ಬೆಂಗಳೂರಿನ ಆರ್ಮಿ ಪಬ್ಲಿಕ್ ಸ್ಕೂಲ್ ಶಾಲೆಯಲ್ಲಿ ಹೈಬ್ರಿಡ್ ಲರ್ನಿಂಗ್ ತರಗತಿಯ ಉದ್ಘಾಟನೆ

|

Updated on: Jan 17, 2024 | 7:51 PM

ಈ ಕಾರ್ಯಕ್ರಮದ ಅಡಿಯಲ್ಲಿ ಹೈಬ್ರಿಡ್ ಕಲಿಕೆ, ಡಿಜಿಟಲ್ ಸಾಕ್ಷರತೆ, ಸ್ಕಿಲ್ ಹಬ್ ಇನಿಷಿಯೇಟಿವ್, ಹಣಕಾಸು ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮ, ಹದಿವಯಸ್ಸಿನ ಆರೋಗ್ಯ ಕಾರ್ಯಕ್ರಮ, ಆರೋಗ್ಯದ ಕಿಯೋಸ್ಕ್, ಸ್ಕೂಲ್ ಮತ್ತು ಕಾಲೇಜ್ ಕನೆಕ್ಟ್, ಆರ್ಟ್ ಕನೆಕ್ಟ್ ಮತ್ತು ವರ್ಚುಯಲ್ ಫೀಲ್ಡ್ ಟ್ರಿಪ್ ಗಳನ್ನು ಸಿ.ಬಿ.ಎಸ್.ಇ ಮತ್ತು ಮೈಕ್ರೊಸಾಫ್ಟ್ ಸಹಯೋಗದಲ್ಲಿ ಟ್ಯಾಗ್ ಅನುಷ್ಠಾನಗೊಳಿಸಲಿದೆ.

ಬೆಂಗಳೂರಿನ ಆರ್ಮಿ ಪಬ್ಲಿಕ್ ಸ್ಕೂಲ್ ಶಾಲೆಯಲ್ಲಿ ಹೈಬ್ರಿಡ್ ಲರ್ನಿಂಗ್ ತರಗತಿಯ ಉದ್ಘಾಟನೆ
ಆರ್ಮಿ ಪಬ್ಲಿಕ್ ಸ್ಕೂಲ್ ಎ.ಎಸ್.ಸಿ. ಸೆಂಟರ್
Follow us on

ಶಿಕ್ಷಣ ವಲಯದಲ್ಲಿ ಭಾರತದ ಅತ್ಯಂತ ದೊಡ್ಡ ಹೈಬ್ರಿಡ್ ಕಲಿಕಾ ಪರಿಹಾರಗಳ ಪೂರೈಕೆದಾರ ಟೆಕ್ ಆವಂತ್ ಗಾರ್ಡೆ ವಿಕ್ಟೋರಿಯಾ ಲೇಔಟ್, ಅಗರಂ ಪೋಸ್ಟ್, ಬೆಂಗಳೂರು 560007ರಲ್ಲಿರುವ ಆರ್ಮಿ ಪಬ್ಲಿಕ್ ಸ್ಕೂಲ್ ಎ.ಎಸ್.ಸಿ. ಸೆಂಟರ್ ಅಂಡ್ ಕಾಲೇಜ್ ನಲ್ಲಿ ಹೈಬ್ರಿಡ್ ಲರ್ನಿಂಗ್ ನೋಡ್ ತರಗತಿಗಳನ್ನು ಉದ್ಘಾಟಿಸಿತು. ಈ ಸಂದರ್ಭದಲ್ಲಿ ಭಾರತ ಹಾಗೂ ವಿಶ್ವದ ಮೂಲೆ ಮೂಲೆಯ ಶಿಕ್ಷಣ ತಜ್ಞರು, ಪರೀಕ್ಷಾ ಮಂಡಳಿಗಳು, ಅಧಿಕಾರಿಗಳು, ಟೆಕ್ನೊಕ್ರಾಟ್ಸ್ ಮತ್ತು ಗಣ್ಯರು ಉಪಸ್ಥಿತರಿದ್ದರು.

