BTM Layout Election Results: ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್, ನಾಗಾಲೋಟದಲ್ಲಿರುವ ಹಳೆಯ ಹುಲಿ ರಾ. ರೆಡ್ಡಿಗೆ ಹೊಸ ಮುಖಗಳಿಂದ ಪೈಪೋಟಿ

BTM Layout Assembly Election Result 2023 Live Counting Updates: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಮೇ 10 ರಂದು ನಡೆದ ಮತದಾನದಲ್ಲಿ ಕ್ಷೇತ್ರದಲ್ಲಿ ಶೇ. 46.72ರಷ್ಟು ಮತದಾನವಾಗಿತ್ತು.

BTM Layout Election Results: ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್, ನಾಗಾಲೋಟದಲ್ಲಿರುವ ಹಳೆಯ ಹುಲಿ ರಾ. ರೆಡ್ಡಿಗೆ ಹೊಸ ಮುಖಗಳಿಂದ ಪೈಪೋಟಿ
ನಾಗಾಲೋಟದಲ್ಲಿರುವ ಹಳೆಯ ಹುಲಿ ರಾ. ರೆಡ್ಡಿಗೆ ಹೊಸ ಪೈಪೋಟಿ
Follow us
ಸಾಧು ಶ್ರೀನಾಥ್​
| Updated By: ಗಂಗಾಧರ​ ಬ. ಸಾಬೋಜಿ

Updated on: May 13, 2023 | 3:22 AM

BTM Layout Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ (Karnataka Assembly Elections 2023 Result) ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಮೇ 10 ರಂದು ನಡೆದ ಮತದಾನದಲ್ಲಿ ಕ್ಷೇತ್ರದಲ್ಲಿ ಶೇ. 46.72ರಷ್ಟು ಮತದಾನವಾಗಿತ್ತು. ಬಿಟಿಎಂ ಲೇಔಟ್ ಕ್ಷೇತ್ರದಲ್ಲಿರುವ ಒಟ್ಟು ಮತದಾರರು 2,75,028. ಪುರುಷರು -1,43,266. ಮಹಿಳೆಯರು -1,31,717. ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು 12. ಬಿಟಿಎಂ ಲೇಔಟ್ ವಿಧಾನಸಭೆ ಕ್ಷೇತ್ರ (BTM Layout Assembly Constituency) ರಚನೆಯಾಗುವ ಮೊದಲಿನಿಂದಲೂ ಆ ವ್ಯಾಪ್ತಿಯಲ್ಲಿ ನಾಲ್ಕು ಬಾರಿ ‘ಜಯನಗರ’ ಶಾಸಕರಾಗಿದ್ದ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಅವರು, ಬಿಟಿಎಂ ಲೇಔಟ್ ಕ್ಷೇತ್ರದಲ್ಲೂ ಹ್ಯಾಟ್ರಿಕ್ ಸಾಧಿಸಿದ್ದಾರೆ. ಇದೀಗ ಎಂಟನೇ ಬಾರಿ ಶಾಸಕರಾಗಲು ಹೊರಟಿರುವ ಅವರಿಗೆ ಬಿಜೆಪಿ, ಜೆಡಿಎಸ್ ಮತ್ತೆ ಹೊಸ ಮುಖದೊಂದಿಗೆ ಪೈಪೋಟಿ ನೀಡುತ್ತಿವೆ. ಕಾಂಗ್ರೆಸ್‌ನಿಂದಲೇ ಬೆಂಗಳೂರು ನಗರ ಪಾಲಿಕೆ ಸದಸ್ಯರಾಗಿ, 7 ಬಾರಿ ಶಾಸಕರಾಗಿ ಬೆಂಗಳೂರು ಮಟ್ಟಿಗೆ ದಾಖಲೆ ಹೂ೦ದಿರುವ ರಾಮಲಿಂಗಾರೆಡ್ಡಿ ಅವರು, ‘ತಮ್ಮ ಕ್ಷೇತ್ರದಲ್ಲಿ ಎಲ್ಲ ರೀತಿಯ ಕೆಲಸಗಳನ್ನು ಮಾಡಲಾಗಿದೆ. ನಾಗರಿಕರಿಗೆ ಅಗತ್ಯವಾದ ಸೌಲಭ್ಯಗ ಳನ್ನು ನೀಡಲಾಗಿದೆ. ಮಳೆ ನೀರಿನಲ್ಲಿ ಪ್ರದೇಶ ಮುಳುಗಡೆ, ಮೇಲ್ವೇತುವೆ ಯಂತಹ ಒಂದರಡು ಕೆಲಸಗಳಷ್ಟೇ ಬಾಕಿ’ ಎಂದು ಪ್ರಚಾರದ ವೇಳೆ ಹೇಳಿದ್ದರು. ಆದರೆ, ಪ್ರತಿಪಕ್ಷಗಳು ಇದಕ್ಕೆ ವಿರುದ್ಧವಾಗಿಯೇ ಮಾತನಾಡಿದ್ದವು. ಮೂಲ ಸೌಕರ್ಯವಿಲ್ಲ, ಕಸ, ಚರಂಡಿ, ರಸ್ತೆ ಸಮಸ್ಯೆ ಎಂದು ಪಾಲಿಕೆ ಮಟ್ಟದ ಕೆಲಸಗಳೇ ಆಗಿಲ್ಲವೆಂಬುದು ಆರೋಪ.

