ಚೆನ್ನೈ ವಿಮಾನ ನಿಲ್ದಾಣದಲ್ಲಿ ರೂ 1.6 ಕೋಟಿ ಮೌಲ್ಯದ ಎಕ್ಟೇಸಿ ಪಿಲ್​ಗಳು ಜಪ್ತು

ಚೆನ್ನೈ ಮೀನಂಬಕ್ಕಂ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್​ಗಳಲ್ಲಿನ ಅಂಚೆ ಕಚೇರಿಗಳಿಂದ ಎರಡು ಪೋಸ್ಟಲ್ ಪಾರ್ಸೆಲ್​ಗಳ ಮೂಲಕ ರವಾನಿಸಲಾಗಿದ್ದ ಸುಮಾರು ರೂ 1.6 ಕೋಟಿ ಬೆಲೆಬಾಳುವ ಎಕ್ಟೇಸಿ ಮಾತ್ರೆಗಳನ್ನು ಹಾಗೂ ಇತರ ಮಾದಕ ವಸ್ತುಗಳನ್ನು ಇಂದು ಜಪ್ತಿ ಮಾಡಿದರು. ಈ ಕುರಿತು ಅಧಿಕಾರಿಗಳು ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿ ವಿವರಣೆ ನೀಡಿದ್ದಾರೆ.

ವಿದೇಶಗಳಿಂದ ಬಂದಿದ್ದ ಪಾರ್ಸೆಲ್​ಗಳ ಮೇಲೆ ಅಧಿಕಾರಿಗಳಿಗೆ ಅನುಮಾನ ಉಂಟಾಗಿ ಅವುಗಳನ್ನು ತೆರೆದು ನೋಡುವ ನಿರ್ಧಾರ ಮಾಡಿದರು. ಅವರು ಮೊದಲ ಓಪನ್ ಮಾಡಿದ್ದು ಬೆಲ್ಜಿಯಂನಿಂದ ಬಂದಿದ್ದ ಪಾರ್ಸೆಲನ್ನು. ಆ ಪೆಟ್ಟಿಗೆಯಲ್ಲಿ ಅವರಿಗೆ ಕಂಡಿದ್ದು ಕೃತಕ ಚಿರತೆಯ ಚರ್ಮದಿಂದ ಮಾಡಿದ ಬಟ್ಟೆಯಲ್ಲಿ ಸುತ್ತಿದ್ದ ಕೆಲವು ವಸ್ತುಗಳು. ನಂತರ ಆ ವಸ್ತುಗಳನ್ನು ಕತ್ತರಿಸಿ ಓಪನ್ ಮಾಡಿದಾಗ ಅವುಗಳಲ್ಲಿ ರೆಡ್​ಬುಲ್ಹಾಗೂ ಹೈನೇಕಿಎಂದು ಬರೆದಿದ್ದ ಎರಡು ಕಿತ್ತಳೆ ಬಣ್ಣದ ಪೊಟ್ಟಣಗಳು ಸಿಕ್ಕವು ಮತ್ತು ಅವುಗಳಲ್ಲಿ 4,060 ಎಕ್ಟೇಸಿ ಮಾತ್ರೆಗಳನ್ನು ಪ್ಯಾಕ್ ಮಾಡಲಾಗಿತ್ತು. ಅಧಿಕಾರಿಗಳ ಪ್ರಕಾರ, ಈ ಪಿಲ್​ಗಳ ಮೌಲ್ಯ ರೂ 1.2 ಕೋಟಿಗಳಷ್ಟಾಗಿದ್ದು ಎನ್ ಡಿ ಪಿ ಎಸ್ ಆ್ಯಕ್ಟ್ 1985ರ ಅನ್ವಯ ಅವುಗಳನ್ನು ಜಪ್ತಿ ಮಾಡಲಾಯಿತು.

ಈ ಪಾರ್ಸೆಲ್ ತಮಿಳು ನಾಡು ರಾಜ್ಯದ ಕಂಚೀಪುರಂನಲ್ಲಿರವ ಒಂದು ಗ್ರಾಮದ ವ್ಯಕ್ತಿಗೆ ಕಳಿಸಲಾಗಿತ್ತು. ಆದರೆ, ಪೊಲೀಸರ ನೆರವು ಪಡೆದು ಆ ವ್ಯಕ್ತಿಯ ಪತ್ತೆ ಹಚ್ಚಲು ಪ್ರಯತ್ನಿಸಿದಾಗ ಅದೊಂದು ಸುಳ್ಳು ವಿಳಾಸ ಅನ್ನೋದು ಗೊತ್ತಾಯಿತೆಂದು ಅಧಿಕಾರಿಗಳು ಹೇಳಿದರು.

ಅದಾದ ಮೇಲೆ ನೆದರ್ಲ್ಯಾಂಡ್​ನಿಂದ ಬಂದ ಪಾರ್ಸೆಲನ್ನು ತೆರೆಯಲಾಗಿ ಅದರಲ್ಲಿ, ಗಾಳಿ ತುಂಬಿ ಚಿಕ್ಕ ಸ್ವಿಮ್ಮಿಂಗ್ ಪೂಲ್​ನಂತೆ ಉಪಯೋಗಿಸುವ ಪ್ಲಾಸ್ಟಿಕ್ ಉಪಕರಣ, ಗಮ್ಮಿ ಬೇರ್ ಪ್ಯಾಕೆಟ್​ಗಳು ದೊರೆತವು. ಈ ಪ್ಯಾಕೆಟ್​ಗಳನ್ನು ಒಡೆದಾಗ ಮೈ ಬ್ರ್ಯಾಂಡ್ಮಾರ್ಕಿನ ಬುರುಡೆಯಾಕಾರದ 1.150 ಪಿಲ್​ಗಳು ದೊರೆತವು. ನಂತರ ಪೂಲನ್ನು ಸೀಳಿದಾಗ ಎಮ್ ಡಿ ಎಮ್ ಎ ಸ್ಫಟಿಕಗಳು ಹಾಗೂ ಮಿಥಾಗುವಲೋನ್ ಎಂದು ಕರೆಯಲ್ಪಡುವ ಮಾದಕ ಡ್ರಗ್ ಸಿಕ್ಕವು. ಅಧಿಕಾರಿಗಳ ಪ್ರಕಾರ ಇವುಗಳ ಒಟ್ಟು ಮೌಲ್ಯ ಸುಮಾರು ರೂ 45 ಲಕ್ಷ.

ಎರಡು ಬಾಕ್ಸ್​ಗಳಿಂದ 5,210 ಪಿಲ್ಸ್, 100 ಗ್ರಾಮ್ ಎಮ್ ಡಿ ಎಮ್ ಎ ಸ್ಫಟಿಕಗಳು, ಹಾಗೂ ಒಂದು ಗ್ರಾಮಿನಷ್ಟು ಮಿಥಾಗುವಲೋನ್ ದೊರೆತಿವೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

Related Tags:

Related Posts :

Category: