ಬರೆಯಲು ಸಾಧ್ಯವಾಗದವರಿಗೆ ಪರೀಕ್ಷೆ ಬರೆಯುವ ಮಹಿಳೆ; ವಿಕಲ ಚೇತನರ ಬಾಳಿನಲ್ಲಿ ಬೆಳಕು, ಸಮಾಜಕ್ಕೆ ಸ್ಪೂರ್ತಿಯಾದ ಪುಷ್ಪಾ!

ಬೆಂಗಳೂರಿನ ಮಹಿಳೆ ಪುಷ್ಪಾ, ದೈಹಿಕ ಅಥವಾ ಕಲಿಕೆಯಲ್ಲಿ ಅಸಮರ್ಥತೆಯಿಂದಾಗಿ ಸ್ವತಃ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

ಬರೆಯಲು ಸಾಧ್ಯವಾಗದವರಿಗೆ ಪರೀಕ್ಷೆ ಬರೆಯುವ ಮಹಿಳೆ; ವಿಕಲ ಚೇತನರ ಬಾಳಿನಲ್ಲಿ ಬೆಳಕು, ಸಮಾಜಕ್ಕೆ ಸ್ಪೂರ್ತಿಯಾದ ಪುಷ್ಪಾ!
ಪುಷ್ಪಾ Image Credit source: BBC
Follow us
ನಯನಾ ಎಸ್​ಪಿ
|

Updated on: May 31, 2023 | 10:54 AM

ಬೆಂಗಳೂರಿನ ಮಹಿಳೆ ಪುಷ್ಪಾ (Pushpa), ದೈಹಿಕ ಅಥವಾ ಕಲಿಕೆಯಲ್ಲಿ ಅಸಮರ್ಥತೆಯಿಂದಾಗಿ ಸ್ವತಃ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ (Physically/Mentally Challenged) ಸಹಾಯ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. 2007ರಲ್ಲಿ ಕುರುಡನೊಬ್ಬ ತನ್ನ ಸ್ನೇಹಿತನಿಗಾಗಿ ಪರೀಕ್ಷೆ ಬರೆಯಲು ಆಕೆಯನ್ನು ಕೇಳಿದಾಗ ಪುಷ್ಪಾರವರ ಈ ಪಯಣ ಪ್ರಾರಂಭವಾಯಿತು ಎಂದು ಬಿಬಿಸಿ ವರದಿ ಮಾಡಿದೆ. ಇವರ ಆರಂಭಿಕ ಆತಂಕದ ಹೊರತಾಗಿಯೂ, ಪುಷ್ಪಾ ಪರೀಕ್ಷೆ ಬರೆಯಲು ಒಪ್ಪಿಕೊಂಡರು ಮತ್ತು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗೆ ಸಹಾಯ ಮಾಡಿದರು.

ಈ ಒಂದು ಸಂದರ್ಭ ಅವರ ಜೀವನವನ್ನೇ ಬದಲಾಯಿಸಿತು. ಇದಾದ ಬಳಿಕ ಪುಷ್ಪರಿಗೆ ಹೆಚ್ಚಿನ ಅವಕಾಶಗಳು ಬಂದವು ಮತ್ತು ಕಳೆದ 16 ವರ್ಷಗಳಲ್ಲಿ, ವಿವಿಧ ವಿಕಲಾಂಗ ವಿದ್ಯಾರ್ಥಿಗಳಿಗೆ ಪುಷ್ಪಾ ಅವರು 1,000 ಪರೀಕ್ಷೆಗಳನ್ನು ಬರೆದಿದ್ದಾರೆ.

