UPSC:ಕಟ್ ಆಫ್ ಡೇಟ್ ಮುಂಚೆಯೇ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣಪತ್ರ ಲಗತ್ತಿಸುವುದು ಕಡ್ಡಾಯ: ಸುಪ್ರೀಂಕೋರ್ಟ್
ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಮೀಸಲಾತಿ ಪ್ರಮಾಣಪತ್ರವನ್ನು ಅರ್ಜಿಯೊಂದಿಗೆ ನಿಗದಿತ ಸಮಯದಲ್ಲಿ ಅಪ್ಲೋಡ್ ಮಾಡಿರದಿದ್ದರೆ ಮೀಸಲಾತಿ ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಯುಪಿಎಸ್ಸಿ(UPSC)ಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ. ಕೆಲವು ಯುಪಿಎಸ್ಸಿ ಆಕಾಂಕ್ಷಿಗಳು ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಲ್ಯುಎಸ್) ವರ್ಗಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಸಲ್ಲಿಸದಿದ್ದಕ್ಕಾಗಿ ತಮ್ಮನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಾಗಿ ಪರಿಗಣಿಸುವ ಕೇಂದ್ರ ಲೋಕಸೇವಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ ಮೂರು ರಿಟ್ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ನಿಗದಿತ ಅವಧಿಯೊಳಗೆ ಪ್ರಮಾಣ ಪತ್ರ ನೀಡಿಲ್ಲ
2022ರ ನಾಗರಿಕ ಸೇವಾ ಪರೀಕ್ಷೆಗಳಿಗೆ ನಿಗದಿತ ಕಟ್ ಆಫ್ ದಿನಾಂಕದ ಮೊದಲು ಪ್ರಮಾಣಪತ್ರವನ್ನು ನೀಡದ ಕಾರಣ ಕೇಂದ್ರ ಲೋಕಸೇವಾ ಆಯೋಗ ಈ ನಿರ್ಧಾರವನ್ನು ಪ್ರಕಟಿಸಿತ್ತು. ನಿಗದಿತ ನಮೂನೆಯಲ್ಲಿ ಆದಾಯ ಹಾಗೂ ಆಸ್ತಿ ಪ್ರಮಾಣಪತ್ರಗಳನ್ನು ಹೊಂದಿರದ ಯಾವುದೇ ಅಭ್ಯರ್ಥಿಯು ಆರ್ಥಿಕವಾಗಿ ಹಿಂದುಳಿದ ವರ್ಗದ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು.
ನಿಗದಿತ ಗಡುವನ್ನು ಮೀರಿ ಆದಾಯ ಮತ್ತು ಆಸ್ತಿ ಪ್ರಮಾಣಪತ್ರವನ್ನು ಸಲ್ಲಿಸಿದ ಕಾರಣ, EWS ವರ್ಗದ ಅಡಿಯಲ್ಲಿ ಪ್ರಯೋಜನವನ್ನು ಪಡೆಯುವ ಅಭ್ಯರ್ಥಿಗಳ ಉಮೇದುವಾರಿಕೆಯನ್ನು ತಿರಸ್ಕರಿಸುವ ನಿರ್ಧಾರವನ್ನು ಲೋಕಸೇವಾ ಆಯೋಗ ಸಮರ್ಥಿಸಿಕೊಂಡಿದೆ.
ಫಲಿತಾಂಶದ ಬಳಿಕ ಸಾಮಾನ್ಯ ವರ್ಗ ಎಂದು ಪರಿಗಣಿಸಿದ್ದಕ್ಕೆ ಬೇಸರ
ಫಲಿತಾಂಶದ ಬಳಿಕ ಸಾಮಾನ್ಯ ವರ್ಗದ ಅಭ್ಯರ್ಥಿಗಳೆಂದು ಪರಿಗಣಿಸುವ ಯುಪಿಎಸ್ಸಿ ನಿರ್ಧಾರವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಈ ಕ್ರಮವು ಸರಿಯಾಗಿಲ್ಲ ಹಾಗೂ ಸಂವಿಧಾನದ 14,16 ಹಾಗೂ 21ನೇ ವಿಧಿಯನ್ನು ಉಲ್ಲಂಘಿಸಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಫೆಬ್ರವರಿ 22, 2022ರ ನಿಗದಿತ ಗಡುವಿನೊಳಗೆ 2020-21ರ ಹಣಕಾಸು ವರ್ಷಕ್ಕೆ ಅಗತ್ಯವಿರುವ ಆದಾಯ ಹಾಗೂ ಆಸ್ತಿ ಪ್ರಮಾಣಪತ್ರವನ್ನು ಒದಗಿಸಿದ್ದೇವೆ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ:ಎಂಜಿನಿಯರಿಂಗ್ ಅಥವಾ ಮೆಡಿಕಲ್ ನಡುವೆ ಯಾವುದನ್ನು ಆಯ್ಕೆಮಾಡಬೇಕು ಎಂಬ ಗೊಂದಲವೇ? ಇಲ್ಲಿದೆ ಕೆಲವು ಜೋತಿಷ್ಯ ಸಲಹೆಗಳು
ಹಂತ 1ರಲ್ಲಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿರುತ್ತವೆ. ಪೇಪರ್ 1 ಜನರಲ್ ಸ್ಟಡೀಸ್ ಅನ್ನು 2 ಗಂಟೆ ಅವಧಿಯಲ್ಲಿ ಬರೆಯಬೇಕಾಗುತ್ತದೆ. 200 ಅಂಕಗಳಿಗೆ ಈ ಪರೀಕ್ಷೆಯಲ್ಲಿ ಒಟ್ಟು 100 ಪ್ರಶ್ನೆಗಳಿರುತ್ತವೆ. ಈ ಪತ್ರಿಕೆಯು ಅರ್ಹತೆಯ ಶ್ರೇಯಾಂಕವನ್ನು ಹೊಂದಿದೆ.
ಪೇಪರ್ 2 ಸಾಮಾನ್ಯ ಅಧ್ಯಯನದ (CSAT) 2 ಗಂಟೆಗಳ ಅವಧಿಯ, ಅರ್ಹತೆಯ ಪತ್ರಿಕೆಯಾಗಿದೆ. ಈ ಪತ್ರಿಕೆಯು 200 ಅಂಕಗಳಿಗೆ 80 ಪ್ರಶ್ನೆಗಳನ್ನು ಒಳಗೊಂಡಿದೆ. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