AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPSC Examination 2023: ಯುಪಿಎಸ್​ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಲು ಇಲ್ಲಿದೆ ಟಿಪ್ಸ್

ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಮಾನ್ಯವಾಗಿ ಒಬ್ಬ ಆಕಾಂಕ್ಷಿಯು ಕನಿಷ್ಟ 10 ರಿಂದ 12 ತಿಂಗಳು ಸ್ಥಿರತೆಯಿಂದ ಓದಿರಬೇಕು. ಇಷ್ಟೆಲ್ಲಾ ಇದ್ದರೂ, ಇದು ಕಡಿಮೆ ಸಮಯದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಿಲ್ಲ ಎಂದೇನಿಲ್ಲ. ನೀವು ನಿಮ್ಮ ಎಲ್ಲಾ ಸಮಯವನ್ನು ಓದುವುದಕ್ಕೆ ಮೀಸಲಿಟ್ಟರೆ ನೀವು ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗವ ಸಾಧ್ಯತೆ ಇದೆ.

UPSC Examination 2023: ಯುಪಿಎಸ್​ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಲು ಇಲ್ಲಿದೆ ಟಿಪ್ಸ್
ಯುಪಿಎಸ್​ಸಿ ಪರೀಕ್ಷೆImage Credit source: NCET
Digi Tech Desk
|

Updated on:Feb 12, 2023 | 6:44 PM

Share

UPSC Examination 2023: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನಾಗರಿಕ ಸೇವೆಗಳ ಪರೀಕ್ಷೆಯು ಭಾರತದಲ್ಲಿ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾಗಿದೆ. 2023 ರ ಪರೀಕ್ಷೆಯನ್ನು ಇದೇ ಮೇ 28 ರಂದು ನಿಗದಿಪಡಿಸಲಾಗಿದ್ದು, ಫೆಬ್ರವರಿ 1 ರಂದು ಪ್ರಾರಂಭವಾದ ನೋಂದಣಿಗಳೊಂದಿಗೆ ಆಕಾಂಕ್ಷಿಗಳು ಈಗಾಗಲೇ ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಭಾರತೀಯ ಆಡಳಿತ ಸೇವೆ (IAS),  IPS  ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ  ಯಶಸ್ವಿಯಾಲು ಕಠಿಣ ಪರಿಶ್ರಮ ಮತ್ತು ಉತ್ತಮ ತಯಾರಿ ಮಾಡಿಕೊಳ್ಳಲೇಬೇಕು.

UPSC ತಯಾರಿ ಸುಲಭದ ಕೆಲಸವಲ್ಲ. ಇದಕ್ಕೆ ನಿಷ್ಠೆ, ಏಕಾಗ್ರತೆ ಮತ್ತು ಮನೋಸ್ಥೈರ್ಯ ಇದ್ದು ಕಷ್ಟ ಪಟ್ಟು ಪ್ರಯತ್ನಿಸಬೇಕು ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳುಬೇಕು. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಮಾನ್ಯವಾಗಿ ಒಬ್ಬ ಆಕಾಂಕ್ಷಿಯು ಕನಿಷ್ಟ 10 ರಿಂದ 12 ತಿಂಗಳು ಸ್ಥಿರತೆಯಿಂದ ಓದಬೇಕು. ಇಷ್ಟೆಲ್ಲಾ ಇದ್ದರೂ, ಕಡಿಮೆ ಸಮಯದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಿಲ್ಲ ಎಂದೇನಿಲ್ಲ. ನೀವು ನಿಮ್ಮ ಎಲ್ಲಾ ಸಮಯವನ್ನು ಓದುವುದಕ್ಕೆ ಮೀಸಲಿಟ್ಟರೆ ನೀವು ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು.

ಒಬ್ಬ ಅಭ್ಯರ್ಥಿಯು ಒಂದು ದಿನದಲ್ಲಿ ಕನಿಷ್ಠ 12 ಗಂಟೆಗಳ ಕಾಲ ತನ್ನನ್ನು ತಾನು ಸಂಪೂರ್ಣವಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಮೊದಲಿಗೆ UPSC ಪರೀಕ್ಷಾ ಪಠ್ಯಕ್ರಮದಲ್ಲಿ ನಿಮಗೆ ಈಗಾಗಲೇ ತಿಳಿದಿರುವ ವಿಷಯಗಳೇ ಇರುತ್ತದೆ. ಹಾಗಾಗಿ ಗಾಬರಿಯಾಗಬೇಡಿ. ಪಠ್ಯ ಕ್ರಮವನ್ನು ಬರೆದು ಅದರಲ್ಲಿ ನಿಮಗೆ ಗೊತ್ತಿರುವ ವಿಷಯ ಮತ್ತೆ ಕಠಿಣ ವಿಷಯಗಳ ಪಟ್ಟಿ ಮಾಡಿ. ಅಲ್ಲದೇ ಆ ವಿಷಯಗಳನ್ನು ಓದಲು ಪ್ರಾರಂಭಿಸಿ. ನಂತರ ನಿಮಗೆ ಈಗಾಗಲೇ ಅಲ್ಪ ಸ್ವಲ್ಪ ತಿಳುವಳಿಕೆಯಿರುವ ವಿಷಯಗಳನ್ನ ಓದಿ. ಒಂದು ಬಾರಿ ಇಡೀ ಪಠ್ಯಕ್ರಮವನ್ನು ಓದಿದ ನಂತರ  ವಿಶ್ರಾಂತಿ ಪಡೆದುಕೊಳ್ಳಿ. ಬಳಿಕ ಪಠ್ಯಕ್ರಮದಲ್ಲಿರುವ ವಿಷಯಗಳ ಪ್ರಕಾರ ಓದಿ, ಹೀಗೆ ಓದಿದ್ದೇನ್ನೇ ಪುನಃ-ಪುನಃ ಓದಿ ವಿಷಯಗಳಲ್ಲಿ ಕರಗತ ಪಡಿಸಿಕೊಳ್ಳಿ