ಪುಷ್ಪಾ ಅವರ ನೆರವು ಶಾಲೆ ಮತ್ತು ವಿಶ್ವವಿದ್ಯಾನಿಲಯದ ಪರೀಕ್ಷೆಗಳನ್ನು ಮೀರಿ ವಿಸ್ತರಿಸಿದೆ. ಅವರು ಪ್ರವೇಶ ಪರೀಕ್ಷೆಗಳು ಮತ್ತು ಸರ್ಕಾರಿ ಉದ್ಯೋಗಗಳಿಗೆ ಆಯ್ಕೆ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಪುಷ್ಪಾರ ಪರಿಣತಿ ಮತ್ತು ಸಮರ್ಪಣೆ ಮನೋಭಾವ ಅವರನ್ನು ಅಗತ್ಯವಿರುವವರಿಗೆ ಪ್ರಮುಖ ಸಂಪನ್ಮೂಲವನ್ನಾಗಿ ಮಾಡಿದೆ. ಸೆರೆಬ್ರಲ್ ಪಾಲ್ಸಿ, ಡೌನ್ಸ್ ಸಿಂಡ್ರೋಮ್, ಸ್ವಲೀನತೆ, ಡಿಸ್ಲೆಕ್ಸಿಯಾ ಮತ್ತು ದೈಹಿಕ ನ್ಯೂನತೆಗಳಂತಹ ಪರಿಸ್ಥಿತಿಗಳನ್ನು ಹೊಂದಿರುವ ವಿದ್ಯಾರ್ಥಿಗಳು ಪುಷ್ಪಾ ಅವರ ಸಹಾಯದಿಂದ ಪ್ರಯೋಜನ ಪಡೆದಿದ್ದಾರೆ.

ಪುಷ್ಪಾ ಅವರು ತಮ್ಮ ವಿದ್ಯಾರ್ಥಿಗಳ ಅಗತ್ಯತೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ ಮತ್ತು ವಿವಿಧ ಅಂಗವೈಕಲ್ಯಗಳನ್ನು ಸರಿಹೊಂದಿಸಲು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾರೆ. ಇವರ ಸಮರ್ಪಣೆಯು ಅದೆಷ್ಟೋ ವಿಕಲ ಚೇತನರ ಬಾಳಿಗೆ ಬೆಳಕಾಗಿದೆ, ಕಾರ್ತಿಕ್ ಎಂಬ ವಿಕಲ ಚೇತನರೊಬ್ಬರು ಪುಷ್ಪಾರ ಕುರಿತು ಮಾತನಾಡಿ ಅವರು ಪುಷ್ಪಾ ಅವರನ್ನು ಅಂಗವಿಕಲ ವಿದ್ಯಾರ್ಥಿಗಳ ಪಾಲಿನ “ದೇವರು” ಎಂದು ಕರೆದಿದ್ದಾರೆ.

ಪುಷ್ಪಾ ಅವರು, ಬಡ ಕುಟುಂಬದಲ್ಲಿ ಬೆಳೆದ ಇವರ ಹಣವಿಲ್ಲದೆ ಪುಷ್ಪಾ ಮತ್ತು ಅವರ ತಮ್ಮ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದರು ಎಂಬ ವಿಷಯವನ್ನು ನೆನಪಿಸಿಕೊಳ್ಳುತ್ತಾ, ಅಂತಹ ಸಮಯದಲ್ಲಿ ಅಪರಿಚಿತರೊಬ್ಬರು ಅವರ ಕಷ್ಟಕ್ಕೆ ನೆರವಾಗಿದ್ದರು, ಆ ವ್ಯಕ್ತಿಯ ನಿಸ್ವಾರ್ಥ ಮನೋಭಾವ ಪುಷ್ಪಾ ಹಾಗು ಅವರ ತಮ್ಮನ ಜೀವನಕ್ಕೆ ನೆರವಾಯಿತು ಎಂಬುದನ್ನು ನೆನಪಿಸಿಕೊಳ್ಳುತ್ತಾ, ಇದನ್ನು ಪುನಃ ಸಮಾಜಕ್ಕೆ ನೀಡಲು ಪುಷ್ಪಾ ವಿಕಲ ಚೇತನರಿಗೆ ನೆರವಾಗುತ್ತಿದ್ದಾರೆ ಎಂದು ಹೇಳಿದರು.

