ಮೈಸೂರು ಅರಮನೆಯಲ್ಲಿ ಪಟ್ಟದ ಆನೆ, ಕುದುರೆ ಮತ್ತು ಹಸುಗೆ ಪೂಜೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಎರಡನೇ ದಿನವಾದ ಇಂದು ಅರಮನೆಯಲ್ಲಿ ಆಚರಣೆಗಳು ಶುರುವಾಗಿವೆ. ಅರಮನೆಯಲ್ಲಿ 2ನೇ ದಿನದ ಖಾಸಗಿ ದರ್ಬಾರ್ ಪ್ರಕ್ರಿಯೆ ಆರಂಭವಾಗಿದೆ.

ಪಟ್ಟದ ಆನೆ, ಕುದುರೆ, ಹಸುಗೆ ಅರಮನೆಯಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ಅರಮನೆ ಆಗ್ನೇಯ ದಿಕ್ಕಿನಲ್ಲಿರುವ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಮಂಗಲ ವಾದ್ಯಗಳೊಂದಿಗೆ ತೆರಳಿ ಪಟ್ಟದ ಆನೆ ಮೇಲೆ ಚಾಮುಂಡೇಶ್ವರಿ ವಾಹನ ಸಿಂಹದ ಪ್ರತಿರೂಪವನ್ನ ಇರಿಸಿ ಪೂಜೆ ಮುಗಿಸಿ ಸದ್ಯ ಸ್ವಸ್ಥಾನಕ್ಕೆ ಪಟ್ಟದ ಆನೆ, ಕುದುರೆ ಹಾಗೂ ಹಸು ತಲುಪಿದೆ.

ಇನ್ನು ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ದಸರಾ ಗಜಪಡೆಯ ತಾಲೀಮು ಮತ್ತಷ್ಟು ಚುರುಕು ಪಡೆದಿದೆ. ಅಭಿಮನ್ಯುಗೆ ಮರದ ಅಂಬಾರಿಯನ್ನ ಹೊರಿಸಿ ತಾಲೀಮು ಮಾಡಲಾಗಿದೆ. 300 ಕೆ.ಜಿ.ಗೂ ಹೆಚ್ಚಿನ ತೂಕದ ಮರಳಿನ ಮೂಟೆಗಳು, 280 ಕೆ.ಜಿ. ಮರದ ಅಂಬಾರಿಯನ್ನು ಹೊರಿಸಿ ಅರಮನೆ ಆವರಣದಲ್ಲೇ ತಾಲೀಮು ನಡೆಸಲಾಗಿದೆ. ಗಜಪಡೆ ತಾಲೀಮಿಗೂ‌ ಮುನ್ನ ಸಾಂಪ್ರದಾಯಿಕವಾಗಿ ಯಾವುದೇ ವಿಘ್ನಗಳು ಬಾರದಿರಲಿ ಎಂದು ಪೂಜೆ ಮಾಡಲಾಯಿತು.

Related Tags:

Related Posts :

Category:

error: Content is protected !!