ಸಂಸ್ಕೃತ ಕಲಿಕೆಗಾಗಿ ಲಿಟಲ್ ಗುರು ಆ್ಯಪ್ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಬೆಂಗಳೂರು ಮೂಲದ ಗಾಮ್ಯಾಪ್ ಸ್ಪೋರ್ಟ್ಸ್ ವಿಜ್ ಎಂಬ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದ್ದು, ಸಂಸ್ಕೃತವನ್ನು ಸುಲಭವಾಗಿ ಕಲಿಸುವ ಸಲುವಾಗಿ ಕೆಲ ಮನರಂಜನೆಗಳನ್ನು ನೀಡುವ ಗೇಮ್​ಗಳೂ ಲಭ್ಯವಿರುವಂತೆ ನೋಡಿಕೊಳ್ಳಲಾಗಿದೆ.

  • TV9 Web Team
  • Published On - 15:07 PM, 13 Apr 2021
ಸಂಸ್ಕೃತ ಕಲಿಕೆಗಾಗಿ ಲಿಟಲ್ ಗುರು ಆ್ಯಪ್ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಲಿಟಲ್​ ಗುರು

ದೆಹಲಿ: ಭಾರತ ಸರ್ಕಾರ ಇದೇ ಮೊಟ್ಟಮೊದಲ ಬಾರಿಗೆ ಸಂಸ್ಕೃತ ಕಲಿಕೆಯನ್ನು ಉತ್ತೇಜಿಸುವ ಸಲುವಾಗಿ ಲಿಟಲ್ ಗುರು ಎಂಬ ಆ್ಯಪ್ ಒಂದನ್ನು ಲೋಕಾರ್ಪಣೆಗೊಳಿಸಿದೆ. ಭಾರತದ ಪುರಾತನ ಭಾಷೆ ಎಂದೇ ಕರೆಯಲ್ಪಡುವ ಸಂಸ್ಕೃತ ಕಲಿಕೆಗೆ ಇದು ಸಹಕಾರಿಯಾಗಲಿದ್ದು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್) ಇದನ್ನು ರಚಿಸಿ ಲಿಟಲ್​ ಗುರು ಎಂದು ನಾಮಕರಣ ಮಾಡಿದೆ.

ಬೆಂಗಳೂರು ಮೂಲದ ಗಾಮ್ಯಾಪ್ ಸ್ಪೋರ್ಟ್ಸ್ ವಿಜ್ ಎಂಬ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದ್ದು, ಸಂಸ್ಕೃತವನ್ನು ಸುಲಭವಾಗಿ ಕಲಿಸುವ ಸಲುವಾಗಿ ಕೆಲ ಮನರಂಜನೆಗಳನ್ನು ನೀಡುವ ಗೇಮ್​ಗಳೂ ಲಭ್ಯವಿರುವಂತೆ ನೋಡಿಕೊಳ್ಳಲಾಗಿದೆ. ಗೂಗಲ್​ ಪ್ಲೇನಲ್ಲಿ ಈ ಆ್ಯಪ್ ಲಭ್ಯವಿದ್ದು ಶಿಕ್ಷಣ ಪದ್ಧತಿಯಲ್ಲಿ ಗುರುವಿಗೆ ನೀಡಲಾಗುವ ಸ್ಥಾನಮಾನವನ್ನು ಲಿಟಲ್ ಗುರು ಬಿಂಬಿಸಲಿದೆ ಎಂದು ಐಸಿಸಿಆರ್ ನಿರ್ದೇಶಕ ದಿನೇಶ್ ಪಟ್ನಾಯಕ್ ತಿಳಿಸಿದ್ದಾರೆ.