ಈ ಕ್ಷೇತ್ರದಲ್ಲಿ, ಪ್ರತಿ ವಿರೋಧ ಪಕ್ಷದ ಚುನಾವಣೆಯಲ್ಲೂ ಅಭ್ಯರ್ಥಿಗಳು ಬದಲಾಗುತ್ತಲೇ ಬಂದಿದ್ದಾರೆ. ಇದು ಕಾರ್ಯಕರ್ತರನ್ನು ಒಟ್ಟುಗೂಡಿಸುವಲ್ಲಿ ಒಂದು ರೀತಿಯ ಹಿನ್ನಡೆಯೂ ಆಗಿದೆ. ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಪ್ರಮುಖ ಎದುರಾಳಿಯಾಗಿರುವ ಬಿಜೆಪಿ, ಈ ಬಾರಿಯೂ ಹೊಸ ಅಭ್ಯರ್ಥಿಯನ್ನೇ ಕಣಕ್ಕಿಳಿಸಿತ್ತು. 2008ರಲ್ಲಿ ಪ್ರಸಾದ್ ರೆಡ್ಡಿ ತೀವ್ರ ಪೈಪೋಟಿ ನೀಡಿ 1,857 ಮತಗಳಿಂದಷ್ಟೇ ಸೋತಿದ್ದರು. ಅದರ ನಂತರದ ಎರಡು ಚುನಾವಣೆಯಲ್ಲಿ ಬಿಜೆಪಿಯ ಎನ್‌. ಲಲ್ಲೇಶ್ ರೆಡ್ಡಿ ಹೆಚ್ಚು ಅಂತರದಿಂದ ಸೋಲು ಅನುಭವಿಸಿದರು. ಜೆಡಿಎಸ್‌ ಕೂಡ ಅಭ್ಯರ್ಥಿಗಳನ್ನು ಪ್ರತಿಬಾರಿ ಬದಲಿಸುತ್ತಿದೆ. ಇದು ಕಾರ್ಯಕರ್ತರ ಸಂಘಟನೆಗೆ ತೊಡಕಾಗಿರುವುದು ಕ್ಷೇತ್ರದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ಬಿಜೆಪಿ ಈ ಬಾರಿ ಕೆ.ಆರ್. ಶ್ರೀಧರ ರೆಡ್ಡಿ ಅವರನ್ನು ಕಣಕ್ಕಿಳಿಸಿದ. ಸ್ಥಳೀಯ ಕಾರ್ಯಕರ್ತರಿಗೆ ಹೆಚ್ಚಿನ ಪರಿಚಯವಿಲ್ಲದ ಶ್ರೀಧರ ಅವರು ನಾಮಪತ್ರ ಸಲ್ಲಿಸಿದ ನಂತರ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಮುಖಂಡರು ಇಲ್ಲಿ ಪ್ರಚಾರ ನಡೆಸುತ್ತಿದ್ದರೂ ಕಾಂಗ್ರೆಸ್ ಕಾರ್ಯಕರ್ತರ ಹುಮ್ಮಸ್ಸಿಗೆ ಇಲ್ಲ. ವೈಯಕ್ತಿಕ ವರ್ಚಸ್ಸು ಹಾಗೂ ದೀರ್ಘಕಾಲದಿಂದ ಜನರೊಂದಿಗೆ ಬೆರೆತಿರುವ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಅವರಿಗೆ ಹಾದಿ ಸುಗಮವಾಗಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್