Magadi Election Results: ಮಾಗಡಿಯಲ್ಲಿ ಹಾಲಿ ಶಾಸಕನನ್ನು ಸೋಲಿಸಿ ಜಯ ಸಾಧಿಸಿದ ಬಾಲಕೃಷ್ಣ
Magadi Assembly Election Result 2023 Live Counting Updates: ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಎ.ಮಂಜುನಾಥ್, ಬಿಜೆಪಿಯಿಂದ ಪ್ರಸಾದ್ ಗೌಡ ಹಾಗೂ ಕಾಂಗ್ರೆಸ್ನಿಂದ ಹೆಚ್.ಸಿ.ಬಾಲಕೃಷ್ಣ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.

Magadi Assembly Elections Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಹೊರ ಬಿದ್ದಿದ್ದು ಕಾಂಗ್ರೆಸ್ನಿಂದ ಹೆಚ್.ಸಿ.ಬಾಲಕೃಷ್ಣ 93,956 ಮತಗಳಿಂದ ಜಯ ಗಳಿಸಿದ್ದಾರೆ. ಜೆಡಿಎಸ್ನ ಹಾಲಿ ಶಾಸಕ ಎ.ಮಂಜುನಾಥ್ 82,281 ಮತಗಳನ್ನು ಪಡೆದಿದ್ದಾರೆ ಹಾಗೂ ಬಿಜೆಪಿಯ ಪ್ರಸಾದ್ ಗೌಡ 20, 073 ಮತಗಳನ್ನು ಗಳಿಸಿದ್ದಾರೆ.
ಮಾಗಡಿ ವಿಧಾನಸಭಾ ಕ್ಷೇತ್ರದಿಂದ (Magadi Assembly Constituency) ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕ್ಷೇತ್ರದ ಶಾಸಕರಾಗಿರುವ ಎ.ಮಂಜುನಾಥ್ ಸ್ಪರ್ಧಿಸಿದ್ರು. ಇವರು ಜೆಡಿಎಸ್ ಜಿಲ್ಲಾಧ್ಯಕ್ಷರು ಮಾತ್ರವಲ್ಲದೇ, ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪರಮಾಪ್ತರು. ಕಾಂಗ್ರೆಸ್ನಲ್ಲಿದ್ದ ಮಂಜುನಾಥ್, ಜೆಡಿಎಸ್ಗೆ ಬಂದು 2018ರ ಚುನಾವಣೆಯಲ್ಲಿ ಸ್ವರ್ಧೆ ಮಾಡಿ ಹೆಚ್ಚು ಮತಗಳ ಅಂತರದಿಂದ ಗೆದಿದ್ದರು. ಈಗಾಗಲೇ ಪಂಚರತ್ನ ಯಾತ್ರೆ ನಡೆಸಿ ಕುಮಾರಸ್ವಾಮಿ ಪಾಂಚಜನ್ಯ ಮೊಳಗಿಸಿದ್ದರೆ, ಮನೆ ಮನೆ ಮಂಜಣ್ಣ ಕಾರ್ಯಕ್ರಮದ ಮೂಲಕ ಮತದಾರರ ಮನ ಗೆಲ್ಲಲ್ಲು ಹಾಲಿ ಶಾಸಕ ಮಂಜುನಾಥ್ ಹರಸಾಹಸ ಪಟ್ಟಿದ್ದರು.
ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ನಾಲ್ಕು ಭಾರಿ ಶಾಸಕರಾಗಿದ್ದಾರೆ. ಮೊದಲ ಬಾರಿಗೆ ಬಿಜೆಪಿಯಿಂದ ಗೆಲುವು ಸಾಧಿಸಿದ್ದರೆ, ಮೂರು ಬಾರಿಯು ಜೆಡಿಎಸ್ ನಿಂದ ಗೆಲುವು ಸಾಧಿಸಿದ್ದರು. ಈಗ ಕಾಂಗ್ರೆಸ್ ನಿಂದ ಗೆಲುವು ಸಾಧಿಸಲು ಹರಸಾಹಸ ಪಡುತ್ತಿದ್ದು, ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಕ್ಷೇತ್ರದಲ್ಲಿ ಒಮ್ಮೆ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಸಂಸದ ಡಿ.ಕೆ.ಸುರೇಶ್ ಸಹ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿದ್ದಾರೆ. ಜನಾರ್ಶಿವಾದ ಯಾತ್ರೆ, ಪ್ರಜಾ ಧ್ವನಿ, ಕಾಂಗ್ರೆಸ್ ಗ್ಯಾರೆಂಟಿ ಕಾರ್ಯಕ್ರಮಗಳ ಮೂಲಕ ಮತದಾರರನ್ನು ತಲುಪಿದ್ದಾರೆ.
ಹೊನ್ನು ಮಡಿಲು, ಸೀಮಂತ ಕಾರ್ಯಕ್ರಮ, ಮೂಗುತಿ ವಿತರಣೆ ಮೂಲಕ ಪ್ರಸಾದ್ ಗೌಡ ಭರ್ಜರಿ ಪ್ರಚಾರ ನಡೆಸಿದ್ದರು. ಇವರ ಬೆನ್ನಿಗೆ ಸಚಿವ ಅಶ್ವ ನಾರಾಯಣ್ ನಿಂತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
Published On - 1:04 am, Sat, 13 May 23