Muslim Votes: ಜೆಡಿಎಸ್ ಬೇಡ, ಎಸ್​ಡಿಪಿಐ ಬೇಡ, ಒವೈಸಿಯೂ ಬೇಡ; ಮುಸ್ಲಿಮ್ ವೋಟ್ ಕೈ ಹಿಡಿದ ಇಂಟ್ರಸ್ಟಿಂಗ್ ಸ್ಟೋರಿ

Karnataka Assembly Elections 2023 Muslim Voting: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣಗಳೇನು? ಚುನಾವಣಾ ಫಲಿತಾಂಶದಲ್ಲಿ ಹಲವು ಇಂಟರೆಸ್ಟಿಂಗ್ ಸಂಗತಿಗಳು ಕಣ್ಣಿಗೆ ಕಾಣುತ್ತವೆ. ಅದರಲ್ಲಿ ಮುಸ್ಲಿಂ ವೋಟುಗಳದ್ದು ಬಹಳ ಕುತೂಹಲ ಮೂಡಿಸುತ್ತದೆ.

Muslim Votes: ಜೆಡಿಎಸ್ ಬೇಡ, ಎಸ್​ಡಿಪಿಐ ಬೇಡ, ಒವೈಸಿಯೂ ಬೇಡ; ಮುಸ್ಲಿಮ್ ವೋಟ್ ಕೈ ಹಿಡಿದ ಇಂಟ್ರಸ್ಟಿಂಗ್ ಸ್ಟೋರಿ
ಮುಸ್ಲಿಂ ಮತದಾರರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 14, 2023 | 11:56 AM

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections 2023) ಕಾಂಗ್ರೆಸ್ ಪಕ್ಷ ಅಚ್ಚರಿ ಎನಿಸುವಷ್ಟು ನಿಚ್ಚಳ ಬಹುಮತ ಸಾಧಿಸಿದೆ. 35 ಸ್ಥಾನಗಳ ಅಸುಪಾಸಿನ ಸಂಖ್ಯೆಯ ಗುಂಗಿನಲ್ಲಿದ್ದ ಜೆಡಿಎಸ್ ಪಕ್ಷ ಮೂಲೆಗುಂಪಾಗಿದೆ. 90ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಜೆಡಿಎಸ್ ಜೊತೆ ಸೇರಿ ಮರಳಿ ಸರ್ಕಾರ ಮಾಡುವ ಎಲ್ಲೋ ಆಸೆಯಲ್ಲಿದ್ದ ಬಿಜೆಪಿಗೆ ಪ್ರಮುಖ ವಿರೋಧಪಕ್ಷದ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ. ಕೊನೆಯ ಕ್ಷಣದ ಮೋದಿ ಮ್ಯಾಜಿಕ್, ಬಜರಂಗಬಲಿ ಅಬ್ಬರ ಇವ್ಯಾವುವೂ ರಾಜ್ಯ ಮತದಾರನ ಮನಸ್ಸನ್ನು ಬದಲಾಯಿಸಲು ಆಗಿಲ್ಲ ಎಂಬುದು ಬಹಳ ಸ್ಪಷ್ಟವಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ಸರಳ ಬಹುಮತ ಪಡೆದಿದ್ದರೆ ಯಾರೂ ಅಚ್ಚರಿ ಪಡುತ್ತಿರಲಿಲ್ಲ. 135 ಸ್ಥಾನಗಳನ್ನು ಗೆದ್ದಿರುವುದು ಅನೇಕರಿಗೆ ಸೋಜಿಗ ಎನಿಸಿದೆ. ಬಿಜೆಪಿ ಸೋಲಿಗೆ ಹಲವು ಕಾರಣಗಳಿವೆ. ಅವನ್ನು ಹೊರತುಪಡಿಸಿ ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣಗಳೇನು? ಚುನಾವಣಾ ಫಲಿತಾಂಶದಲ್ಲಿ ಹಲವು ಇಂಟರೆಸ್ಟಿಂಗ್ ಸಂಗತಿಗಳು ಕಣ್ಣಿಗೆ ಕಾಣುತ್ತವೆ. ಅದರಲ್ಲಿ ಮುಸ್ಲಿಂ ವೋಟುಗಳದ್ದು ಬಹಳ ಕುತೂಹಲ ಮೂಡಿಸುತ್ತದೆ.

