ಕೊಯಮತ್ತೂರಿನಲ್ಲಿ ಅಣ್ಣಾಮಲೈ ಬಿಜೆಪಿಗೆ ವಿಜಯದ ಮಾಲೆ ಹಾಕಿಸುತ್ತಾರಾ? ಹೇಗಿದೆ ಸಾಧ್ಯತೆ? ಸಮಗ್ರ ವಿಶ್ಲೇಷಣೆ ಇಲ್ಲಿದೆ
ಕರ್ನಾಟಕದ ಸಿಂಗಂ ಖ್ಯಾತಿಯ ಮಾಜಿ ಐಪಿಎಸ್ ಕೆ ಅಣ್ಣಾಮಲೈ ಯಾವುದೇ ಕ್ಷೇತ್ರದಲ್ಲಿ ಕಾಲೂರಿದರೂ ತಮ್ಮ ಛಾಪು, ಅಧಿಪತ್ಯ ಸ್ಥಾಪಿಸುವ ವ್ಯಕ್ತಿತ್ವ ಹೊಂದಿದ್ದಾರೆ. ನರೇಂದ್ರ ಮೋದಿ ಪ್ರಧಾನಿ ಆಗುತ್ತಾರೆ ಎಂದು ಈ ಹಿಂದೆ ಬಹುಶಃ ವಾಜಪೇಯಿ ಅವರ ಅರಿವಿಗೆ ಬಂದಿತ್ತೇನೋ! ಅದೇ ರೀತಿ ಈಗ ಮೋದಿಗೆ ಅನ್ನಿಸುತ್ತಿದೆಯಂತೆ ಕಾಲಾಂತರದಲ್ಲಿ ಅಣ್ಣಾಮಲೈ ಪ್ರಧಾನಿ ಆಗಬಹುದು ಎಂದು. ಹಾಗಾದರೆ ಮೋದಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಯೋಗಿ ಆದಿತ್ಯನಾಥರು ಎಲ್ಲಿಗೆ ಹೋಗಬೇಕು? ಅದಕ್ಕೂ ಮುನ್ನ ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಅಣ್ಣಾಮಲೈ ಗೆಲುವಿನ ಸಾಧ್ಯತೆ ಹೇಗಿದೆ?
ಕರ್ನಾಟಕದ ಸಿಂಗಂ ಖ್ಯಾತಿಯ ಮಾಜಿ ಐಪಿಎಸ್ ಕೆ. ಅಣ್ಣಾಮಲೈ ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಪ್ರಸ್ತುತ ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯಾಧ್ಯಕ್ಷರೂ ಆಗಿರುವ ಅಣ್ಣಾಮಲೈ ಅವರು ಲೋಕ ಚುನಾವಣೆಯಲ್ಲಿ ಗೆಲ್ಲುತ್ತಾರೋ ಅಥವಾ ಅಪಜಯ ಅನುಭವಿಸುತ್ತಾರೋ ಅದು ಮತದಾರರಿಗೆ, ರಾಜಕೀಯ ಪರಿಣತರಿಗೆ ಬಿಟ್ಟ ವಿಷಯ. ಆದರೆ ಅವರ ಸೋಲು-ಗೆಲುವಿನ ಸಾಧ್ಯತೆಯ ಬಗ್ಗೆ ಊಹಾಪೋಹಗಳು, ಲೆಕ್ಕಾಚಾರಗಳು, ಸಮೀಕರಣಗಳು ಬಹಳವಾಗಿ ಹರಡುತ್ತಿದೆ.
ಕೊಯಮತ್ತೂರು ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿದೆ ಎಂಬುದು ಗಮನಾರ್ಹ. ಆದರೆ ಎಐಎಡಿಎಂಕೆಯೂ ಮೇಲುಗೈ ಹೊಂದಿದೆ. ಈ ಹಿಂದೆ ಇವೆರಡೂ ಮಿತ್ರ ಪಕ್ಷಗಳಾಗಿದ್ದವು. ಆದರೆ ಈ ಬಾರಿ ಮೈತ್ರಿ ಕಾರ್ಯಗತವಾಗಿಲ್ಲ. ಜಯಲಲಿತಾ ಅಣ್ಣಾ ಡಿಎಂಕೆಗೆ ಬಿಜೆಪಿ ಸಡ್ಡು ಹೊಡೆದು ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಕಣ ರಂಗೇರುತ್ತಿದೆ.
ಜಾತಿಯ ಡೈನಾಮಿಕ್ಸ್, ಎಸ್‌ಪಿ ವೇಲುಮಣಿ ಅಂಶ, ಅಲ್ಪಸಂಖ್ಯಾತರ ಮತಗಳು ಮತ್ತು ಪಕ್ಷದ ಆಂತರಿಕ ಸಮಸ್ಯೆಗಳು ಬಿಜೆಪಿಗೆ ಸವಾಲುಗಳನ್ನು ಒಡ್ಡುತ್ತವೆ. ಆದಾಗ್ಯೂ, ಪಕ್ಷವು ತನ್ನ ಬೆಂಬಲದ ನೆಲೆಯನ್ನು ಕ್ರೋಢೀಕರಿಸುವ ಕೆಲಸ ಮಾಡುತ್ತಿದೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ.
