ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಆಯೋಗ ಮುಟ್ಟುಗೋಲು ಹಾಕಿಕೊಂಡ ಮೊತ್ತ ₹ 1000 ಕೋಟಿ

Assembly Elections 2021: ಚುನಾವಣಾ ಆಯೋಗದ ಮಾಹಿತಿ ಪ್ರಕಾರ ತಮಿಳುನಾಡಿನಿಂದ ಮುಟ್ಟುಗೋಲು ಹಾಕಿದ ನಗದು ₹236.69 ಕೋಟಿ, ₹5.27 ಕೋಟಿ ಮೌಲ್ಯದ ಮದ್ಯ ,₹ 2.22 ಕೋಟಿ ಮೌಲ್ಯದ ಮಾದಕ ವಸ್ತು, ₹25.64 ಕೋಟಿ ಮೌಲ್ಯದ ಉಚಿತ ಕೊಡುಗೆ, ₹176.46 ಕೋಟಿ ಮೌಲ್ಯದ ಬೆಲೆಬಾಳುವ ಲೋಹ ವಶ ಪಡಿಸಿಕೊಳ್ಳಲಾಗಿದೆ. ಇಲ್ಲಿ ವಶ ಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೊತ್ತ ₹446.28 ಕೋಟಿ.

  • TV9 Web Team
  • Published On - 19:39 PM, 16 Apr 2021
ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಆಯೋಗ ಮುಟ್ಟುಗೋಲು ಹಾಕಿಕೊಂಡ ಮೊತ್ತ ₹ 1000 ಕೋಟಿ
ಭಾರತೀಯ ಚುನಾವಣಾ ಆಯೋಗ (ಸಂಗ್ರಹ ಚಿತ್ರ)

ದೆಹಲಿ: ಪಂಚ ರಾಜ್ಯಗಳಲ್ಲಿನ ವಿಧಾನಸಭೆ ಚುನಾವಣೆಯ ವೇಳೆ ಚುನಾವಣಾ ಆಯೋಗವು ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸಿ ವಶ ಪಡಿಸಿಕೊಂಡಿದ್ದು ₹ 1000 ಕೋಟಿ . ಇದೇ ಮೊದಲ ಬಾರಿ ವಿಧಾನಸಭೆ ಚುನಾವಣೆ ವೇಳೆ ಆಯೋಗ ಇಷ್ಟೊಂದು ಮೊತ್ತ ಮುಟ್ಟುಗೋಲು  ಹಾಕಿದ್ದು ಎಂದು ಚುನಾವಣಾ ಆಯೋಗ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ವಶ ಪಡಿಸಿಕೊಂಡಿರುವ ಮೊತ್ತ ಗರಿಷ್ಠ ಆಗಿದೆ. ಚುನಾವಣೆಯ ಹೊತ್ತಲ್ಲಿ ರಾಜ್ಯಗಳ ಮೇಲೆ ನಿಗಾ ಇರಿಸಲು 5 ವಿಶೇಷ ವೆಚ್ಚ ನಿರೀಕ್ಷಕರು ಮತ್ತು 321 ವೆಚ್ಚ ನಿರೀಕ್ಷರನ್ನು ನಿಯೋಜಿಸಲಾಗಿತ್ತು. 25 ವಿಧಾನಸಭಾ ಕ್ಷೇತ್ರಗಳನ್ನು ಸೂಕ್ಷ್ಮ ಚುನಾವಣಾ ಕ್ಷೇತ್ರಗಳೆಂದು ಗುರುತಿಸಿ ನಿಗಾ ಇರಿಸಲಾಗಿತ್ತು.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಅಸ್ಸಾಂನಿಂದ ನಗದು ₹27.0 ಕೋಟಿ, ₹41.97 ಕೋಟಿ ಮೌಲ್ಯದ ಮದ್ಯ , ₹34.4 ಕೋಟಿ ಮೌಲ್ಯದ ಮಾದಕ ವಸ್ತು, ₹15.18 ಕೋಟಿ ಮೌಲ್ಯದ ಉಚಿತ ಕೊಡುಗೆ, ₹3.69 ಕೋಟಿ ಮೌಲ್ಯದ ಬೆಲೆಬಾಳುವ ಲೋಹ ವಶ ಪಡಿಸಿಕೊಳ್ಳಲಾಗಿದೆ. ಇಲ್ಲಿ ವಶ ಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೊತ್ತ $122.35 ಕೋಟಿ.

ಪುದುಚೇರಿಯಿಂದ ಮುಟ್ಟುಗೋಲು ಹಾಕಿದ ನಗದು ₹5.52 ಕೋಟಿ, ₹0.70 ಕೋಟಿ ಮೌಲ್ಯದ ಮದ್ಯ , ₹0.25 ಕೋಟಿ ಮೌಲ್ಯದ ಮಾದಕ ವಸ್ತು, ₹3.06 ಕೋಟಿ ಮೌಲ್ಯದ ಉಚಿತ ಕೊಡುಗೆ, ₹27.42 ಕೋಟಿ ಮೌಲ್ಯದ ಬೆಲೆಬಾಳುವ ಲೋಹ ವಶ ಪಡಿಸಿಕೊಳ್ಳಲಾಗಿದೆ. ಇಲ್ಲಿ ವಶ ಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೊತ್ತ ₹36.95 ಕೋಟಿ.

