾ ಬಗ್ಗೆ ನಾವೇನೂ ಹೇಳುವುದಿಲ್ಲ -ವಿವೇಕ್ ಒಬೆರಾಯ್, ಪ್ರಿಯಾಂಕಾ ಆಳ್ವಾ ಅಡ್ಡಿ

Related Tags:

Related Posts :

Category:

error: Content is protected !!