ನಾಯ್ಡು ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಎಐಎಡಿಎಂಕೆಯ ನಿರ್ಧಾರವು ಗೌಂಡರ್ ಬೆಂಬಲದ ನೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲದಿದ್ದರೂ, ಬಿಜೆಪಿ ತನ್ನ ಸಾಂಪ್ರದಾಯಿಕ ಮತದಾರರ ಬೆಂಬಲ, ಅಣ್ಣಾಮಲೈ ಅವರ ಜನಪ್ರಿಯತೆ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಆಧರಿಸಿದೆ. ಈ ಕ್ಷೇತ್ರದಲ್ಲಿ 2019ರಲ್ಲಿ ಮೋದಿ ವಿರೋಧಿ ಅಲೆ ಇತ್ತು. ಆದರೆ ಈ ಬಾರಿ ಮೋದಿ ಮತದಾರರ ಒಲವು ಸಂಪಾದಿಸಿದ್ದಾರೆ. ಹಾಗಾಗಿ ರಣಕಣ ರಂಗೇರಿದೆ.
ಗಮನಾರ್ಹ ಬೆಳವಣಿಗೆಯೆಂದರೆ ಅಣ್ಣಾಮಲೈ ಯಾವುದೇ ಕ್ಷೇತ್ರದಲ್ಲಿ ಕಾಲೂರಿದರೂ ತಮ್ಮ ಛಾಪು, ಅಧಿಪತ್ಯ ಸ್ಥಾಪಿಸುವ ವ್ಯಕ್ತಿತ್ವ ಹೊಂದಿದ್ದಾರೆ. ಈ ಹಿಂದೆ ಬಹುಶಃ ವಾಜಪೇಯಿ ಅವರ ಅವರಿವಿಗೆ ಬಂದಿತ್ತೇನೋ ನರೇಂದ್ರ ಮೋದಿ ಪ್ರಧಾನಿ ಆಗುತ್ತಾರೆ ಎಂದು. ಅದೇ ರೀತಿ ಈಗ ಮೋದಿಗೆ ಅನ್ನಿಸುತ್ತಿದೆಯಂತೆ ಅಣ್ಣಾಮಲೈ ಮುಂದಿನ ಪ್ರಧಾನಿ ಆಗಬಹುದು ಎಂದು. ಹಾಗಾದರೆ ಮೋದಿ ಉತ್ತರಾಧಿಕಾರಿ ಎಂದೇ ಬಿಂಬಿರವಾಗಿರುವ ಯೋಗಿ ಆದಿತ್ಯನಾಥರು ಎಲ್ಲಿಗೆ ಹೋಗಬೇಕು?
ಕೊಯಮತ್ತೂರು ಬಿಜೆಪಿಯ ಪ್ರಬಲ ಸ್ಥಾನಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದರೂ, ಇದು ಎಐಎಡಿಎಂಕೆ (ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ) ಭದ್ರಕೋಟೆಯಾಗಿದೆ. ಮತ್ತು ಈಗ ಎರಡು ಪಕ್ಷಗಳು ಮೈತ್ರಿ ಮಾಡಿಕೊಳ್ಳದಿರುವುದರಿಂದ ಮತದಾರರ ಒಲವು ಯಾರ ಕಡೆಗೆ ವಾಲುತ್ತದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಕಳೆದ ಬಾರಿ 2014ರಲ್ಲಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿರಲಿಲ್ಲ. ಆ ಸಾರ್ವತ್ರಿಕ ಚುನಾವಣೆಯಲ್ಲಿ ಎಐಎಡಿಎಂಕೆ ಶೇ. 37.24 ಮತ್ತು ಬಿಜೆಪಿ ಶೇ. 33.62ರಷ್ಟು ಮತ ಪಡೆದಿದ್ದವು. ಅದಾದ ಮೇಲೆ 2019 ರಲ್ಲಿ, ಎರಡು ಪಕ್ಷಗಳೂ ಮೈತ್ರಿ ಮಾಡಿಕೊಂಡಾಗ ಬಿಜೆಪಿ ಅಭ್ಯರ್ಥಿ ಸಿ ಪಿ ರಾಧಾಕೃಷ್ಣನ್ ಅವರಿಗೆ ಮತ್ತೆ ಸುಮಾರು ಶೇ 32 ರಷ್ಟು ಮತ ಪಡೆಯಲು ಮಾತ್ರವೇ ಸಾಧ್ಯವಾಯಿತು. ಹಾಗಾಗಿ ಎಐಎಡಿಎಂಕೆ ಪಕ್ಷದಿಂದ ಬಿಜೆಪಿಗೆ ಭಾರೀ ಪ್ರಮಾಣದಲ್ಲಿ ಮತಗಳು ಹರಿದುಬಂದವು ಅಂತೇನೂ ಹೇಳಲಾಗದು. ಆಗಿನ ಕಾಲಘಟ್ಟದಲ್ಲಿ ತಮಿಳುನಾಡಿನಲ್ಲಿ ಪ್ರಬಲವಾಗಿ ಪ್ರಧಾನಿ ಮೋದಿ ವಿರೋಧಿ ಅಲೆ ಕೇಳಿಬಂತು. ಜೊತೆಗೆ ಹಿರಿಯ ನಟ ಕಮಲ್ ಹಾಸನ್ ರಾಜಕೀಯ ಆರಂಗ್ರೇಟ್ರಂ ಮಾಡಿದ್ದರಿಂದ ಅವರ ಮಕ್ಕಳ್ ನೀತಿ ಮೈಯಂ (ಎಂಎನ್ಎಂ) ಸ್ಪರ್ಧೆಯಲ್ಲಿ ಇದ್ದುದ್ದರಿಂದ ಬಿಜೆಪಿ ಸಾಧನೆ ಹೆಳಿಕೊಳ್ಳುವಂಥದ್ದಾಗಿರಲಿಲ್ಲ ಎನ್ನಬಹುದು. ಎಂಎನ್ಎಂ ಪಕ್ಷದ ಮತ ಗಳಿಕೆ ಶೇ.12 ರಷ್ಟಿತ್ತು.
