ಲೋಕಸಭೆ ಫಲಿತಾಂಶ: ಪ್ರತಿಪಕ್ಷ ಸ್ಥಾನ ಯಾರಿಗೆ? ವಿಪಕ್ಷ ಸ್ಥಾನ ದೊರೆಯಲು ಎಷ್ಟು ಸೀಟು ಬೇಕು? ಇಲ್ಲಿದೆ ವಿವರ

|

Updated on: Jun 04, 2024 | 8:05 AM

Lok Sabha Election Result 2024; ಸಂಸತ್​​ನಲ್ಲಿ ಪ್ರತಿಪಕ್ಷದ ಆಯ್ಕೆಗೂ ನಿಯಮಗಳಿವೆ. ವಿರೋಧ ಪಕ್ಷದಲ್ಲಿ ಯಾರು ಕೂರಬೇಕು ಅನ್ನೋದು ಹೇಗೆ ನಿರ್ಧಾರವಾಗುತ್ತದೆ, ವಿರೋಧ ಪಕ್ಷದ ನಾಯಕನಿಗೆ ಯಾವೆಲ್ಲ ಸೌಲಭ್ಯಗಳು ಸಿಗುತ್ತವೆ? ಮಾಹಿತಿ ಇಲ್ಲಿದೆ.

ಲೋಕಸಭೆ ಫಲಿತಾಂಶ: ಪ್ರತಿಪಕ್ಷ ಸ್ಥಾನ ಯಾರಿಗೆ? ವಿಪಕ್ಷ ಸ್ಥಾನ ದೊರೆಯಲು ಎಷ್ಟು ಸೀಟು ಬೇಕು? ಇಲ್ಲಿದೆ ವಿವರ
ಸಂಸತ್ ಭವನ
Follow us on

ನವದೆಹಲಿ, ಜೂನ್ 4: ಲೋಕಸಭೆ ಚುನಾವಣೆ ಫಲಿತಾಂಶದ (Lok Sabha Election Result) ಚಿತ್ರಣ ಇಂದು ಸಂಜೆ ವೇಳೆಗೆ ಸ್ಪಷ್ಟವಾಗಲಿದೆ. 5 ವರ್ಷ ಅಧಿಕಾರದ ಗದ್ದುಗೆ ಯಾರದ್ದು, ಯಾರು ವಿರೋಧ ಪಕ್ಷದಲ್ಲಿ (Opposition Party) ಕೂರಬೇಕು ಎಂಬುದು ಗೊತ್ತಾಗಲಿದೆ. ದೇಶದ ಪ್ರಮುಖ ಸಮಸ್ಯೆಗಳನ್ನು ಎತ್ತುವ ಜವಾಬ್ದಾರಿ ವಿರೋಧ ಪಕ್ಷದ್ದು. ಸರ್ಕಾರವು ಸಾಂವಿಧಾನಿಕ ಭದ್ರತೆಯನ್ನು ಕಾಪಾಡಿಕೊಳ್ಳುವುದನ್ನು ಪ್ರತಿಪಕ್ಷಗಳು ನೋಡಿಕೊಳ್ಳಬೇಕು. ಸರ್ಕಾರದ ಕಾರ್ಯವೈಖರಿ ಬಗ್ಗೆ ಪ್ರತಿಕ್ರಿಯೆ ನೀಡುವುದು, ಅವರನ್ನು ಪ್ರಶ್ನಿಸುವುದು ಮತ್ತು ಅವರ ಕೆಲಸದ ಮೇಲೆ ನಿಗಾ ಇಡುವುದು ಪ್ರತಿಪಕ್ಷಗಳ ಕೆಲಸ. ಸದನದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಚರ್ಚೆಯು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೇ ಕಾರಣಕ್ಕೆ ಸದನದಲ್ಲಿ ಪ್ರತಿಪಕ್ಷಗಳಿಗೆ ಮಹತ್ವದ ಜವಾಬ್ದಾರಿ ಇದೆ.

ಇಂದು ಸಂಜೆಯೊಳಗೆ ಮತ ಎಣಿಕೆ ಫಲಿತಾಂಶ ಹೊರಬೀಳಲಿದ್ದು, ಪ್ರತಿಪಕ್ಷದ ಅಧ್ಯಕ್ಷ ಸ್ಥಾನ ಯಾರಿಗೆ ಎಂಬುದು ನಿರ್ಧಾರವಾಗಲಿದೆ.

ವಿರೋಧ ಪಕ್ಷ ಸ್ಥಾನ ಯಾರಿಗೆ? ಹೇಗೆ ನಿರ್ಧಾರವಾಗುತ್ತದೆ?

ಸದನದ ಒಟ್ಟು ಸ್ಥಾನಗಳಲ್ಲಿ ಶೇ 10ರಷ್ಟು ಸ್ಥಾನ ಹೊಂದಿರುವ ಪಕ್ಷಕ್ಕೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಅವಕಾಶ ನೀಡಲಾಗಿದೆ. ಅದೇ ಪಕ್ಷದ ಸಂಸದರೊಬ್ಬರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗುತ್ತಾರೆ. ಆದರೆ, ಯಾವುದೇ ವಿರೋಧ ಪಕ್ಷವು ಒಟ್ಟು ಸ್ಥಾನಗಳಲ್ಲಿ ಶೇ 10 ರಷ್ಟನ್ನು ಹೊಂದಿಲ್ಲದಿದ್ದರೆ, ಆ ಪರಿಸ್ಥಿತಿಯಲ್ಲಿ ಯಾರೂ ಸದನದಲ್ಲಿ ಪ್ರತಿ ಪಕ್ಷದ ನಾಯಕರಾಗಲು ಸಾಧ್ಯವಿಲ್ಲ.