ಯಾರು ಯಾವ ಪಕ್ಷಕ್ಕೆ ಮತ ಹಾಕಿದರು ಎಂಬುದು ಯಾರಿಗೂ ತಿಳಿಯದು ಎಂಬುದು ಹೌದು. ಆದರೆ, ಒಂದು ಕ್ಷೇತ್ರದ ವಿವಿಧ ಸಮುದಾಯಗಳ ಮತಗಳು ಹೆಚ್ಚಾಗಿ ಎತ್ತ ಹೋಗಿರಬಹುದು ಎಂದು ಸತ್ಯಕ್ಕೆ ಹತ್ತಿರಹತ್ತಿರವೆನಿಸುವಷ್ಟು ಅಂದಾಜು ಮಾಡಬಹುದು. ಈ ಬಾರಿ ಚುನಾವಣೆಯಲ್ಲಿ ಮುಸ್ಲಿಮರ ಮತಗಳು ಹೆಚ್ಚು ಕವಲು ಒಡೆಯದೆಯೇ ಕಾಂಗ್ರೆಸ್​ನ ಕೈ ಹಿಡಿದಿರುವುದು ವೇದ್ಯವಾಗುತ್ತಿದೆ. ಮುಸ್ಲಿಮ್ ಮತಗಳು ಹೆಚ್ಚಾಗಿ ಕಾಂಗ್ರೆಸ್ ಪಾಲಿಗಿವೆ ಎಂದು ಹೇಗೆ ಹೇಳಲು ಸಾಧ್ಯ?

ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 13ರ ಅಸುಪಾಸಿನಲ್ಲಿ. ಇವರ ಸಂಖ್ಯೆ ಕೆಲವೊಂದಿಷ್ಟು ಕ್ಷೇತ್ರಗಳಲ್ಲಿ ಹೆಚ್ಚಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 60-65 ಕ್ಷೇತ್ರಗಳಲ್ಲಿ ನಿರ್ಣಾಯಕ ಎನಿಸುವಷ್ಟು ಸಂಖ್ಯೆಯಲ್ಲಿ ಮುಸ್ಲಿಮ್ ಮತಗಳಿವೆ. ಇಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಗಳನ್ನು ಗೆದ್ದಿರುವುದು ಗಮನಾರ್ಹ.

ಇದನ್ನೂ ಓದಿKarnataka Assembly Polls; ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಒಳ-ಒಪ್ಪಂದದಿಂದಾಗಿ ಸೋಲಬೇಕಾಯಿತು: ಸಿಟಿ ರವಿ

ಮುಸ್ಲಿಮರು ಈ ಹಿಂದೆಯೂ ಹೆಚ್ಚಾಗಿ ಕಾಂಗ್ರೆಸ್ ಪಕ್ಷಕ್ಕೆಯೇ ಮತ ಹಾಕಿರುವುದು. ಈ ಬಾರಿ ಕಾಂಗ್ರೆಸ್​ಗೆ ಮತ ಹಾಕಿರುವುದರಲ್ಲಿ ವಿಶೇಷ ಏನಿಲ್ಲ ಎನಿಸಬಹುದು. ಇದು ಭಾಗಶಃ ಹೌದು. ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮುಸ್ಲಿಮ್ ಮತಗಳು ಹೋಗುತ್ತಿದ್ದರೂ ಶೇ. 30ಕ್ಕಿಂತಲೂ ಹೆಚ್ಚಿನ ಮುಸ್ಲಿಮ್ ಮತಗಳನ್ನು ಜೆಡಿಎಸ್, ಎಸ್​ಡಿಪಿಐ, ಎಐಐಎಂ ಪಕ್ಷಗಳು ಸೆಳೆಯುತ್ತಿದ್ದವು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಎಸ್​ಡಿಪಿಐ ಮತ್ತು ಒವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಒಬ್ಬ ಅಭ್ಯರ್ಥಿಯೂ ಗೆದ್ದಿಲ್ಲ. ಇದಕ್ಕಿಂತ ಹೆಚ್ಚಾಗಿ ಈ ಯಾವ ಅಭ್ಯರ್ಥಿಯೂ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಕಾರಣವಾಗುವಷ್ಟು ಮತಗಳನ್ನೂ ಪಡೆದಿಲ್ಲ. ಇದು ಜೆಡಿಎಸ್ ವಿಚಾರಕ್ಕೂ ಅನ್ವಯ ಆಗುತ್ತದೆ.

