Punjab Election Exit Poll Result 2022: ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸರಳ ಬಹುಮತ ಸಾಧ್ಯತೆ

TV9 Bharatvarsh/Polstrat Exit Poll ಪಂಜಾಬ್‌ನ ಒಟ್ಟು 117 ವಿಧಾನಸಭಾ ಸ್ಥಾನಗಳಲ್ಲಿ ಒಟ್ಟು 1304 ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಸರಳ ಬಹುಮತಕ್ಕೆ 59 ಸ್ಥಾನಗಳ ಅಗತ್ಯವಿದೆ. ಎಲ್ಲ ಅಭ್ಯರ್ಥಿಗಳ ಹಣೆಬರಹ ಇವಿಎಂಗಳಲ್ಲಿದ್ದು ಮಾರ್ಚ್ 10ರಂದು ಫಲಿತಾಂಶ ಹೊರಬಿದ್ದ ಬಳಿಕ ರಾಜ್ಯದಲ್ಲಿ ಯಾವ ಪಕ್ಷ ಸರ್ಕಾರ ರಚಿಸಲಿದೆ ಎಂಬುದು ನಿರ್ಧಾರವಾಗಲಿದೆ.

Punjab Election Exit Poll Result 2022: ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸರಳ ಬಹುಮತ ಸಾಧ್ಯತೆ
ಕೇಜ್ರಿವಾಲ್ ಜತೆ ಭಗವಂತ್ ಸಿಂಗ್ ಮಾನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Mar 07, 2022 | 7:47 PM

ಪಂಜಾಬ್ ವಿಧಾನಸಭಾ ಚುನಾವಣೆಗೆ (Punjab Assembly Election( ಸಂಬಂಧಿಸಿದಂತೆ ಟಿವಿ9 ಭಾರತ್ ವರ್ಷ್/ಪೋಲ್‌ಸ್ಟ್ರಾಟ್ ಚುನಾವಣೋತ್ತರ ಸಮೀಕ್ಷೆ ಫಲಿತಾಂಶಗಳು ಹೊರಬಿದ್ದಿವೆ. ಈ ಬಾರಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ (AAP) ಸರ್ಕಾರ ರಚಿಸಬಹುದು. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸರಳ ಬಹುಮತವನ್ನು ಪಡೆಯುವ ಸಾಧ್ಯತೆ ಇದೆ . ಹಾಗಾಗಿ ದೆಹಲಿಯ ನಂತರ, ಪಂಜಾಬ್‌ನಲ್ಲಿಯೂ ಅರವಿಂದ ಕೇಜ್ರಿವಾಲ್ ಅವರ ಪಕ್ಷವು ಸರ್ಕಾರವನ್ನು ರಚಿಸುವ ಸಾಧ್ಯತೆ ಇದೆ. TV9 Bharatvarsh / Pollstart ನ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಆಮ್ ಆದ್ಮಿ ಪಕ್ಷ (AAP) 56-61 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಅದೇ ವೇಳೆ ಆಡಳಿತರೂಢ ಕಾಂಗ್ರೆಸ್ 24-29 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಮತ್ತೊಂದೆಡೆ, ಅಕಾಲಿದಳ 22-26 ಸ್ಥಾನಗಳನ್ನು ಪಡೆಯಬಹುದು ಮತ್ತು ಬಿಜೆಪಿ ಮೈತ್ರಿಕೂಟವು 1-6 ಸ್ಥಾನಗಳನ್ನು ಮಾತ್ರ ಪಡೆಯುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, 0-3 ಸ್ಥಾನಗಳು ಪಕ್ಷೇತರರ ಖಾತೆಗೆ ಹೋಗಬಹುದು. ಒಟ್ಟು ಮತ ಹಂಚಿಕೆಯ ಬಗ್ಗೆ ಮಾತನಾಡುವುದಾದರೆ, ಎಎಪಿ 41.2 ಪ್ರತಿಶತ, ಕಾಂಗ್ರೆಸ್ ಶೇ 23.2, ಅಕಾಲಿದಳ ಶೇ 22.5 , ಬಿಜೆಪಿ ಮೈತ್ರಿಕೂಟವು ಶೇ 7.2 ಪ್ರತಿಶತ ಮತ್ತು ಪಕ್ಷೇತರರು  ಶೇ 5.9 ರಷ್ಟು ಮತಗಳನ್ನು ಪಡೆಯುತ್ತಾರೆ

ಆಮ್  ಆದ್ಮಿ ಪಕ್ಷ (AAP) ಕಾಂಗ್ರೆಸ್ ಅಕಾಲಿ ದಳ ಬಿಜೆಪಿ ಮೈತ್ರಿಕೂಟ ಇತರೆ ಒಟ್ಟು
ಒಟ್ಟು ಸೀಟು ಹಂಚಿಕೆ 56-61 24-29 22-26 1-6 0-3 117
ಒಟ್ಟು ಮತ ಹಂಚಿಕೆ (%) ಶೇ 41.2 ಶೇ 23.2 ಶೇ 22.5 ಶೇ 7.2 ಶೇ 5.9 ಶೇ 100.0

