Arsikere Election Results 2023: ಅರಸೀಕೆರೆ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಕಾಂಗ್ರೆಸ್ನ ಶಿವಲಿಂಗೇಗೌಡಗೆ ಗೆಲುವು; ಜೆಡಿಎಸ್ನ ಎನ್ ಆರ್ ಸಂತೋಷ್ ಹಿನ್ನಡೆ
Arsikere Assembly Election Result 2023 Live Counting Updates: ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಯಡಿಯೂರಪ್ಪ ಮಾಜಿ ಕಾರ್ಯದರ್ಶಿ ಎನ್ ಆರ್ ಸಂತೊಷ್, ಕಾಂಗ್ರೆಸ್ನಿಂದ ಮಾಜಿ ಜೆಡಿಎಸ್ ನಾಯಕ ಶಿವಲಿಂಗೇಗೌಡ ಸ್ಪರ್ಧಿಸಿದ್ದು ಅವರಿಬ್ಬರ ಮಧ್ಯೆ ನೇರ ಪೈಪೋಟಿ ಇದೆ. ಈ ಕ್ಷೇತ್ರದ ಮತ ಎಣಿಕೆಯ ವಿವರ ಇಲ್ಲಿದೆ.

Arsikere Assembly Election Result 2023: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ (Karntaka Assembly Elections 2023 Results) ಇಂದು ಪ್ರಕಟವಾಗುತ್ತಿದ್ದು, ಕುತೂಹಲ ಮೂಡಿಸಿರುವ ಕ್ಷೇತ್ರಗಳಲ್ಲಿ ಅರಸೀಕೆರೆಯೂ (Arsikere Constituency) ಒಂದು. ಇಂದು ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಎಂ ಶಿವಲಿಂಗೇಗೌಡರು ಮುನ್ನಡೆ ಪಡೆದಿದ್ದಾರೆ. ಯಡಿಯೂರಪ್ಪರ ಮಾಜಿ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕೆಎಂ ಶಿವಲಿಂಗೇಗೌಡರನ್ನು ಸೋಲಿಸುವ ಪ್ರಯತ್ನ ವಿಫಲವಾಗುವಂತಿದೆ. ಜೆಡಿಎಸ್ನಲ್ಲಿದ್ದು ಸತತ 3 ಬಾರಿ ಗೆದ್ದಿದ್ದ ಕೆಎಂ ಶಿವಲಿಂಗೇಗೌಡರು ಈಗ ಕಾಂಗ್ರೆಸ್ ಟಿಕೆಟ್ನಲ್ಲಿ ಸ್ಪರ್ಧಿಸಿದ್ದಾರೆ. ಮುನ್ನಡೆಯಲ್ಲಿರುವ ಅವರು ಗೆದ್ದರೆ ಸತತ 4ನೇ ಬಾರಿ ಶಾಸಕರಾದಂತಾಗುತ್ತದೆ.
ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಿ.ವಿ.ಟಿ. ಬಸವರಾಜು ಸ್ಪರ್ಧಿಸುತ್ತಿದ್ದಾರಾದರೂ ಫೈಟ್ ಇರುವುದು ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆಯೇ.
ಅರಸೀಕೆರೆ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಮತದಾರರ ಪ್ರಾಬಲ್ಯ ಹೆಚ್ಚಿದೆ. ಇಲ್ಲಿ ಬೇರೆ ಸಮುದಾಯದವರು ಗೆಲ್ಲಲು ಸಾಧ್ಯವೇ ಇಲ್ಲ ಎನ್ನುವಂಥ ಕಾಲ ಇತ್ತು. 1994ರಲ್ಲಿ ವೀರಶೈವ ಲಿಂಗಾಯತ ಸಮುದಾಯದ ಹಾರನಹಳ್ಳಿ ರಾಮಸ್ವಾಮಿ ಅವರನ್ನು ಜೆಡಿಎಸ್ನ ಜಿಎಸ್ ಪರಮೇಶ್ವರಪ್ಪ ಸೋಲಿಸಿ ಅಚ್ಚರಿ ಮೂಡಿಸಿದ್ದರು. ಒಕ್ಕಲಿಗ ಸಮುದಾಯದ ಕೆಎಂ ಶಿವಲಿಂಗೇಗೌಡರು 2008ರಿಂದ ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ. ಈ ಬಾರಿಯೂ ಶಿವಲಿಂಗೇಗೌಡರು ಗೆಲುವಿನ ದಡ ತಲುಪುತ್ತಾರಾ ನೋಡಬೇಕು.
ಎನ್ ಆರ್ ಸಂತೋಷ್ ಅವರು ಯಡಿಯೂರಪ್ಪರ ಮಾಜಿ ರಾಜಕೀಯ ಕಾರ್ಯದರ್ಶಿ ಆಗಿದ್ದಷ್ಟೇ ಅಲ್ಲ, ಅವರ ಸಂಬಂಧಿಯೂ ಹೌದು. ಲಿಂಗಾಯತ ಸಮುದಾಯಕ್ಕೆ ಸೇರಿದ ಸಂತೋಷ್ ಅವರಿಗೆ ಕ್ಷೇತ್ರದ ವೀರಶೈವ ಲಿಂಗಾಯತ ಮತದಾರರು ಕೈಹಿಡಿದು ಗೆಲ್ಲಿಸುತ್ತಾರಾ? ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ಗೆ ಆಸೆಪಟ್ಟಿದ್ದ ಎನ್ ಆರ್ ಸಂತೋಷ್ಗೆ ಟಿಕೆಟ್ ಕೊಡಲು ಬಿಜೆಪಿ ಹೈಕಮಾಂಡ್ ಒಪ್ಪಲಿಲ್ಲ. ಈ ಕಾರಣಕ್ಕೆ ಅತೃಪ್ತಿಗೊಂಡಿದ್ದ ಸಂತೋಷ್ಗೆ ಜೆಡಿಎಸ್ ಅವಕಾಶ ನೀಡಿದೆ. ಜೆಡಿಎಸ್ಗೆ ಈ ಬಾರಿ ಗೆದ್ದರೆ ಸತತ 4ನೇ ಗೆಲುವಾಗುತ್ತದೆ.
Published On - 3:28 am, Sat, 13 May 23