ತಮಿಳುನಾಡಿನಿಂದ ಮುಟ್ಟುಗೋಲು ಹಾಕಿದ ನಗದು ₹236.69 ಕೋಟಿ, ₹5.27 ಕೋಟಿ ಮೌಲ್ಯದ ಮದ್ಯ ,₹ 2.22 ಕೋಟಿ ಮೌಲ್ಯದ ಮಾದಕ ವಸ್ತು, ₹25.64 ಕೋಟಿ ಮೌಲ್ಯದ ಉಚಿತ ಕೊಡುಗೆ, ₹176.46 ಕೋಟಿ ಮೌಲ್ಯದ ಬೆಲೆಬಾಳುವ ಲೋಹ ವಶ ಪಡಿಸಿಕೊಳ್ಳಲಾಗಿದೆ. ಇಲ್ಲಿ ವಶ ಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೊತ್ತ ₹446.28 ಕೋಟಿ.

ಕೇರಳದಿಂದ ಮುಟ್ಟುಗೋಲು ಹಾಕಿದ ನಗದು ₹22.88 ಕೋಟಿ,  ₹5.16 ಕೋಟಿ ಮೌಲ್ಯದ ಮದ್ಯ , ₹4.06 ಕೋಟಿ ಮೌಲ್ಯದ ಮಾದಕ ವಸ್ತು, ₹1.95 ಕೋಟಿ ಮೌಲ್ಯದ ಉಚಿತ ಕೊಡುಗೆ, ₹50.86 ಕೋಟಿ ಮೌಲ್ಯದ ಬೆಲೆಬಾಳುವ ಲೋಹ ವಶ ಪಡಿಸಿಕೊಳ್ಳಲಾಗಿದೆ. ಇಲ್ಲಿ ವಶ ಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೊತ್ತ ₹84.91 ಕೋಟಿ.

ಪಶ್ಚಿಮ ಬಂಗಾಳದಿಂದ ಮುಟ್ಟುಗೋಲು ಹಾಕಿದ ನಗದು ₹50.71 ಕೋಟಿ, ₹30.11ಕೋಟಿ ಮೌಲ್ಯದ ಮದ್ಯ , ₹118.83 ಕೋಟಿ ಮೌಲ್ಯದ ಮಾದಕ ವಸ್ತು, ₹88.39 ಕೋಟಿ ಮೌಲ್ಯದ ಉಚಿತ ಕೊಡುಗೆ, ₹12.07 ಕೋಟಿ ಮೌಲ್ಯದ ಬೆಲೆಬಾಳುವ ಲೋಹ ವಶ ಪಡಿಸಿಕೊಳ್ಳಲಾಗಿದೆ. ಇಲ್ಲಿ ವಶ ಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೊತ್ತ ₹84.91ಕೋಟಿ.

ಉಪ ಚುನಾವಣೆಯಲ್ಲಿ ಮುಟ್ಟುಗೋಲು ಹಾಕಿದ ನಗದು ₹1.96 ಕೋಟಿ, ₹1.79 ಕೋಟಿ ಮೌಲ್ಯದ ಮದ್ಯ , ₹1.83 ಕೋಟಿ ಮೌಲ್ಯದ ಮಾದಕ ವಸ್ತು, ₹4.96 ಕೋಟಿ ಮೌಲ್ಯದ ಉಚಿತ ಕೊಡುಗೆ, ₹0.30 ಕೋಟಿ ಮೌಲ್ಯದ ಬೆಲೆಬಾಳುವ ಲೋಹ ವಶ ಪಡಿಸಿಕೊಳ್ಳಲಾಗಿದೆ. ಇಲ್ಲಿ ವಶ ಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೊತ್ತ ₹10.84 ಕೋಟಿ.

ಈ ರಾಜ್ಯಗಳಿಂದ ವಶ ಪಡಿಸಿಕೊಂಡಿರುವ ಒಟ್ಟು ನಗದು ಪ್ರಮಾಣ ₹344.85  ಕೋಟಿ, ಮದ್ಯ ₹85.01 ಕೋಟಿ, ಮಾದಕ ವಸ್ತುಗಳ ಮೌಲ್ಯ ₹161.60 ಕೋಟಿ, ಉಚಿತ ಕೊಡುಗೆಯ ಮೌಲ್ಯ ₹139.18 , ಬೆಲೆ ಬಾಳುವ ಲೋಹದ ಮೌಲ್ಯ ₹270.80, ಒಟ್ಟು ಮೊತ್ತ  ₹1001.44 ಆಗಿದೆ.

ಇದನ್ನೂ ಓದಿ:  ಚುನಾವಣಾ ಪ್ರಚಾರದ ವೇಳೆ ಕೊವಿಡ್​ ನಿಯಮ ಪಾಲಿಸದಿದ್ದರೆ ಕ್ರಮ: ರಾಜಕಾರಣಿಗಳಿಗೆ ಚುನಾವಣಾ ಆಯೋಗ ಎಚ್ಚರಿಕೆ

(Seizures in Assembly Elections 2021 Crosses Rs 1000 Crores says Election Commission of India)