ಕೊಯಮತ್ತೂರು ಲೋಕಸಭಾ ಕ್ಷೇತ್ರವು ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ – ಸಿಂಗಾನಲ್ಲೂರು, ಪಲ್ಲಡಂ, ಸೂಲೂರ್, ಕವುಂಡಂಪಳಯಂ, ಕೊಯಮತ್ತೂರು ಉತ್ತರ ಮತ್ತು ಕೊಯಮತ್ತೂರು ದಕ್ಷಿಣ. ಇವುಗಳಲ್ಲಿ ಪಲ್ಲಡಂ, ಸೂಲೂರ್ ಮತ್ತು ಕವುಂಡಂಪಳಯಂ ಗ್ರಾಮಾಂತರ ಮತ್ತು ಅರೆ ನಗರ ಪಾಕೆಟ್‌ಗಳನ್ನು ಹೊಂದಿವೆ. ಉಳಿದ ಕ್ಷೇತ್ರಗಳು ನಗರ ಪ್ರದೇಶದಿಂದ ಕೂಡಿದೆ.
ಸೂಲೂರು, ಪಲ್ಲಡಂ ಮತ್ತು ಕವುಂಡಂಪಾಳ್ಯಂ ಅಂತಹ ಹಲವಾರು ಗ್ರಾಮೀಣ ಮತ್ತು ಅರೆ ನಗರಗಳ ಪಾಕೆಟ್ಸ್ ಹೊಂದಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷಕ್ಕೆ ಕಠಿಣ ಸವಾಲು ಇದೆ ಎಂಬುದು ಇಲ್ಲಿನ ಜನರ ನಾಡಿಮಿಡಿತವಾಗಿದೆ. ಅಣ್ಣಾಮಲೈ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಹೊರತಾಗಿಯೂ ಪಕ್ಷಕ್ಕೆ ಇರುವ ಇತರ ಪ್ರಮುಖ ಸವಾಲುಗಳೆಂದರೆ ಜಾತಿ ಬಲವರ್ಧನೆ, ಎಸ್‌ಪಿ ವೇಲುಮಣಿ ಅಂಶ, ಅಲ್ಪಸಂಖ್ಯಾತರ ಮತಗಳು ಮತ್ತು ಬಿಜೆಪಿಯಲ್ಲಿನ ಆಂತರಿಕ ಸಮಸ್ಯೆಗಳು.
ಬಿಜೆಪಿಗೆ ಕೊಯಮತ್ತೂರು ಗ್ರಾಮೀಣ ಸವಾಲು ಹೇಗಿದೆ:
ವಿಶೇಷವಾಗಿ ಕೊಯಮತ್ತೂರು ಗ್ರಾಮೀಣ ಪ್ರದೇಶದಲ್ಲಿ 2019 ರಲ್ಲಿ ಪ್ರಬಲವಾಗಿದ್ದ ಮೋದಿ ವಿರೋಧಿ ಅಲೆ ಈಗ ಕಡಿಮೆಯಾಗಿದೆ ಎಂದು ರಾಜಕೀಯ ಪರಿಣತರು ವ್ಯಾಖ್ಯಾನಿಸಿದ್ದಾರೆ. ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಕಟ್ಟಾ ಬೆಂಬಲಿಗರನ್ನು ಹೊಂದಿರುವುದರಿಂದ ಬಿಜೆಪಿಗೆ ಕಷ್ಟವಾಗಬಹುದು. ಓ ಲೋಕ ಕ್ಷೇತ್ರದಲ್ಲಿ ಈಗಿರುವ ಶಾಸಕರು ಎಐಎಡಿಎಂಕೆ ಪಕ್ಷದವರು. ಆ ಪಕ್ಷವು ಉತ್ತಮ ಮಟ್ಟದಲ್ಲಿ ಎರಡನೇ ಮತ್ತು ಮೂರನೇ ಹಂತದ ನಾಯಕರನ್ನು ಹೊಂದಿದೆ. ರಾಜ್ಯದಲ್ಲಿ 2006 ಮತ್ತು 2021 ರಲ್ಲಿ ಅಸೆಂಬ್ಲಿ ಚುನಾವಣೆಗಳನ್ನು ಸೋತಾಗಲೂ ಸಹ ಎಐಎಡಿಎಂಕೆ ಇಲ್ಲಿನ ಲೋಕಸಭಾ ಸೀಟ್ ಗೆದ್ದಿತ್ತು. ಇದೇ ವೇಳೆ ಪರ್ಯಾಯವಾಗಿ ಇಲ್ಲಿನ ಮತದಾರರಲ್ಲಿ ಕಮಲ ಅರಳುವಂತೆ ಬಿಜೆಪಿ ನೋಡಿಕೊಂಡಿತ್ತು ಎಂಬುದು ಗಮನಾರ್ಹ.