ಕಾಂಗ್ರೆಸ್ ಪಕ್ಷ 15 ಮುಸ್ಲಿಮ್ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಅದರಲ್ಲಿ 9 ಮಂದಿ ಗೆದ್ದಿದ್ದಾರೆ. ಜೆಡಿಎಸ್ 22 ಮುಸ್ಲಿಮ್ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಒಬ್ಬರೂ ಗೆದ್ದಿಲ್ಲ ಎಂಬುದನ್ನು ಗಮನಿಸಬಹುದು. ಎಲ್ಲಿಯೂ ಯಾವ ಕ್ಷೇತ್ರದಲ್ಲೂ ಕಾಂಗ್ರೆಸ್ಸೇತರ ಮುಸ್ಲಿಮ್ ಅಭ್ಯರ್ಥಿಗಳಿಗೆ ಹೆಚ್ಚಿನ ವೋಟು ಸಿಕ್ಕಿಲ್ಲ ಎಂಬುದು ಎಲೆಕ್ಷನ್ ಡಾಟಾದಿಂದ ಗೊತ್ತಾಗುತ್ತದೆ.

ಇದನ್ನೂ ಓದಿKarnataka Assembly Polls: ಹೈಕಮಾಂಡ್ ಒಲವು ನಿಮ್ಮ ಪರ ಇದೆಯಾ ಅಂತ ಕೇಳಿದ್ದಕ್ಕೆ ಡಿಕೆ ಶಿವಕುಮಾರ್ ಹೇಗೆ ವರ್ತಿಸಿದರು ಅಂತ ನೋಡಿ!

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಮೊಯಿದೀನ್ ಬಾವಾ ಗಳಿಸಿದ ಮತ ಕೇವಲ 5,200 ಮಾತ್ರ. ಇಲ್ಲಿ ಬಿಜೆಪಿಯ ಭರತ್ ಶೆಟ್ಟಿ ಗೆದ್ದರೂ ಇನಾಯತ್ ಅಲಿ 70,000ದಷ್ಟು ಮತಗಳನ್ನು ಪಡೆದು ಗಮನ ಸೆಳೆದರು. ಮಂಗಳೂರು ಕ್ಷೇತ್ರದಲ್ಲಿ ಯುಟಿ ಖಾದರ್ ಎದುರು ಎಸ್​ಡಿಪಿಐನ ರಿಯಾಜ್ ಫರಂಗಿಪೇಟೆ, ಆಮ್ ಆದ್ಮಿಯ ಮೊಮಮ್ಮದ್ ಅಶ್ರಫ್ ಸ್ಪರ್ಧಿಸಿದ್ದರು. ಆದರೆ, ಎಸ್​ಡಿಪಿಐ ಅಭ್ಯರ್ಥಿ 15 ಸಾವಿರ ಮತ ಗಳಿಸಲು ಸಾಧ್ಯವಾದರೂ ಅದು ಯುಟಿ ಖಾದರ್ ಸೋಲಿಗೆ ಕಾರಣವಾಗುವಷ್ಟು ಆಗಲಿಲ್ಲ. ಎಎಪಿ ಅಭ್ಯರ್ಥಿಗೆ 400 ಮತಗಳೂ ಬೀಳಲಿಲ್ಲ. ಈ ಕ್ಷೇತ್ರದಲ್ಲಿ ಮುಸ್ಲಿಮ್ ಮತಗಳ ಪ್ರಮಾಣ ಶೇ. 45ರಷ್ಟಿದೆ. ಸುಮಾರು 90,000 ಮುಸ್ಲಿಮ್ ಮತಗಳಿವೆ. ಇದರಲ್ಲಿ ಶೇ. 25ರಷ್ಟು ಮುಸ್ಲಿಂ ಮತಗಳನ್ನು ಮಾತ್ರ ಎಸ್​ಡಿಪಿಐ ಅಭ್ಯರ್ಥಿ ಸೆಳೆಯಲು ಯಶಸ್ವಿಯಾಗಿದ್ದಾರೆ.