ಈ ಉದ್ಘಾಟನೆಯು ಹೈಬ್ರಿಡ್ ಮಾದರಿಯಲ್ಲಿ ನಡೆಯಿತು. ಸಿ.ಬಿ.ಎಸ್.ಇ., ಮೈಕ್ರೊಸಾಫ್ಟ್, ಟೆಕ್ ಆವಂತ್-ಗಾರ್ಡೆ ಮತ್ತು ಹಲವಾರ ಶಾಲೆಗಳ ಪಾಲುದಾರರು ಈ ಕಾರ್ಯಕ್ರಮದಲ್ಲಿ ವರ್ಚುಯಲ್ ರೀತಿಯಲ್ಲಿ ಭಾಗವಹಿಸಿದರು. ಮುಖ್ಯ ಅತಿಥಿ ಕಮ್ಯಾಂಡೆಂಟ್ ಎ.ಎಸ್.ಸಿ. ಸೆಂಟರ್ ಸೌಥ್, ಬ್ರಿಗೇಡಿಯರ್ ಅಜಯ್ ದುಗ್ಗಲ್ ಉದ್ಘಾಟಿಸಿದರು. ಪ್ರಾಂಶುಪಾಲರು, ಶಿಕ್ಷಕರು, ಪಿಟಿಎ ಸದಸ್ಯರು, ಇತರೆ ಶಾಲೆಗಳ ಪ್ರಾಂಶುಪಾಲರು ಮತ್ತು ಹಿತೈಷಿಗಳು ಕಾರ್ಯಕ್ರಮದಲ್ಲಿ ಸ್ವತಃ ಭಾಗವಹಿಸಿದ್ದರು.

ಸ್ವಾಗತ ಭಾಷಣದಲ್ಲಿ ಪ್ರಾಂಶುಪಾಲರಾದ ಸುನಿತಾ ಪಂಚನಾಥನ್, “ನಮ್ಮ ಸಂಸ್ಥೆಗೆ ಡಿಜಿಟಲ್ ಪರಿವರ್ತನೆ ಮತ್ತು ಹೈಬ್ರಿಡ್ ಕಲಿಕೆ ಅಳವಡಿಸಿಕೊಳ್ಳಲು ಸಾಧ್ಯವಾಗಿರುವುದು ಕನಸು ನನಸಾದಂತಾಗಿದೆ. ಇದು ಎಲ್ಲಿಯೇ ಆಗಲಿ, ಹೇಗೆಯೇ ಆಗಲಿ, ಯಾವುದೇ ಡಿವೈಸ್ ಮೂಲಕ ಕಲಿಸುವ ಅವಕಾಶ ನೀಡುತ್ತದೆ ಮತ್ತು ನಮ್ಮ ಶಾಲೆಯು ಲಾಕ್ ಡೌನ್ ನಿಂದ ರಕ್ಷಣೆ ನೀಡುತ್ತದೆ” ಎಂದರು.