ಬಿಜೆಪಿ ಮತ್ತು ಎಐಎಡಿಎಂಕೆ ನಡುವಿನ ನೈಜ ಯುದ್ಧವೋ ಅಥವಾ ಡಿಎಂಕೆ ಸಹ ಕಣದಲ್ಲಿದ್ದು ಅದು ತ್ರಿಕೋನ ಸ್ಪರ್ಧೆಯೋ? ಎಂಬುದು ಸದ್ಯದ ಪ್ರಶ್ನೆ: ಡಿಎಂಕೆ ಅಭ್ಯರ್ಥಿ ಸ್ಪರ್ಧೆ ದುರ್ಬಲವಾಗಿದ್ದು ತುಲನಾತ್ಮಕವಾಗಿ ಕಡಿಮೆ ಹೆಸರುವಾಸಿಯಾಗಿರುವ ಕಾರಣ ಇದು ಬಿಜೆಪಿ ಅಣ್ಣಾಮಲೈ ಮತ್ತು ಎಐಎಡಿಎಂಕೆ ಅಭ್ಯರ್ಥಿ ಸಿಂಗೈ ಜಿ ರಾಮಚಂದ್ರನ್ ನಡುವಿನ ನಿಜವಾದ ಹೋರಾಟವೇ ಸರಿ ಎಂಬುದು ನೇರವಾಗಿ ಕೇಳಿಬರುತ್ತಿರುವ ಮಾತಾಗಿದೆ.
ರಾಮಚಂದ್ರನ್ ಅವರು ಪಕ್ಷದ ಐಟಿ ವಿಭಾಗದ ಮುಖ್ಯಸ್ಥರಾಗಿದ್ದಾರೆ ಮತ್ತು ಅಣ್ಣಾಮಲೈ ಅವರಂತೆಯೇ ಉತ್ತಮ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿದ್ದಾರೆ. ಇಬ್ಬರೂ ತಮ್ಮ ಎಂಜಿನಿಯರಿಂಗ್ ಪದವಿಗಳಿಗಾಗಿ PSG Technology College in Coimbatore ಗೆ ಹೋದವರು. ಆನಂತರ ಐಐಎಂ ವ್ಯಾಸಂಗ ಪಡೆದವರು.
ಕಳೆದ ಜೂನ್‌ನಿಂದ ಜೈಲಿನಲ್ಲಿರುವ ಸೆಂಥಿಲ್ ಬಾಲಾಜಿಗೆ ಜಾಮೀನು ದಕ್ಕಿಸಿಕೊಳ್ಳುವ ಸಲುವಾಗಿ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದು ಡಿಎಂಕೆ ಗಣಪತಿ ರಾಜ್‌ಕುಮಾರ್ ಎಂಬ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದು ಎಐಎಡಿಎಂಕೆ ಆರೋಪಿಸಿದೆ.
ಹಾಗಾದರೆ ಡಿಎಂಕೆ ರೇಸ್‌ನಲ್ಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್‌ಜಿ ಸೂರ್ಯ ಅವರು ಡಿಎಂಕೆ ತನಗೆ ಕಟಿಬದ್ಧವಾಗಿರುವ ಮತಬ್ಯಾಂಕ್ ಹೊಂದಿದೆ. ಅಂದರೆ ಸೈದ್ಧಾಂತಿಕವಾಗಿ ಒಲವು ಹೊಂದಿರುವ ಬೆಂಬಲಿಗರು ಮತ್ತು ಅಲ್ಪಸಂಖ್ಯಾತರು ಡಿಎಂಕೆಗೆ ಜೈ ಅನ್ನುತ್ತಾರೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. 2021 ರಲ್ಲಿ ಕೊಯಮತ್ತೂರು ಕ್ಷೇತ್ರದ ಎಲ್ಲಾ ಎಂಎಲ್ಎ ಸ್ಥಾನಗಳನ್ನು ಎಐಎಡಿಎಂಕೆ-ಬಿಜೆಪಿ ಮೈತ್ರಿಯಿಂದ ಗೆದ್ದಿದ್ದರೂ, ಕೆಲವು ಪಾಕೆಟ್ ಗಳಲ್ಲಿ ಮತ ಅಂತರವು ಅಷ್ಟೇನೂ ಹೆಚ್ಚಿರಲಿಲ್ಲ ಎಂಬ ದೃಷ್ಟಾಂತ ನೀಡಿದ್ದಾರೆ.
