ತನ್ನ ಮೈಕಟ್ಟಿನಿಂದಲೇ ಎಲ್ಲರನ್ನು ಆಕರ್ಷಿಸುತ್ತಿದ್ದ ರಂಗ.. ಅಸಹಾಯಕನಾಗಿ ಕಾಡಾನೆ ದಾಳಿಗೆ ಬಲಿ

  • KUSHAL V
  • Published On - 14:25 PM, 24 Oct 2020

ಶಿವಮೊಗ್ಗ: ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದ ಸಾಕಾನೆಯೊಂದು ಕಾಡಾನೆ ದಾಳಿಯಿಂದ ಸಾವನ್ನಪ್ಪಿದೆ. ಬಿಡಾರದ ಅತ್ಯಂತ ಆಕರ್ಷಣೀಯ ಆನೆ ಎಂದೇ ಖ್ಯಾತಿ ಪಡೆದಿದ್ದ ಸಾಕಾನೆ ರಂಗ ಇಂದು ಕಾಡಾನೆಯ ದಂತ ತಿವಿತಕ್ಕೆ ಅಸುನೀಗಿದ್ದಾನೆ.

ಕಳೆದ ರಾತ್ರಿ ಕಾಡಾನೆ ಏಕಾಏಕಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸರಪಳಿಯಲ್ಲಿ ಬಂಧಿಯಾಗಿದ್ದ ರಂಗ ಅದರ ದಂತ ತಿವಿತಕ್ಕೆ ಬಲಿಯಾಗಿದ್ದಾನೆ. ತನ್ನ ಮೈಕಟ್ಟಿನಿಂದಲೇ ಎಲ್ಲರನ್ನು ಆಕರ್ಷಿಸಿದ್ದ ರಂಗ ಸರಪಳಿಯ ಬಂಧನದಿಂದಾಗಿ ಅಸಹಾಯಕನಾಗಿ ದಂತ ತಿವಿತಕ್ಕೆ ಸಾವನ್ನಪ್ಪಿದ್ದಾನೆ. ಸಕ್ರೆಬೈಲು ಕ್ಯಾಂಪ್​ನಲ್ಲಿ ಹುಟ್ಟಿದ್ದ ರಂಗ ಗೀತಾ ಎಂಬ ಹೆಣ್ಣು ಆನೆಗೆ ಜನಿಸಿದ್ದ. ಘಟನೆ ಬೆಳಕಿಗೆ ಬರುತ್ತಿದ್ದಂತ ಸ್ಥಳಕ್ಕೆ ಅರಣ್ಯಾಧಿಕಾರಿ ಮತ್ತು ವೈದ್ಯರ ತಂಡ ಆಗಮಿಸಿ ಪರಿಶೀಲನೆ ನಡೆಸಿತು.