UPSC 30 ದಿನಗಳ ತಂತ್ರ

ಈ ಒಂದು ತಿಂಗಳು ಅಥವಾ 30-ದಿನಗಳ ಅವಧಿಯಲ್ಲಿ ನಿಮ್ಮ ಬದ್ಧತೆಯ ಜೊತೆಗೆ ತಯಾರಿಯಲ್ಲಿ ನಿಮ್ಮ ಸ್ಥಿರತೆಯ ಅಗತ್ಯವಿರುತ್ತದೆ. ಕೆಳಗೆ 30 ದಿನಗಳ ಅಧ್ಯಯನ ವೇಳಾಪಟ್ಟಿ ಇದೆ; ನಿಮ್ಮ ದಿನಚರಿಗೆ ಅನುಗುಣವಾಗಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.

ವಿಷಯ

  • ಆಧುನಿಕ ಇತಿಹಾಸ: ಓದಲು ತೆಗೆದುಕೊಳ್ಳಬೇಕಾದ ಸಮಯ 3 ದಿನ, ಪರಿಷ್ಕರಣೆ (Revision)ಗೆ 2 ದಿನ
  • ಮಧ್ಯಕಾಲೀನ ಇತಿಹಾಸ: ಓದಲು 1 ದಿನ, ಪರಿಷ್ಕರಣೆಗೆ 1 ದಿನ
  • ಪುರಾತನ ಇತಿಹಾಸ: ಓದಲು 2 ದಿನ, ಪರಿಷ್ಕರಣೆಗೆ 1 ದಿನ
  • ಭೂಗೋಳಶಾಸ್ತ್ರ: ಓದಲು 3 ದಿನ, ಪರಿಷ್ಕರಣೆಗೆ 2 ದಿನ
  • ಪರಿಸರ ಮತ್ತು ಪರಿಸರ ವಿಜ್ಞಾನ: ಓದಲು 3 ದಿನ, ಪರಿಷ್ಕರಣೆಗೆ 2 ದಿನ
  • ಭಾರತೀಯ ರಾಜಕೀಯ ಮತ್ತು ಆಡಳಿತ: ಓದಲು 3 ದಿನ, ಪರಿಷ್ಕರಣೆಗೆ 2 ದಿನ
  • ಅರ್ಥಶಾಸ್ತ್ರ: ಓದಲು 1 ದಿನ, ಪರಿಷ್ಕರಣೆಗೆ 1 ದಿನ
  • ಕಳೆದ 1 ವರ್ಷದ ಪ್ರಚಲಿತ ವಿದ್ಯಮಾನಗಳು: ಓದಲು 4 ದಿನ, ಪರಿಷ್ಕರಣೆಗೆ 4 ದಿನ
  • ಒಟ್ಟು: ಓದಲು 17 ದಿನ, ಪರಿಷ್ಕರಣೆಗೆ 13 ದಿನ

ಇದನ್ನೂ ಓದಿ: 3 ತಿಂಗಳಲ್ಲಿ ನೀಟ್ ಪರೀಕ್ಷೆಗೆ ತಯಾರಾಗುವುದು ಹೇಗೆ? ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್

ಕೊನೆಯದಾಗಿ, ಪ್ರಿಲಿಮ್ಸ್ ಪಾಸ್​ ಮಾಡುತ್ತೇನೆ ಎಂಬ ಆತ್ಮವಿಶ್ವಾಸ ನಿಮಗೆ ಇದ್ದರೆ,  ಮೇನ್ ಪರೀಕ್ಷೆಯ ತಯಾರಿಯನ್ನು ಪ್ರಾರಂಭಿಸಿ. ನೀವು ಎಲ್ಲಾ ವಿಷಯಗಳನ್ನು ಓದಿ ತಯಾರಾಗಿದ್ದೀರಿ ಎನ್ನುವುದಾದರೆ ಚಿಂತಿಸಬೇಡಿ. ನೀವು ಅತ್ಯುತ್ತಮವಾಗಿ ಪರೀಕ್ಷೆಯನ್ನು ಎದುರಿಸುತ್ತೀರಿ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Sun, 12 February 23