ಎಐಎಡಿಎಂಕೆಯ ಮೇಲಿನ ಆರೋಪಗಳ ಬಗ್ಗೆ ತಿರುಗೇಟು ನೀಡಿರುವ ಸೂರ್ಯ ಅವರು ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಒಳ ಒಪ್ಪಂದವಾಗಿರುವುದು ಢಾಳಾಗಿ ಕಂಡುಬರುತ್ತಿದೆ ಎಂದು ಝಾಡಿಸಿದ್ದಾರೆ. ಚೆನ್ನೈ ಸೆಂಟ್ರಲ್ ಮತ್ತು ತೂತುಕುಡಿಯಲ್ಲಿ ದಯಾನಿಧಿ ಮಾರನ್ ಮತ್ತು ಕನಿಮೊಳಿ ಸ್ಪರ್ಧಿಸುತ್ತಿರುವ ಉದಾಹರಣೆಗಳನ್ನು ನೀಡಿದ ಅವರು, ಡಿಎಂಕೆ ಜೊತೆಗಿನ ಒಳೊಪ್ಪಂದದಿಂದಾಗಿ ಎಐಎಡಿಎಂಕೆ ಆ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ ಅಥವಾ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಹೇಳಬಹುದು ಎಂದಿದ್ದಾರೆ.
ಕೊಯಮತ್ತೂರು ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತ ಯಾರತ್ತ?
ಕ್ಷೇತ್ರವು ಗಮನಾರ್ಹ ಪ್ರಮಾಣದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆಯನ್ನು ಹೊಂದಿದೆ. ಅವರು ಸಾಮಾನ್ಯವಾಗಿ ಡಿಎಂಕೆಗೆ ಮತ ಹಾಕುತ್ತಾ ಬಂದಿದ್ದರೂ, ಈ ಬಾರಿ ಎಐಎಡಿಎಂಕೆ ಪಕ್ಷವು ಬಿಜೆಪಿಯಿಂದ ಬೇರ್ಪಟ್ಟಿರುವುದರಿಂದ ಮತ್ತು ಅದರ ನಾಯಕ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಅಲ್ಪಸಂಖ್ಯಾತರನ್ನು ಓಲೈಸಲು ಹಲವಾರು ಪ್ರಯತ್ನಗಳನ್ನು ಮಾಡಿರುವುದರಿಂದ ಈ ಬಾರಿ ಅವರ ಒಲವು ಎಐಎಡಿಎಂಕೆ ಕಡೆಗೂ ವಾಲುವ ಸಾಧ್ಯತೆಯಿದೆ.
ಅಲ್ಪಸಂಖ್ಯಾತರ ಮತಗಳು, ವಿಶೇಷವಾಗಿ ಮುಸ್ಲಿಮರ ಮತಗಳು ವಿಭಜನೆಯಾಗುವ ಸಾಧ್ಯತೆಯಿದೆ ಎಂದು ಸೂರ್ಯ ಸಹ ಒಪ್ಪುತ್ತಾರೆ. ಆದರೆ ಅದೇ ಸಮಯದಲ್ಲಿ ಅಲ್ಪಸಂಖ್ಯಾತರು ಅಣ್ಣಾಮಲೈ ಅವರನ್ನು ಸೋಲಿಸಲು ಬಯಸಿದರೆ ಅವರು ಯಾವುದೋ ಒಂದು ದ್ರಾವಿಡ ಪಕ್ಷದ ಜೊತೆ ಕ್ರೋಢೀಕರಣಗೊಳ್ಲುವ ಅವಕಾಶವಿದೆ ಎಂದು ಹೇಳುತ್ತಾರೆ.
ಆದಾಗ್ಯೂ ಈ ಬಾರಿ ಎಐಎಡಿಎಂಕೆ ಪಕ್ಷದ ನಿಲುವುಗಳು ಮತ್ತು ಅಣ್ಣಾಮಲೈ ಮೇಲಿನ ನಿರಂತರ ದಾಳಿಯಿಂದಾಗಿ ಎಲ್ಲಾ ಮುಸ್ಲಿಂ ಮತಗಳು ಡಿಎಂಕೆಗೆ ಹೋಗದಿರಬಹುದು. ಅಂತಿಮವಾಗಿ ಇಲ್ಲಿ ಚುನಾವಣೆ ವಿಷಯವಾಗಿ ಜಮಾತ್ ತೆಗೆದುಕೊಳ್ಳುವ ನಿರ್ಣಯ ಅಲ್ಪಸಂಖ್ಯಾತರ ಮತದಾನದ ಮೇಲೆ ಪರಿಣಾಮ ಬೀರುತ್ತದೆ.