ಇದಲ್ಲದೆ 2018 ರಲ್ಲಿ ಪುಷ್ಪಾ ಅವರು ತಮ್ಮ ತಂದೆಯನ್ನು ಕಳೆದುಕೊಂಡರು, ನಂತರ 2020 ರಲ್ಲಿ ಕೋವಿಡ್​ನಿಂದ ತಮ್ಮನನ್ನ ಕಳೆದುಕೊಂಡರು ಅಲ್ಲದೆ 2021 ರಲ್ಲಿ ತಮ್ಮ ತಾಯಿಯವರನ್ನು ಕಳೆದುಕೊಂಡಾಗ ಪುಷ್ಪಾ ಮಾನಸಿಕವಾಗಿ ಕುಗ್ಗಿದರು, ಇಂತಹ ಸಮಯದಲ್ಲಿ ವಿಕಲ ಚೇತನರಿಗೆ ಪರೀಕ್ಷೆ ಬರೆಯುವುದರಿಂದ ಅವರು ಶಕ್ತಿ ಕಂಡುಕೊಂಡರು, ಅವರ ದುಖ್ಖದಿಂದ ಹೊರ ಬಂದರು ಎಂದು ಬಿಬಿಸಿ ವರದಿಯಲ್ಲಿ ತಿಳಿಸಿದ್ದಾರೆ.

ಪುಷ್ಪಾ ಅವರ ನಿಸ್ವಾರ್ಥ ನಡೆಗೆ ಮಾರ್ಚ್ 8 , 2018 ರಂದು, ಆಗಿನ ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಪುಷ್ಪಾರನ್ನು ಗೌರವಿಸಿದರು. ಅವರು ಇತರ ಪ್ರಶಸ್ತಿ ವಿಜೇತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಪುಷ್ಪಾ ಈಗ ಟೆಕ್ ಸ್ಟಾರ್ಟ್-ಅಪ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಕಾರ್ಪೊರೇಟ್ ಈವೆಂಟ್‌ಗಳಲ್ಲಿ ಪ್ರೇರಕ ಭಾಷಣಗಳನ್ನು ನೀಡುತ್ತಾರೆ.

ಇದನ್ನೂ ಓದಿ: 5 ಪದವಿಗಳನ್ನು ಪಡೆದ 12 ವರ್ಷದ ಬಾಲಕ; ಇತಿಹಾಸ ಸೃಷ್ಟಿಸಿದ ಬಾಲಕನ ಸ್ಪೂರ್ಥಿಕತೆ!

ಬಹು ಭಾರತೀಯ ಭಾಷೆಗಳಲ್ಲಿ ಸಂವಹನ ಮಾಡುವ ಪುಷ್ಪಾ ಅವರ ಸಾಮರ್ಥ್ಯವು ಅವರ ಸೇವೆಗಳ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಾಧ್ಯವಾಗದವರಿಗೆ ಪರೀಕ್ಷೆಗಳನ್ನು ಬರೆಯುವ ಮೂಲಕ, ಅವರು ಅವರ ಜೀವನವನ್ನು ಪರಿವರ್ತಿಸುತ್ತಿದ್ದಾರೆ ಮತ್ತು ಅವರ ಕನಸುಗಳನ್ನು ಮುಂದುವರಿಸಲು ಅವರಿಗೆ ಅವಕಾಶವನ್ನು ನೀಡುತ್ತಿದ್ದಾರೆ ಎಂದು ಅವರು ನಂಬುತ್ತಾರೆ. ಪುಷ್ಪಾ ಅವರ ನಿಸ್ವಾರ್ಥತೆ ಮತ್ತು ನಿರ್ಣಯವು ಸಹಾನುಭೂತಿಯ ಶಕ್ತಿಯನ್ನು ಮತ್ತು ಒಬ್ಬ ವ್ಯಕ್ತಿಯು ಅನೇಕರ ಜೀವನದಲ್ಲಿ ಧನಾತ್ಮಕ ಪ್ರಭಾವವನ್ನು ಬೀರಬಹುದು ಎಂಬುದನ್ನು ಸೂಚಿಸುತ್ತದೆ.

ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