ಚೀನಾ ಮೇಲೆ ಮತ್ತೊಂದು ನೈಸರ್ಗಿಕ ವಿಕೋಪ, ಭೂಕಂಪಕ್ಕೆ ನಾಲ್ವರು ಬಲಿ

ಬೀಜಿಂಗ್​: ಡ್ರ್ಯಾಗನ್​ ನಾಡು, ಕೊರೊನಾ ತವರೂರು ಚೀನಾದಲ್ಲಿ ಮತ್ತೊಂದು ನೈಸರ್ಗಿಕ ವಿಕೋಪ ಉಂಟಾಗಿದೆ. ಈಗಾಗಲೇ ಹೆಮ್ಮಾರಿ ಕೊರೊನಾ ಕ್ರಿಮಿಯಿಂದ ಸಾವಿರಾರು ಜನ ಮೃತಪಟ್ಟಿದ್ದು, ಈಗೀಗ ಚೀನಾದಲ್ಲಿ ಕೊರೊನಾ ಅಬ್ಬರ ಕಡಿಮೆಯಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದ್ದು, ಕನಿಷ್ಠ ನಾಲ್ವರು ಬಲಿಯಾಗಿದ್ದಾರೆ. ಘಟನೆಯಲ್ಲಿ 24 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5 ದಾಖಲಾಗಿದೆ.

Related Posts :

Category:

error: Content is protected !!