Career Guidance: ದ್ವಿತೀಯ ಪಿಯುಸಿ ನಂತರ ಬಿಎಸ್ಸಿ ಫಾರ್ಮ್ ಸೈನ್ಸ್ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ
ಪಿಯುಸಿಯಲ್ಲಿ ವಿಜ್ಞಾನ ಓದಿದ ವಿದ್ಯಾರ್ಥಿಗಳು ತಾವು ಮುಂದೆ ಬಿಎಸ್ಸಿ ಫಾರ್ಮ್ ಸೈನ್ಸ್ನಲ್ಲಿ ಉನ್ನತ ವ್ಯಾಸಾಂಗ ಮಾಡಬೇಕೆಂಬ ಇಚ್ಚೆ ಇದ್ದರೇ ಇಲ್ಲಿದೆ ಮಾಹಿತಿ.
ಪಿಯುಸಿಯಲ್ಲಿ ವಿಜ್ಞಾನ (PUC Science) ಓದಿದ ವಿದ್ಯಾರ್ಥಿಗಳು ತಾವು ಮುಂದೆ ಬಿಎಸ್ಸಿ ಫಾರ್ಮ್ ಸೈನ್ಸ್ (BSC Farm Science) ಮಾಡಬೇಕೆಂಬ ಆಸೆ ಇರುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳು ಯಾವ ರೀತಿಯಾಗಿ ಪಿಯುಸಿಯಲ್ಲಿ ಇರುವಾಗಲೆ ತಯಾರಿ ಮಾಡಿಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ. ಪಿಯುಸಿ ವಿಜ್ಞಾನ ಓದಿದ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಿಯುಸಿಯಲ್ಲಿ PCMB ವಿಷಯಗಳನ್ನು ಆಯ್ದುಕೊಂಡಿರಬೇಕು. ಈ ವಿಷಯಗಳಲ್ಲಿ ಚೆನ್ನಾಗಿ ಅಭ್ಯಾಸ ಮಾಡಿ ಉತ್ತಮ ಅಂಕ ಪಡೆದುಕೊಂಡರೆ ಬಿಎಸ್ಸಿ ಫಾರ್ಮ್ ಸೈನ್ಸ್ ಮಾಡಬಹುದು.
ಬಿಎಸ್ಸಿ ಫಾರ್ಮ್ ಸೈನ್ಸ್ನಲ್ಲಿ ಯಾವೆಲ್ಲಾ ಕೋರ್ಸ್ ಬರುತ್ತವೆ
1) ಬಿಎಸ್ಸ್ಸಿ ಅಗ್ರಿಕಲ್ಚರ್ 2) ಬಿಎಸ್ಸ್ಸಿ ಹೊರಟಿಕಲ್ಚರ್ 3) ಬಿಎಸ್ಸ್ಸಿ ರೇಷ್ಮೆ 4) ಬಿಎಸ್ಸ್ಸಿ ಫೊರೆಸ್ಟರಿ 5) ಬಿಎಸ್ಸ್ಸಿ ಮೀನುಗಾರಿಕೆ
ಪ್ರವೇಶ ಮಾಹಿತಿ 1. ಈಗಾಗಲೆ ತಿಳಿಸಿರುವಂತೆ ದ್ವಿತಿಯ ಪಿಯುಸಿ ಸೈನ್ಸ್ನಲ್ಲಿ (PCMB) 2. KEA-KCET ಪರೀಕ್ಷೆ ಬರಿಯಬೇಕು 3. ರೈತರ ಮಕ್ಕಳಿಗಾಗಿ ಶೇ50 ರಷ್ಟು ಮೀಸಲಾತಿ ಇರುತ್ತದೆ. ಅದನ್ನು ಕೃಷಿಕರ ಕೋಟಾ ಎಂದು ಕರೆಯಲಾಗುತ್ತದೆ. ಅದಕ್ಕಾಗಿ ಅವರು ಕೃಷಿ ಭೂಮಿಯನ್ನು ಹೊಂದಿರಬೇಕು. 4. ಕೃಷಿ ಕೋಟಾದಡಿ 200 ಅಂಕಗಳ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಾರೆ. ಕೃಷಿ ಉಪಕರಣಗಳು, ಗೊಬ್ಬರಗಳು ವಿವಿಧ ಕೃಷಿ ಸಂಬಂಧಿತ 50 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೆ 4 ಅಂಕಗಳು ಒಟ್ಟು 200 ಅಂಕಗಳು 5. ಕೃಷಿ ಭೂಮಿ ಇರದೆ ಇರುವವರು KEA-KCET ಪರೀಕ್ಷೆ ಮುಖಾಂತರ ಕೃಷಿ ಕೋರ್ಸ್ಗಳಿಗೆ ಪ್ರವೇಶ ಪಡೆಯಬಹುದು. 6. ಇನ್ನೊಂದು ICAR ಪರೀಕ್ಷೆ ಬರೆಯಬಹುದು ಅದು ರಾಷ್ಟ್ರಮಟ್ಟದ ಪರೀಕ್ಷೆ. ಭಾರತಾದ್ಯಂತ ಯಾವ ಕೃಷಿ ವಿಶ್ವವಿದ್ಯಾಲಯದಲ್ಲೂ ಸೀಟ್ ಪಡೆಯಬಹದು.
ಆಯ್ಕೆ ವಿಧಾನ ಪಿಯು ಬೋರ್ಡ್ ಪರೀಕ್ಷೆಯ PCMB ಅಂಕಗಳು ಮತ್ತು KCET ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು equal proportions ಒಂದು ರ್ಯಾಂಕ್ ಪಟ್ಟಿಯನ್ನು ಬಿಡುತ್ತಾರೆ. ಆ ರ್ಯಾಂಕ್ ಆದಾರದ ಮೇಲೆ ಸೀಟು ತೆಗೆದುಕೊಳ್ಳಬೇಕು.
ಬಿಎಸ್ಸಿ ಫಾರ್ಮ್ ಸೈನ್ಸ್ ಮುಗಿದ ನಂತರ ಏನು?
1. ಸ್ನಾತೋತ್ತರ ಪದವಿ ವ್ಯಾಸಂಗ ಮಾಡಬಹುದು. 2. IBPS- ಬ್ಯಾಂಕ್ ಪರೀಕ್ಷೆ ಬರೆದು filed officer ಆಗಬಹದು 3. ಕೃಷಿ ಅಧಿಕಾರಿ ಆಗಬಹದು 4. ABM- Agri business management ಮಾಡಿ ಖಾಸಗಿ ವಲಯದಲ್ಲಿ ಸೇವೆ ಮಾಡಬಹದು 5. ಸ್ಪರ್ಧಾತ್ಮಕ ಪರೀಕ್ಷೆ ಬರೆಯಬಹದು 6. ಸ್ವತಃ ಕೃಷಿ ಉದ್ಯಮ ಮಾಡಬಹದು
ಸಚ್ಚಿನ್ ಕಟ್ಟಿಮನಿ ಬಿಎಸ್ಸಿ ಅಗ್ರಿಕಲ್ಚರ್ PGDM-ABM ICAR-NAARM, ಹೈದ್ರಾಬಾದ್
Published On - 3:01 pm, Sat, 18 June 22