ಕೊಯಮತ್ತೂರಿನಲ್ಲಿ ಪಕ್ಷದ ಬಲಶಾಲಿ ಎಂದು ಪರಿಗಣಿಸಲ್ಪಟ್ಟಿರುವ ತೊಂಡಮಾಥೂರ್ ಅಸೆಂಬ್ಲಿ ಕ್ಷೇತ್ರದ ಎಐಎಡಿಎಂಕೆ ಶಾಸಕ ಎಸ್‌ಪಿ ವೇಲುಮಣಿ ಅವರ ಶಕ್ತಿಯನ್ನು ಸೋಲಿಸುವುದು ಅನಿವಾರ್ಯವಾಗಿದೆ. ವೇಲುಮಣಿ ಉತ್ತಮ ಸಂಖ್ಯೆಯಲ್ಲಿ ಸ್ಥಳೀಯರ ಒಲವನ್ನು ಸಂಪಾದಿಸಿದ್ದಾರೆ. ಕೊಯಮತ್ತೂರು ರಾಜಕೀಯದ ಒಳ ಮತ್ತು ಹೊರಗನ್ನು ಅರಿತವರಾಗಿದ್ದಾರೆ. ಹಾಗಾಗಿ ಇವರನ್ನು ಕಟ್ಟಿಹಾಕುವುದು ಅನಿವಾರ್ಯ ಎಂದು ಕ್ಷೇತ್ರದ ಬಿಜೆಪಿ ಸದಸ್ಯರೊಬ್ಬರು ಹೇಳುತ್ತಾರೆ.
ವೇಲುಮಣಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಬಹಳಷ್ಟು ಮಾಡುತ್ತಾರೆ. ಅವರ ಕುಟುಂಬದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಅವರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ. ಇದೆಲ್ಲದರಿಂದ ಮತದಾರರ ನಿಷ್ಠೆಯನ್ನು ಸಂಪಾದಿಸಿದ್ದಾರೆ. ಹಾಗಾಗಿ ಆತನನ್ನು ಸೋಲಿಸಲು ಕಷ್ಟವಾಗಬಹುದು ಎಂದು ವಿಶ್ಲೇಷಿಸಲಾಗಿದೆ.
ಜಾತಿಯ ವಿಷಯದ ಬಗ್ಗೆ ರಾಜಕೀಯ ವಿಮರ್ಶಕರು ಹೇಳುವುದೇನೆಂದರೆ ನಾಯ್ಡು ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಎಐಎಡಿಎಂಕೆಯ ನಿರ್ಧಾರವು ಅವರ ಮೇಲೆ ಪರಿಣಾಮ ಬೀರುವುದಿಲ್ಲ ಏಕೆಂದರೆ ಕ್ಷೇತ್ರದಲ್ಲಿರುವ ಮತ್ತೊಂದು ಪ್ರಬಲ ಗೌಂಡರ್ ಸಮುದಾಯವು ಎಐಎಡಿಎಂಕೆಯನ್ನು ತಮ್ಮದೇ ಪಕ್ಷವೆಂದು ಭಾವಿಸುತ್ತದೆ. ಅದರಲ್ಲೂ ಇಪಿಎಸ್ ಪ್ರಗತಿ ಸಾಧಿಸಿರುವುದನ್ನು ಕಂಡು ಇದು ಇನ್ನೂ ಹೆಚ್ಚಾಗಿದೆ. ಇಪಿಎಸ್ ಅವರು ಗೌಂಡರ್ ಸಮುದಾಯದಿಂದ ಮೊದಲ ಮುಖ್ಯಮಂತ್ರಿಯಾಗಿರುವುದು ಮತ್ತು ಇಪಿಎಸ್ ಸಂಪರ್ಕವು ಗೌಂಡರ್ ಸಮುದಾಯದವರಿಗೆ ಸುಲಭವಾಗಿರುವುದರಿಂದ ಗೌಂಡರ್ ಸಮುದಾಯವು ಎಐಎಡಿಎಂಕೆಗೆ ಹತ್ತಿರವಾಗಿದೆ.
ಕುತೂಹಲಕಾರಿ ಸಂಗತಿಯೆಂದರೆ ರಾಜ್‌ಕುಮಾರ್ ಮತ್ತು ಅಣ್ಣಾಮಲೈ ಇಬ್ಬರೂ ಗೌಂಡರ್ ಸಮುದಾಯಕ್ಕೆ ಸೇರಿದವರು. ಆದರೆ ಅವರಲ್ಲಿ ಯಾರೊಬ್ಬರೂ ‘ಗೌಂಡರ್’ ನಾಯಕರಾಗಿ ಕಂಡುಬರುವುದಿಲ್ಲ ಮತ್ತು ಅಣ್ಣಾಮಲೈ ಅವರು ಜಾತಿ ಮಿತಿಗಳನ್ನು ಮೀರಿ ಅನುಯಾಯಿಗಳನ್ನು ಸಂಪಾದಿಸಿದ್ದಾರೆ.
