ಮುಂದೆ ಹುಟ್ಟಲಿರುವ ಮಗುವಿನ ಲಿಂಗವನ್ನು ಹೀಗೂ ಹೇಳಬಹುದಾ?

ದುಬೈ ಮೂಲದ ದಂಪತಿಗಳು ಮುಂದೆ ಹುಟ್ಟಲಿರುವ ತಮ್ಮ ಮಗುವಿನ ಲಿಂಗವನ್ನು ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಬಹಿರಂಗಪಡಿಸಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.
 
ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಅನಸ್ ಮಾರ್ವಾ ಮತ್ತು ಅಸಲಾ ಮಾಲೆಹ್ ಎಂಬ ದಂಪತಿಗಳು ಈ ಕೆಲಸ ಮಾಡಿದ್ದು, ತಮ್ಮ ಕುಟುಂಬಸ್ಥರು, ಗೆಳೆಯರು ಹಾಗೂ ಮಗಳೊಂದಿಗೆ ಬುರ್ಜ್ ಖಲೀಫಾ ಕಟ್ಟಡದ ಬಳಿ ಹಾಜರಿದ್ದರು. ಬುರ್ಜ್ ಖಲೀಫಾ ಕಟ್ಟಡದಲ್ಲಿ 10 ರ ಎಣಿಕೆ ನಂತರ, ಕಟ್ಟಡದ ಮೇಲೆ ನೀಲಿ ಬಣ್ಣದಲ್ಲಿ ದಂಪತಿಗಳ ಮುಂದಿನ ಮಗು ಗಂಡು ಎಂಬುದನ್ನು ಪ್ರದರ್ಶಿಸಲಾಯಿತು.
 
2000 ಇಸವಿಯ ಬಳಿಕ ಲಿಂಗ ಬಹಿರಂಗ ಪಾರ್ಟಿಗಳು ಜಗತ್ತಿನಾದ್ಯಂತ ಬಹಳ ಸಾಮಾನ್ಯವಾಗುತ್ತಿವೆ. ಈ ದಿನಗಳಲ್ಲಿ ದಂಪತಿಗಳು ತಮ್ಮ ಹುಟ್ಟಲಿರುವ ಮಗುವಿನ ಲಿಂಗವನ್ನು ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಬಹಿರಂಗಪಡಿಸುವಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ

Related Tags:

Related Posts :

Category: