ವಿದ್ಯಾರ್ಥಿಗಳಲ್ಲಿನ ಮಾನಸಿಕ ಆರೋಗ್ಯ ಸಮಸ್ಯೆ ಪತ್ತೆಹಚ್ಚಲು ಶಾಲೆಗಳಿಗೆ ಮಾರ್ಗಸೂಚಿಯನ್ನು ಹೊರಡಿಸಿದ ಎನ್​ಸಿಆರ್​​ಟಿ

| Updated By: ವಿವೇಕ ಬಿರಾದಾರ

Updated on: Sep 11, 2022 | 9:20 PM

ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ವಿದ್ಯಾರ್ಥಿಗಳಲ್ಲಿನ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಲು ಶಾಲೆಗಳಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ವಿದ್ಯಾರ್ಥಿಗಳಲ್ಲಿನ ಮಾನಸಿಕ ಆರೋಗ್ಯ ಸಮಸ್ಯೆ ಪತ್ತೆಹಚ್ಚಲು ಶಾಲೆಗಳಿಗೆ ಮಾರ್ಗಸೂಚಿಯನ್ನು ಹೊರಡಿಸಿದ ಎನ್​ಸಿಆರ್​​ಟಿ
ಸಾಂಧರ್ಬಿಕ ಚಿತ್ರ
Image Credit source: News 9
Follow us on

ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ವಿದ್ಯಾರ್ಥಿಗಳಲ್ಲಿನ (Students) ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಲು ಶಾಲೆಗಳಿಗೆ (Schools) ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.  ಮಾರ್ಗಸೂಚಿಯಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಒತ್ತಡ ಮತ್ತು ಆತಂಕವನ್ನು ನಿವಾರಸಿಲು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಲಾಗಿದೆ.

ವಿದ್ಯಾರ್ಥಿಗಳ ಮಾನಸಿಕ ಯೋಗಕ್ಷೇಮ ಕಾಪಾಡಲು ಮಾನಸಿಕ ಆರೋಗ್ಯ ಸಲಹಾ ಸಮಿತಿ ಸ್ಥಾಪಿಸಲು ಸಲಹೆ ನೀಡಿದೆ. ಈ ಸಮಿತಿಯಲ್ಲಿ ಪೋಷಕರನ್ನು ತೊಡಗಿಸಿಕೊಳ್ಳುವಂತೆ ಹೇಳಿದೆ. ಶಾಲಾ ಆಧಾರಿತ ಮಾನಸಿಕ ಆರೋಗ್ಯ ಕಾರ್ಯಕ್ರಮ ಮತ್ತು ಶಿಕ್ಷಣ ಬೆಂಬಲವನ್ನು ಸ್ಥಾಪಿಸಲು NCERT ಶಾಲೆಗಳಿಗೆ ಸಲಹೆ ನೀಡಿದೆ.

“ಶಾಲೆಗೆ ಹೋಗುವ ಮಕ್ಕಳು ಮತ್ತು ಹದಿಹರೆಯದವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಆರಂಭಿಕ ಗುರುತಿಸುವಿಕೆ ಮತ್ತು ಮಧ್ಯಸ್ಥಿಕೆ” ಗಾಗಿ ಮಾರ್ಗದರ್ಶಿ ಸೂತ್ರಗಳನ್ನು NCERT ಕಳೆದ ವಾರ ಬಿಡುಗಡೆ ಮಾಡಿದೆ.
ವಿದ್ಯಾರ್ಥಿಗಳಿಗಿಗೆ ಶಾಲೆಯು ಸುರಕ್ಷಿತ ವಾತಾವರಣವಾಗಿದೆ. ಶಾಲಾ ಪ್ರಾಂಶುಪಾಲರು, ಶಿಕ್ಷಕರು, ಇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಎಲ್ಲರೂ ದಿನದ 1/3 ಭಾಗವನ್ನು ಮತ್ತು ಒಂದು ವರ್ಷದಲ್ಲಿ ಸುಮಾರು 220 ದಿನಗಳನ್ನು ಶಾಲೆಯಲ್ಲಿ ಕಳೆಯುತ್ತಾರೆ.

ಆದ್ದರಿಂದ, ಶಾಲೆಗಳು ಮತ್ತು ವಸತಿ ಶಾಲೆಗಳು ಎಲ್ಲಾ ಮಕ್ಕಳ ಸುರಕ್ಷತೆ, ಭದ್ರತೆ, ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವುದು ಶಾಲೆಯ ಜವಾಬ್ದಾರಿಯಾಗಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಮಾರ್ಗಸೂಚಿಯಲ್ಲಿ ತಿಳಿಸಲಾದ ಅಂಶಗಳು

1. ಪ್ರತಿ ಶಾಲೆ ಅಥವಾ ಮಾನಸಿಕ ಆರೋಗ್ಯ ಸಲಹಾ ಸಮಿತಿಯನ್ನು ಸ್ಥಾಪಿಸಬೇಕು. ಇದಕ್ಕೆ ಪ್ರಾಂಶುಪಾಲರು ಅಧ್ಯಕ್ಷರಾಗಿರಬೇಕು ಮತ್ತು ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಸದಸ್ಯರಾಗಿಸಬೇಕು.

2. ವಯಸ್ಸು ಮತ್ತು ಲಿಂಗಕ್ಕೆ ಅನುಗುಣವಾಗಿ ವಾರ್ಷಿಕ ಶಾಲಾ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಮಾಡಬೇಕು.

3. ಶಾಲೆಗಳು ವಿದ್ಯಾರ್ಥಿಗಳ ನಡವಳಿಕೆಯನ್ನು ಗುರುತಿಸಲು ಅವಕಾಶವನ್ನು ಹೊಂದಿರಬೇಕು. ವಸ್ತುವಿನ ಬಳಕೆ ಮತ್ತು ಸ್ವಯಂ-ಹಾನಿ, ಖಿನ್ನತೆ ಮತ್ತು ಬೆಳವಣಿಗೆಯ ಕಾಳಜಿಗಳು ಪ್ರಥಮ ಚಿಕಿತ್ಸೆ ಮತ್ತು ಸೂಕ್ತ ಉಲ್ಲೇಖಗಳನ್ನು ಒದಗಿಸಬೇಕು ಎಂದು ಹೇಳಿದೆ.

4. ಹೆಚ್ಚಿನ ಸಮಯ ಮಾನಸಿಕ ಆರೋಗ್ಯ ಸಮಸ್ಯೆಗಳು ಜೀವನದ ಆರಂಭಿಕ ಹಂತದಲ್ಲಿ ಹೊರಹೊಮ್ಮುತ್ತವೆ. ಅಂದರೆ ಎಲ್ಲಾ ಮಾನಸಿಕ ಆರೋಗ್ಯ ಸಮಸ್ಯೆಗಳು 14 ವರ್ಷ ದಿಂದ 25 ವರ್ಷ ವಯಸ್ಸಿನೊಳಗೆ ಕಂಡು ಬರುತ್ತದೆ. ಕುಟುಂಬಗಳು ಮತ್ತು ಪೋಷಕರು, ಶಿಕ್ಷಕರು ಸಹ ಪ್ರಾಥಮಿಕ ಆರೈಕೆದಾರರಾಗಿರುವುದರಿಂದ ಆರಂಭಿಕ ಮಾನಸಿಕ ಆರೋಗ್ಯ ಸಮಸ್ಯೆ ಚಿಹ್ನೆಗಳ ಬಗ್ಗೆ ಗಮನಹರಿಸಬೇಕು

5. ಲಗತ್ತು ಸಮಸ್ಯೆಗಳು, ಪ್ರತ್ಯೇಕತೆಯ ಆತಂಕ, ಶಾಲಾ ನಿರಾಕರಣೆ, ಸಂವಹನ ಸಮಸ್ಯೆಗಳು, ಆತಂಕದ ಮಾದರಿಗಳು, ಖಿನ್ನತೆಯ ಸ್ಥಿತಿಗಳು, ನಡವಳಿಕೆ ಸಂಬಂಧಿತ ಸಮಸ್ಯೆಗಳು, ಅತಿಯಾದ ಇಂಟರ್ನೆಟ್ ಬಳಕೆ, ಹೈಪರ್ಆಕ್ಟಿವಿಟಿ, ಬೌದ್ಧಿಕ ಅಸಾಮರ್ಥ್ಯ ಮತ್ತು ಕಲಿಕೆಯಲ್ಲಿ ಅಸಮರ್ಥತೆಗಾಗಿ ವಿದ್ಯಾರ್ಥಿಗಳಲ್ಲಿ ಆರಂಭಿಕ ಚಿಹ್ನೆಗಳನ್ನು ಗುರುತಿಸಲು ಶಿಕ್ಷಕರಿಗೆ ತರಬೇತಿ ನೀಡಬೇಕು ಎಂದು ಹೇಳಿದೆ.

6. ಶಿಕ್ಷಕರು ತರಗತಿಯಲ್ಲಿ ಬೆದರಿಸುವ ವಿರೋಧವಾಗಿ ತೆರಬೇತಿ ನೀಡಬೇಕು. ಬೆದರಿಸುವ ಬಗ್ಗೆ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಬೇಕು. ವಿದ್ಯಾರ್ಥಿಗಳಿಗೆ ಕಾಳಜಿಯಿರುವ ಅವರ ಸಮಸ್ಯೆಯನ್ನು ಆಲಿಸಲು ಗೌಪ್ಯ ಮಾರ್ಗವನ್ನು ಒದಗಿಸಬೇಕು ಎಂದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲ ಕ್ಲಿಕ್ ಮಾಡಿ

Published On - 9:04 pm, Sun, 11 September 22