ಸಂಸತ್ತಿನ ಉಭಯ ಸದನಗಳಲ್ಲಿ ವಿರೋಧ ಪಕ್ಷದ ನಾಯಕನಿಗೆ 1977 ರಲ್ಲಿ ಶಾಸನಬದ್ಧ ಮಾನ್ಯತೆ ನೀಡಲಾಯಿತು. ವಿಧಾನಸಭೆಗೂ ಇದೇ ನಿಯಮ ಅನ್ವಯಿಸುತ್ತದೆ. ಇಲ್ಲಿಯೂ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಶೇ 10ರಷ್ಟು ಸೀಟು ಪಡೆಯುವುದು ಅಗತ್ಯ.

17 ನೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ಯಾವುದೇ ಪಕ್ಷವು ಶೇ 10 ರಷ್ಟು ಸ್ಥಾನಗಳನ್ನು ಹೊಂದಿರಲಿಲ್ಲ. ಆದ್ದರಿಂದ ಯಾರೂ ಸದನದಲ್ಲಿ ವಿರೋಧ ಪಕ್ಷದ ನಾಯಕರಾಗಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಅಧೀರ್ ರಂಜನ್ ಚೌಧರಿ ಲೋಕಸಭೆಯಲ್ಲಿ ಕಾಂಗ್ರೆಸ್‌ನ ನಾಯಕರಾಗಿದ್ದಾರೆ, ಇದು ಎರಡನೇ ದೊಡ್ಡ ಪಕ್ಷವಾಗಿದೆ.

ಇದನ್ನೂ ಓದಿ: ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

1956ರಲ್ಲಿ ಅಂದಿನ ರಾಷ್ಟ್ರಪತಿ ಜಿ. ವಿ.ಮಾವಲಂಕರ್ ಅವರು ಸೂಚನಾ ಸಂಖ್ಯೆ 120-123 ರ ಅಡಿಯಲ್ಲಿ ಸಂಸತ್ತಿನಲ್ಲಿ ಮೊದಲ ಬಾರಿಗೆ ಶೇಕಡಾ 10 ರ ನಿಯಮವನ್ನು ತಂದಿದ್ದರು. ಈ ನಿಯಮವು ನೇರವಾಗಿ ವಿರೋಧ ಪಕ್ಷದ ನಾಯಕನ ಸ್ಥಾನಮಾನಕ್ಕೆ ಸಂಬಂಧಿಸಿದೆ. ವಿಶೇಷವೆಂದರೆ ಈ ಸ್ಥಾನಮಾನ ಪಡೆಯಲು ಸಂಸದರು ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಂಡಿರುವ ಪಕ್ಷಕ್ಕೆ ಸೇರಿರುವುದು ಕಡ್ಡಾಯವಾಗಿತ್ತು. ಲೋಕಸಭೆಯ ಕೋರಂ ಅನ್ನು ಪೂರ್ಣಗೊಳಿಸಲು ಪಕ್ಷವು 10 ಪ್ರತಿಶತದಷ್ಟು ಸ್ಥಾನಗಳನ್ನು ಹೊಂದಿರಬೇಕು. 1969ರಲ್ಲಿ ಚುನಾವಣೆ ನಡೆದಾಗ ಲೋಕಸಭೆಯಲ್ಲಿ ಮೊದಲ ಬಾರಿಗೆ ವಿರೋಧ ಪಕ್ಷವೊಂದು ಔಪಚಾರಿಕವಾಗಿ ಅಸ್ತಿತ್ವಕ್ಕೆ ಬಂತು.

ವಿರೋಧ ಪಕ್ಷದ ನಾಯಕನಿಗೆ ಏನು ಸೌಲಭ್ಯಗಳಿವೆ?

ಪ್ರತಿಪಕ್ಷದ ನಾಯಕ ಅಥವಾ ಸದನದಲ್ಲಿ ವಿರೋಧ ಪಕ್ಷದ ನಾಯಕ ಕ್ಯಾಬಿನೆಟ್ ಸಚಿವರಿಗೆ ಸಮಾನವಾದ ಸೌಲಭ್ಯಗಳನ್ನು ಪಡೆಯುತ್ತಾರೆ. ಅವರು ಕ್ಯಾಬಿನೆಟ್ ಮಂತ್ರಿಗೆ ಸಮಾನವಾದ ಸಂಬಳ, ಭತ್ಯೆಗಳು ಮತ್ತು ಇತರ ಅನೇಕ ಸೌಲಭ್ಯಗಳನ್ನು ಪಡೆಯುತ್ತಾರೆ. ವಿರೋಧ ಪಕ್ಷದ ನಾಯಕನ ಹುದ್ದೆಯನ್ನು ಸಂವಿಧಾನದಲ್ಲಿ ಉಲ್ಲೇಖಿಸದಿದ್ದರೂ ಸಂಸತ್ತಿನ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಲೋಕಸಭೆಯ ಕಲಾಪಗಳಿಗೆ ಅನ್ವಯವಾಗುವ ನಿಯಮಗಳು ಲೋಕಸಭೆಯ ಸ್ಪೀಕರ್‌ಗೆ ಸಂಸತ್ತಿನ ಕೆಳಮನೆಯ ಕಾರ್ಯನಿರ್ವಹಣೆಗೆ ಸೂಚನೆಗಳನ್ನು ನೀಡುವ ಅಧಿಕಾರವನ್ನು ಮಾತ್ರ ನೀಡುತ್ತದೆ.

ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