ಈಗಿನ ಆಧುನಿಕ ಯುಗಕ್ಕೆ ಪ್ರಾಚೀನ ಭಾಷೆಯನ್ನು ತಲುಪಿಸಬೇಕೆಂದರೆ ನಾವು ಕೆಲ ಆಧುನಿಕ ಮಾರ್ಗವನ್ನೇ ಅನುಸರಿಸಬೇಕೆಂಬ ಅಂಶವನ್ನು ಕಂಡುಕೊಂಡೆವು. ತಂತ್ರಜ್ಞಾನದ ಜೊತೆಜೊತೆಗೆ ಹೋದಾಗಲೇ ಇದು ಸಾಧ್ಯ. ಹೀಗಾಗಿ AI, ಮಶೀನ್ ಲರ್ನಿಂಗ್ ಹಾಗೂ ಗೇಮಿಂಗ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬಳಕೆದಾರರನ್ನು ತಲುಪುತ್ತಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂಸ್ಕೃತವನ್ನು ದೇವರ ಭಾಷೆ ಎಂದು ಕರೆಯಲಾಗುತ್ತದೆ. ಈ ಹಿಂದೆ ಐಸಿಸಿಆರ್ ಸಂಸ್ಕೃತ ಪುಸ್ತಕ ಹಾಗೂ ಅದಕ್ಕೆ ಸಂಬಂಧಿಸಿದ ಕೆಲ ಉಪಕರಣಗಳನ್ನು ನೀಡುವ ಮೂಲಕ ಸಂಸ್ಕೃತ ಕಲಿಕೆಗೆ ಉತ್ತೇಜಿಸುತ್ತಿತ್ತು. ಆದರೆ, ಈಗ ಕಾಲ ಬದಲಾಗಿರುವ ಕಾರಣ ಅದಕ್ಕೆ ತಕ್ಕನಾಗಿ ಆಧುನಿಕತೆಗೆ ಒಗ್ಗಿಕೊಂಡು, ಹೊಸತನದೊಂದಿಗೆ ಬಂದಿದೆ.

ಈಗಾಗಲೇ ಜಗತ್ತಿನ ಹಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತವನ್ನು ಕಲಿಸಲಾಗುತ್ತಿದ್ದು, ಲಿಟಲ್ ಗುರು ಆ್ಯಪ್​ ಅವರಿಗೆ ಇನ್ನಷ್ಟು ಸಹಕಾರಿಯಾಗಲಿದೆ. ಅಲ್ಲದೇ ವಿಶ್ವವಿದ್ಯಾಲಯಗಳನ್ನು ಹೊರತುಪಡಿಸಿ ಅದರಾಚೆಗೆ ಸಂಸ್ಕೃತ ಕಲಿಯಲು ಬಯಸುವವರು ಸಹ ಇದರ ಮೂಲಕ ಕಲಿಕೆಗೆ ಮುಂದಾಗಬಹುದಅಗಿದೆ. ಒಟ್ಟಾರೆಯಾಗಿ ಯುವ ಪೀಳಿಗೆಯನ್ನು ಪ್ರಾಚೀನ ಭಾಷೆಯ ಕಡೆಗೆ ಸೆಳೆಯಲು ಲಿಟಲ್ ಗುರು ಆ್ಯಪ್ ಒಂದು ಉತ್ತಮ ಮಾರ್ಗವಾಗಲಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

(Indian government releases Little Guru app to teach Sanskrit online)

ಇದನ್ನೂ ಓದಿ:
70ರ ಹರೆಯದ ಮಹಿಳೆಗೆ ಒಲಿದು ಬಂತು ಚಿನ್ನದ ಪದಕ; ಸಂಸ್ಕೃತ ವಿಷಯದಲ್ಲಿ ವಿಶೇಷ ಸಾಧನೆ 

ಕೊಡಗು ಸಂಸ್ಕೃತಿಯ ಅನಾವರಣ; ವಿಶಿಷ್ಟ ಸ್ಪರ್ಧೆಯ ಮೂಲಕ ಯುವ ಪಿಳಿಗೆಗೆ ಸಂಪ್ರದಾಯವನ್ನು ತಿಳಿಸುವ ಪ್ರಯತ್ನ