ವಿಶೇಷ ಬಣ್ಣಗಳಿಂದ ಸಜ್ಜಾದವು ಪಟ್ಟದ ಆನೆಗಳು, ಚಿತ್ರಗಳ ಮೂಲಕ ಕಣ್ತುಂಬಿಕೊಳ್ಳಿ

ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಪಟ್ಟದ ಆನೆಗಳಿಗೆ ಅಲಂಕಾರ ನೆರವೇರಿದೆ. ನಾಡಹಬ್ಬದ ಮೆರಗನ್ನು ಹೆಚ್ಚಿಸುವ ಆನೆಗಳು ಬಣ್ಣಗಳಿಂದ ಸಜ್ಜಾಗಿವೆ.

ವಿಶೇಷ ಬಣ್ಣಗಳಿಂದ ವಿಕ್ರಮ ಮತ್ತು ಗೋಪಿ ಆನೆಗಳ ಮೇಲೆ ಬಣ್ಣದ ಚಿತ್ತಾರ ಬಿಡಿಸಲಾಗಿದೆ. ಕಲಾವಿದರು ತಮ್ಮ ಪರಿಶ್ರಮವನ್ನು ಹಾಕಿ ಪಟ್ಟದ ಆನೆಗಳಿಗೆ ರಾಜ ವೈಭವವನ್ನು ಹೆಚ್ಚಿಸುವ ಚಿತ್ರ ಬಿಡಿಸಿದ್ದಾರೆ. ಸೊಂಡಿಲಿನ ಭಾಗಕ್ಕೆ ಗಂಡಭೇರುಂಡ ಚಿಹ್ನೆ ಬರೆದು ಅಲಂಕಾರ ಮಾಡಲಾಗಿದೆ.

ಅಲಂಕಾರದ ನಂತರ ಪಟ್ಟದ ಆನೆಗಳು ಕಳಸ ಪೂಜೆಯಲ್ಲಿ ಭಾಗಿಯಾಗಿವೆ. ಕೋಡಿ ಸೋಮೇಶ್ವರ ದೇವಾಲಯದಿಂದ ಪಟ್ಟದ ಆನೆ, ಪಟ್ಟದ ಕುದುರೆ, ಒಂಟೆ, ಪಟ್ಟದ ಹಸುವನ್ನು ಸವಾರಿ ತೊಟ್ಟಿಗೆ ಕರೆತರಲಾಯಿತು. ಪೂಜೆ ಕೈಂಕರ್ಯದ ನಂತರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಖಾಸಗಿ ದರ್ಬಾರ್ ನಡೆಸಿದ್ರು.

Related Tags:

Related Posts :

Category:

error: Content is protected !!