ಹಾವೇರಿ, ಜೂನ್ 4: 2008ರಲ್ಲಿ ಕ್ಷೇತ್ರ ಪುನರ್ ವಿಂಗಡೆಯಾದ ಬಳಿಕ ಹಾವೇರಿ ಲೋಸಕಭಾ ಕ್ಷೇತ್ರ (Haveri Lok Sabha Constituency) ಅಸ್ತಿತ್ವಕ್ಕೆ ಬಂತು. ಕ್ಷೇತ್ರ ವಿಂಗಡಣೆ ಬಳಿಕ 2009ರಿಂದ 2019ರ ವರೆಗೂ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ (BJP) ಅಭ್ಯರ್ಥಿ ಶಿವಕುಮಾರ ಉದಾಸಿ ಗೆಲ್ಲುತ್ತಾ ಬಂದಿದ್ದರು. ಶಿವಕುಮಾರ್ ಉದಾಸಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಬಳಿಕ, ಈ ಬಾರಿ ಟಿಕೆಟ್ ಅನ್ನು ಬಿಜೆಪಿ ಹಾಲಿ ಶಾಸಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ನೀಡಿತ್ತು. ಬಸವರಾಜ ಬೊಮ್ಮಾಯಿ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಎರಡು ದಶಕಗಳ ರಾಜಕೀಯ ಅನುಭವ ಹೊಂದಿರುವ ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಿಸ್ಪರ್ಧಿಯಾಗಿದ್ದ ಆನಂದಸ್ವಾಮಿ ಗಡ್ಡದೇವರಮಠ (Anandswamy Gaddadevarmath) ಅವರು ಸೋಲುಂಡಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,92,774 ಮತದಾರಿದ್ದಾರೆ. ಇದರಲ್ಲಿ 13,91,214 ಜನ ಮತಚಲಾಯಿಸಿದರು. 7,13,613 ಪುರುಷ, 6,77,577 ಮಹಿಳೆಯರು, 24 ಇತರೆ ಮತಚಲಾಯಿಸಿದ್ದಾರೆ. ಒಟ್ಟು ಶೇ 77.60 ರಷ್ಟು ಮತದಾನವಾಗಿದೆ.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 2009ರಿಂದ ಇಲ್ಲಿಯವರೆಗೂ ಬಿಜೆಪಿಯ ಅಭ್ಯರ್ಥಿ ಗೆಲವು ಸಾಧಿಸಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರಕ್ಕೆ 2009ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯಿಂದ ಶಿವಕುಮಾರ್ ಚನ್ನಬಸಪ್ಪ ಉದಾಸಿ ಮತ್ತು ಕಾಂಗ್ರೆಸ್ನಿಂದ ಸಲೀಮ ಅಹ್ಮದ್ ಸ್ಪರ್ಧಿಸಿದ್ದರು. ಬಿಜೆಪಿಯ ಶಿವಕುಮಾರ್ ಚನ್ನಬಸಪ್ಪ ಉದಾಸಿ ಅವರು ಕಾಂಗ್ರೆಸ್ನ ಸಲೀಮ ಅಹ್ಮದ್ ಅವರ ವಿರುದ್ಧ 87,920 ಅಂತರದಿಂದ ಗೆದ್ದಿದ್ದರು.
ನಂತರ 2014ರಲ್ಲಿ ನಡೆದ ಚುನಾವಣೆಯಲ್ಲೂ ಬಿಜೆಪಿಯ ಶಿವಕುಮಾರ್ ಚನ್ನಬಸಪ್ಪ ಉದಾಸಿ ಅವರೇ ಗೆದ್ದಿದ್ದರು. ಇವರ ವಿರುದ್ಧ ಕಾಂಗ್ರೆಸ್ನಿಂದ ಮತ್ತೆ ಸಲೀಮ ಅಹ್ಮದ್ ಅವರು ಸ್ಪರ್ಧಿಸಿ ಸೋಲುಂಡರು. 2014ರಲ್ಲಿ ಶಿವಕುಮಾರ್ ಉದಾಸಿಯವರು 5,66,970 ಮತಗಳನ್ನು ಪಡೆದಿದ್ದರು. ಸಲೀಮ ಅಹ್ಮದ್ ಅವರು 4,79,219 ಮತಗಳನ್ನು ಪಡೆದಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಂದು ಬಾರಿ ಶಿವಕುಮಾರ್ ಚನ್ನಬಸಪ್ಪ ಉದಾಸಿ ಅವರಿಗೆ ಟಿಕೆಟ್ ನೀಡಿತ್ತು. ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ಇಳಿದಿದ್ದ ಉದಾಸಿಯವರು ಮೂರನೇ ಬಾರಿಗೆ ವಿಜಯಶಾಲಿಯಾಗುವ ಮೂಲಕ ಹ್ಯಾಟ್ರಿಕ್ ಗೆಲವು ಸಾಧಿಸಿದ್ದರು. ಇನ್ನು ಇವರ ವಿರುದ್ಧ ಕಾಂಗ್ರೆಸ್ ಡಿಆರ್ ಪಾಟೀಲ್ ಅವರನ್ನು ಕಣಕ್ಕೆ ಇಳಿಸಿತ್ತು.
ಈ ಚುನಾವಣೆಯಲ್ಲಿ ಶಿವಕುಮಾರ್ ಉದಾಸಿಯವರು 6,83,660 ಮತಗಳನ್ನು ಪಡೆದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಡಿಆರ್ ಪಾಟೀಲ್ 5,42, 778 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು.
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:27 am, Tue, 4 June 24