2013ರ ಚುನಾವಣೆಯಲ್ಲಿ ಎಸ್​ಡಿಪಿಐ ಅಭ್ಯರ್ಥಿ ಇಲ್ಲಿ ಕೇವಲ 4,000 ಮತ ಪಡೆದಿದ್ದರಾದರೂ ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಸ್​ಡಿಪಿಐನ ಬಲ ಗಮನರ್ಹವಾಗಿ ಹೆಚ್ಚಾಗಿದ್ದುದು ವೇದ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎಸ್​ಡಿಪಿಐ ಅಭ್ಯರ್ಥಿ ಗೆಲ್ಲದೇ ಹೋದರೂ ಕನಿಷ್ಠ 30,000 ಮತಗಳನ್ನಾದರೂ ಪಡೆಯುವ ನಿರೀಕ್ಷೆ ಇತ್ತು. ಆದರೆ, ಅದು ಆಗಲಿಲ್ಲ.

ಇದನ್ನೂ ಓದಿಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಮಾಸ್ಟರ್‌ ಮೈಂಡ್‌ ಸುನಿಲ್ ಕುನಗೋಳು: ಯಾರು ಈ ಸ್ಟ್ರ್ಯಾಟಜಿ ಸ್ಟಾರ್?

ಕಾಂಗ್ರೆಸ್ ಕಡೆ ಮುಸ್ಲಿಮರು ಪೂರ್ಣ ವಾಲಿದ್ದು ಯಾಕೆ?

ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮುಸ್ಲಿಮರ ಶೇ. 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿದ್ದು, ಕಾಂಗ್ರೆಸ್ ತಾನು ಮತ್ತೆ ಮೀಸಲಾತಿ ತರುವುದಾಗಿ ಹೇಳಿದ್ದು ಅ ಸಮುದಾಯದ ಮತದಾರರ ಧ್ರುವೀಕರಣಕ್ಕೆ ಕಾರಣವಾಗಿದ್ದಿರಬಹುದು. ಈ ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಬಹಳ ಸ್ಪಷ್ಟ ನಿಲುವು ತೆಗೆದುಕೊಂಡಿದ್ದು ಸಮುದಾಯದವರ ಹೆಚ್ಚಿನ ಬೆಂಬಲಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ತೋರುತ್ತದೆ.

ಇನ್ನು, ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಮುಸ್ಲಿಮರದಷ್ಟೇ ಅಲ್ಲ ಎಲ್ಲಾ ಸಮುದಾಯಗಳ ಮತಗಳು ಹೆಚ್ಚು ಸಿಕ್ಕಿವೆ. ಬಿಜೆಪಿಗೆ ಹಲವು ಕಡೆ ಭದ್ರಕೋಟೆಗಳನ್ನು ಕಟ್ಟಿಕೊಟ್ಟಿರುವ ಲಿಂಗಾಯತ ಸಮುದಾಯದ ಜನರು ಕಾಂಗ್ರೆಸ್ ಕಡೆ ತುಸು ವಾಲಿದ್ದು ಕಂಡುಬರುತ್ತದೆ. ಇನ್ನು, ಬ್ರಾಹ್ಮಣ ಸಮುದಾಯದ ಹೆಚ್ಚಿನ ಭಾಗ ಹೇಗೆ ಬಿಜೆಪಿಗೆ ಮತ ಹಾಕುತ್ತದೋ ಅದೇ ರೀತಿ ಈ ಬಾರಿ ಕುರುಬ ಸಮುದಾಯದ ಹೆಚ್ಚಿನ ವೋಟುಗಳು ಕಾಂಗ್ರೆಸ್​ಗೆ ಬಿದ್ದಿರುವ ಇಂಟರೆಸ್ಟಿಂಗ್ ಸಂಗತಿಯೂ ಇದೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:54 am, Sun, 14 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