ಬಿಜೆಪಿಯೊಳಗಿನ ಆಂತರಿಕ ರಾಜಕಾರಣ ಅಣ್ಣಾಮಲೈ ಅವರ ಅವಕಾಶಕ್ಕೆ ಅಡ್ಡಿಯಾಗಬಹುದೇ?:
ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಾನು ಇಷ್ಟಪಡುವುದಿಲ್ಲ ಎಂದು ಜಗನ್ನಾಥನ್ ಹೇಳಿದರೆ, ಇದು ಅಣ್ಣಾಮಲೈ ಅವರ ಅವಕಾಶಗಳ ಮೇಲೆ ಪರಿಣಾಮ ಬೀರಬಹುದು ಎಂದು ನಾನು ಭಾವಿಸುವುದಿಲ್ಲ ಎಂದು ಸೂರ್ಯ ಹೇಳುತ್ತಾರೆ.
“ಹೆಚ್ಚೆಂದರೆ, ಅವರನ್ನು ಇಷ್ಟಪಡದ ಜನರು ಸಕ್ರಿಯವಾಗಿ ಕೆಲಸ ಮಾಡುವುದಿಲ್ಲ. ಅಭ್ಯರ್ಥಿಯ ಆಯ್ಕೆಗಾಗಿ ನಡೆದ ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಕೊಯಮತ್ತೂರಿನ ಬಹುಪಾಲು ಜಿಲ್ಲಾ ಮತ್ತು ರಾಜ್ಯ ಮಟ್ಟದ ಪದಾಧಿಕಾರಿಗಳು ಅಣ್ಣಾಮಲೈ ಅವರನ್ನು ಸ್ಪರ್ಧಿಸಲು ಬಯಸಿದ್ದರು ಎಂದು ಸೂರ್ಯ ಮಾಹಿತಿ ಹಂಚಿಕೊಂಡಿದ್ದಾರೆ.
ಅಣ್ಣಾಮಲೈ ಅವರನ್ನು ಗೆಲ್ಲಿಸಬಲ್ಲ ಅಂಶಗಳು ಹೀಗಿವೆ:
ಅಣ್ಣಾಮಲೈ ಗೆಲುವಿಗೆ ಕಾರಣವಾಗುವ ಅಂಶಗಳ ಬಗ್ಗೆ ಕೇಳಿದಾಗ ಪಕ್ಷದ ಮೂಲಗಳು ಹೇಳುವುದು ಹೀಗೆ: ಅವರು ಸಾಂಪ್ರದಾಯಿಕ ಬೆಂಬಲದ ನೆಲೆಗಟ್ಟನ್ನು ನೆಚ್ಚಿಕೊಂಡಿದ್ದಾರೆ. ಅವರು ವೈಯಕ್ತಿಕ ಜನಪ್ರಿಯತೆ ಮತ್ತು ಕೇಂದ್ರ ಸರ್ಕಾರದ ಪಿಎಂ ಆವಾಸ್, ಜಲ ಜೀವನ್ ಮಿಷನ್ ಮತ್ತು ಮುದ್ರಾ ಸಾಲಗಳಂತಹ ಯೋಜನೆಗಳ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ಹೇಳಿದರು.
ಡಿಎಂಕೆ ಭ್ರಷ್ಟ ಪಕ್ಷವಾಗಿದೆ ಎಂದು ಜನಮಾನಸದಲ್ಲಿ ಬೇರೂರಿದೆ. ಇತ್ತೀಚಿನ ಮಾದಕ ದ್ರವ್ಯ ದಂಧೆ, ಉದ್ಯೋಗಕ್ಕಾಗಿ ನಗದು ಹಗರಣದಲ್ಲಿ ಸೆಂಥಿಲ್ ಬಾಲಾಜಿ ಬಂಧನ, ಕೆ ಪೊನ್ಮುಡಿ ಅವರಿಗೆ ಶಿಕ್ಷೆ ವಿಧಿಸಿರುವುದು ಮತ್ತು ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧ ನಡೆದ ಇಡಿ ತನಿಖೆಯೂ ನಮಗೆ ಮತ ಪಡೆಯಲು ಸಹಾಯ ಮಾಡುತ್ತದೆ ಎಂದು ಸೂರ್ಯ ಆಶಿಸಿದ್ದಾರೆ.
ಮೋದಿ ಅವರು ಚುನಾವಣಾ ಕಣದಲ್ಲಿರುವಾಗ ಬಿಜೆಪಿಯು ಸಾಮಾನ್ಯವಾಗಿ ಪ್ರೀಮಿಯಂ ಮತಗಳನ್ನು ಪಡೆಯುತ್ತದೆ. ಅಂದರೆ ಮತ ಹಂಚಿಕೆಯಲ್ಲಿ ನೇರ ಜಿಗಿತ ಕಾಣುತ್ತದೆ. ಕೊಯಮತ್ತೂರಿನಲ್ಲಿಯೂ ಅದೇ ಆಗಬಹುದು ಎಂದು ನಾನು ನಿರೀಕ್ಷಿಸುತ್ತೇನೆ. ಇದು ಅಣ್ಣಾಮಲೈ ಇತರರ ವಿರುದ್ಧ ಮುನ್ನಡೆಯಲು ನೆರವಾಗುತ್ತದೆ ಎಂದವರು ಜಗನಾಥನ್.