ಪಂಜಾಬ್‌ನಲ್ಲಿ ದಲಿತರು ಯಾರಿಗೆ ಮತ ಹಾಕಿದ್ದು? ಎಎಪಿ- ಶೇ 22.9 ಕಾಂಗ್ರೆಸ್-ಶೇ 46.9 ಅಕಾಲಿದಳ-ಶೇ 20.8 ಬಿಜೆಪಿ ಮೈತ್ರಿ -ಶೇ 5.7 ಇತರೆ-ಶೇ 3.6 ಸಿಖ್ಖರ ಮತ ಯಾರಿಗೆ ಎಎಪಿ- ಶೇ 45.2 ಕಾಂಗ್ರೆಸ್- ಶೇ 22.0 ಅಕಾಲಿದಳ- ಶೇ 25.4 ಬಿಜೆಪಿ ಮೈತ್ರಿ – ಶೇ 2.5 ಪ್ರತಿಶತ ಇತರೆ- ಶೇ 4.8

ಮುಸ್ಲಿಮರು ಯಾರಿಗೆ ಮತ ಹಾಕಿದ್ದು? ಎಎಪಿ – ಶೇ 41.0 ಕಾಂಗ್ರೆಸ್ – ಶೇ 37.48 ಅಕಾಲಿದಳ – ಶೇ 14.94 ಬಿಜೆಪಿ – ಶೇ 1.11 ಇತರೆ – ಶೇ 5.45

1304 ಅಭ್ಯರ್ಥಿಗಳ ಭವಿಷ್ಯ ಅತಂತ್ರ ಪಂಜಾಬ್‌ನ ಒಟ್ಟು 117 ವಿಧಾನಸಭಾ ಸ್ಥಾನಗಳಲ್ಲಿ ಒಟ್ಟು 1304 ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಸರಳ ಬಹುಮತಕ್ಕೆ 59 ಸ್ಥಾನಗಳ ಅಗತ್ಯವಿದೆ. ಎಲ್ಲ ಅಭ್ಯರ್ಥಿಗಳ ಹಣೆಬರಹ ಇವಿಎಂಗಳಲ್ಲಿದ್ದು ಮಾರ್ಚ್ 10ರಂದು ಫಲಿತಾಂಶ ಹೊರಬಿದ್ದ ಬಳಿಕ ರಾಜ್ಯದಲ್ಲಿ ಯಾವ ಪಕ್ಷ ಸರ್ಕಾರ ರಚಿಸಲಿದೆ ಎಂಬುದು ನಿರ್ಧಾರವಾಗಲಿದೆ. ಚುನಾವಣಾ ಆಯೋಗದ ಪ್ರಕಾರ, ರಾಜ್ಯದಲ್ಲಿ 1,02,00,996 ಮಹಿಳೆಯರು ಸೇರಿದಂತೆ 2,14,99,804 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

1304 ಅಭ್ಯರ್ಥಿಗಳಲ್ಲಿ 93 ಮಹಿಳೆಯರು ಮತ್ತು ಇಬ್ಬರು ತೃತೀಯಲಿಂಗಿಗಳು ಇದ್ದಾರೆ. ಕಳೆದ ವಿಧಾನಸಭೆಗೆ ಹೋಲಿಸಿದರೆ ಈ ಬಾರಿ ಪಂಜಾಬ್‌ನಲ್ಲಿ ಶೇಕಡಾ ಐದಕ್ಕಿಂತ ಕಡಿಮೆ ಮತದಾನವಾಗಿದೆ ಎಂಬುದನ್ನು ಸಹ ಗಮನಿಸಬೇಕು. ಪಂಜಾಬ್‌ನಲ್ಲಿ ಪ್ರಸ್ತುತ ವಿಧಾನಸಭೆಯ ಅವಧಿ ಮಾರ್ಚ್ 27 ರಂದು ಕೊನೆಗೊಳ್ಳಲಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ 2017ರಲ್ಲಿ ಶೇ.78.2ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ.71.95ರಷ್ಟು ಮತದಾನವಾಗಿದೆ. 2012 ರಲ್ಲಿ ಪಂಜಾಬ್‌ನ ರಾಜಕೀಯ ಇತಿಹಾಸದಲ್ಲಿ, ಅತಿ ಹೆಚ್ಚು ಮತದಾನದ ಪ್ರಮಾಣವು 78.6 ಪ್ರತಿಶತ ಆಗಿದ್ದು 2007 ರಲ್ಲಿ, ಮತದಾನದ ಪ್ರಮಾಣವು ಶೇ 75.4 ಆಗಿತ್ತು.

2017ರಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು 2017ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 77 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು . 2017 ರಲ್ಲಿ ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆಗಳನ್ನು ಎದುರಿಸಿದವು ಆದರೆ ಎಸ್‌ಎಡಿ ಮತ್ತು ಬಿಜೆಪಿ ಕೇವಲ 18 ಸ್ಥಾನಗಳನ್ನು ಗೆದ್ದವು. ಅದರಲ್ಲಿ ಎಸ್‌ಎಡಿ ಖಾತೆಗೆ 15 ಸ್ಥಾನಗಳು ಬಂದಿದ್ದು, ಬಿಜೆಪಿ ಖಾತೆಗೆ ಕೇವಲ 3 ಸ್ಥಾನಗಳು ಬಂದಿವೆ. ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 117 ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದಲ್ಲದೇ ಲೋಕ ಇನ್ಸಾಫ್ ಪಕ್ಷ 2 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಇದನ್ನೂ ಓದಿ: Breaking: ಉಕ್ರೇನ್​​ನಲ್ಲಿ ಭಾರತದ ಇನ್ನೊಬ್ಬ ವಿದ್ಯಾರ್ಥಿ ಸಾವು; ಇಸ್ಕೆಮಿಕ್ ಸ್ಟ್ರೋಕ್​​​ನಿಂದ ಮೃತಪಟ್ಟ ಪಂಜಾಬ್​​ ಯುವಕ

Published On - 7:36 pm, Mon, 7 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