ಮಿಲೆನಿಯಂ ಪ್ರಾರಂಭದಲ್ಲಿ ಡಿಜಿಟಲ್ ಪರಿವರ್ತನೆಯ ಮೂಲಕ ಶಿಕ್ಷಣ ಉಂಟಾಬೇಕು ಎನ್ನುವುದನ್ನು ಅರಿಯಲಾಯಿತು. ಜನರು ತರಗತಿಯ ನಾಲ್ಕು ಗೋಡೆಗಳ ಹಳೆಯ ಅಭ್ಯಾಸದಿಂದ ಹೊರಬರಲು ಟೈಮ್ ಲೈನ್ ಗಳು ಮತ್ತು ಡೆಡ್ ಲೈನ್ ಗಳನ್ನು ನಿಗದಿಪಡಿಸಿಕೊಳ್ಳುತ್ತಿದ್ದಾರೆ. ಕೋವಿಡ್ 19 ಸಾಂಕ್ರಾಮಿಕವು ಶಿಕ್ಷಣ ಜಗತ್ತನ್ನು ನಿಂತಲ್ಲೇ ಸ್ಥಗಿತಗೊಳಿಸಿದಾಗ ಜನರು ಪರ್ಯಾಯ ಪರಿಹಾರಗಳ ಅನ್ವೇಷಣೆ ಪ್ರಾರಂಭಿಸಿದರು. ಕೋವಿಡ್ ಪರಿಣಾಮ ಕಡಿಮೆಯಾದಂತೆ ಶಿಕ್ಷಣವು ಸಹಜ ಸ್ಥಿತಿಗೆ ಮರಳಿತು. ಕೋವಿಡ್- ಟೆಕ್ ಆವಂತ್ ಗಾರ್ಡೆ ನ್ಯೂಜಿಲೆಂಡ್ ನಿಂದ ಕೆನಡಾವರೆಗೆ 5 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಿದ್ದು ಅದರಲ್ಲಿ 2 ಲಕ್ಷ ಮಂದಿ ಭಾರತದಿಂದ ಬಂದವರಾಗಿದ್ದಾರೆ.

ಟೆಕ್ ಆವಂತ್-ಗಾರ್ಡೆ ಸಿಇಒ ಅಲಿ ಸೇಟ್, “ಈ ಹೈಬ್ರಿಡ್ ಮಾದರಿಯು ಡಿಜಿಟಲ್ ತೊಡಗಿಕೊಳ್ಳು ವಿಕೆಯೊಂದಿಗೆ ತರಗತಿಯ ಹಾಗೂ ರಿಮೋಟ್ ಕಲಿಕೆಯ ಶ್ರೇಷ್ಠತೆಯನ್ನು ಸಂಯೋಜಿಸುತ್ತದೆ. ಇದು ವಿದ್ಯಾರ್ಥಿ ಕೇಂದ್ರಿತ ವಿಧಾನಗಳ ಮೂಲಕ ಕಲಿಕೆಯನ್ನು ಉನ್ನತೀಕರಿಸುತ್ತದೆ. ಫಲಿತಾಂಶವು ಪ್ರಯೋಗಾತ್ಮಕ ಕಲಿಕೆ, ಅಡಾಪ್ಟಿವ್ ಕಲಿಕೆ, ಸಹಯೋಗದ ಕಲಿಕೆ, ಪ್ರಾಜೆಕ್ಟ್ ಆಧರಿತ ಕಲಿಕೆ, ವೈಯಕ್ತಿಕಗೊಳಿಸಿದ ಕಲಿಕೆ ಮತ್ತು ಅರಿವಿನ ಕಲಿಕೆ ಒಳಗೊಂಡಿದೆ” ಎಂದರು.

ಈ ಕಾರ್ಯಕ್ರಮದ ಅಡಿಯಲ್ಲಿ ಹೈಬ್ರಿಡ್ ಕಲಿಕೆ, ಡಿಜಿಟಲ್ ಸಾಕ್ಷರತೆ, ಸ್ಕಿಲ್ ಹಬ್ ಇನಿಷಿಯೇಟಿವ್, ಹಣಕಾಸು ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮ, ಹದಿವಯಸ್ಸಿನ ಆರೋಗ್ಯ ಕಾರ್ಯಕ್ರಮ, ಆರೋಗ್ಯದ ಕಿಯೋಸ್ಕ್, ಸ್ಕೂಲ್ ಮತ್ತು ಕಾಲೇಜ್ ಕನೆಕ್ಟ್, ಆರ್ಟ್ ಕನೆಕ್ಟ್ ಮತ್ತು ವರ್ಚುಯಲ್ ಫೀಲ್ಡ್ ಟ್ರಿಪ್ ಗಳನ್ನು ಸಿ.ಬಿ.ಎಸ್.ಇ ಮತ್ತು ಮೈಕ್ರೊಸಾಫ್ಟ್ ಸಹಯೋಗದಲ್ಲಿ ಟ್ಯಾಗ್ ಅನುಷ್ಠಾನಗೊಳಿಸಲಿದೆ.