ಪ್ರಚಾರವು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದ ನಂತರ ಸಮಾಜದ ಎಲ್ಲಾ ಸ್ತರಗಳಲ್ಲಿ ಅಂದರೆ ಬಡ, ಶ್ರೀಮಂತ ಮತ್ತು ಮಧ್ಯಮ ವರ್ಗವನ್ನು ಪಕ್ಷವು ಸೆಳೆಯುತ್ತಿದೆ. ಜನರು ಬದಲಾವಣೆಗಾಗಿ ಅಣ್ಣಾಮಲೈ ಅವರತ್ತ ನೋಡುತ್ತಿದ್ದಾರೆ. ಹಾಗಾಗಿ ತಾವು ಅಣ್ಣಾಮಲೈ ಗೆಲುವನ್ನು ಉತ್ಸುಕತೆಯಿಂದ ಆಶಿಸುವುದಾಗಿ ಜಗನಾಥನ್ ಅವರು ಹೇಳುತ್ತಾರೆ.
ಇನ್ನು ನಗರ ಪ್ರದೇಶಕ್ಕೆ ಬದಲಾವಣೆಯ ಅಗತ್ಯವಿದೆ. ಅಣ್ಣಾಮಲೈ ಅತ್ಯುತ್ತಮ ಆಯ್ಕೆಯಾಗಿದ್ದಾರೆ. ಸಂಸದರಾಗಿ ಆಯ್ಕೆಯಾದರೆ ಕ್ಷೇತ್ರಕ್ಕೆ ಅವರು ಹಾಟ್‌ಲೈನ್ ಆಗುವುದಾಗಿ ಅವರು ಈಗಾಗಲೇ ಹೇಳಿದ್ದಾರೆ.
ಅವರ ಉಮೇದುವಾರಿಕೆಯೇ ಒಂದು ಆಶೀರ್ವಾದವಾಗಿದೆ. ಕೊಯಮತ್ತೂರಿನ ಮತದಾರರು ಇದರ ಅತಿ ಹೆಚ್ಚು ಫಲಾನುಭವಿಯಾಗಲಿದ್ದಾರೆ. ಡಿಎಂಕೆ ಮತ್ತು ಎಐಎಡಿಎಂಕೆ ಕೂಡ ಸುಶಿಕ್ಷಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿವೆ. ಡಿಎಂಕೆ ಅಭ್ಯರ್ಥಿ ಪಿಎಚ್‌ಡಿ ಮತ್ತು ಎಐಎಡಿಎಂಕೆ ಅಭ್ಯರ್ಥಿ ಐಐಎಂ-ಎ ವ್ಯಾಸಂಗ ಪಡೆದವರಾಗಿದ್ದಾರೆ ಎಂದು ಅವರು ಒತ್ತಿ ಹೇಳಿದರು.
“ಕಳೆದ 10 ವರ್ಷಗಳಲ್ಲಿ ಕಳಪೆ ಪ್ರಾತಿನಿಧ್ಯದಿಂದಾಗಿ ಕೊಯಮತ್ತೂರು ಲೋಕಸಭಾ ಕ್ಷೇತ್ರವು ಬಹಳಷ್ಟು ಕಳೆದುಕೊಂಡಿದೆ. ಕೇಂದ್ರದಲ್ಲಿ ಮೋದಿ ಮತ್ತು ಇಲ್ಲಿ ಅಣ್ಣಾಮಲೈ ಇದ್ದರೆ ನಗರವು ತನ್ನ ನಿಜವಾದ ಸಾಮರ್ಥ್ಯವನ್ನು ‘ಅರ್ಥೈ’ಸಿಕೊಳ್ಳಲು ಸಾಧ್ಯವಾಗುತ್ತದೆ. ನಾವು ಕೇಂದ್ರೀಯ ಸಂಸ್ಥೆಗಳ ಸ್ಥಾಪನೆ, ಉತ್ತಮ ಹೂಡಿಕೆಗಳು ಮತ್ತು ಅತ್ಯುತ್ತಮ ಮೂಲಸೌಕರ್ಯಗಳನ್ನು ಪಡೆಯಲು ನೆರವಾದೀತು. ಕೊಯಮತ್ತೂರಿನಲ್ಲಿ ಅಣ್ಣಾಮಲೈಗೆ ಗೆಲುವಿನ ಮಾರ್ಗವಿದ್ದರೂ, ಮುಂದಿನ ಪ್ರಯಾಣ ಸವಾಲಿನದ್ದಾಗಿದೆ. ಇಲ್ಲಿ ಯಶಸ್ಸಿನ ಭರವಸೆ ಇದೆಯಾದರೂ ಕಠಿಣ ಹೋರಾಟ ಎದುರಿಸಬೇಕಾಗುತ್ತದೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.