ಪರಸ್ಪರ ಕೈ ಕೈ ಹಿಡಿದು ಹಸು, ಹುಲಿ ಓಟ, ಗದಗ್​ನಲ್ಲಿ ದೇಸೀ ಕ್ರೀಡೆ ಗಮ್ಮತ್ತು

, ಪರಸ್ಪರ ಕೈ ಕೈ ಹಿಡಿದು ಹಸು, ಹುಲಿ ಓಟ, ಗದಗ್​ನಲ್ಲಿ ದೇಸೀ ಕ್ರೀಡೆ ಗಮ್ಮತ್ತು

ಗದಗ: ಬೆಳಗ್ಗೆದ್ದು ಶಿಸ್ತಾಗಿ ರೆಡಿಯಾಗಿ ಆಫೀಸ್​ಗೆ ಹೋದ್ರೆ ಸಂಜೆ ಮನೆಗೆ ಬಂದು ಮತ್ತೆ ಕೆಲ್ಸ, ಊಟ ಅನ್ನೋದ್ರಲ್ಲೇ ದಿನ ಕಳ್ದೋಗ್ತಿತ್ತು. ಬಟ್ ಎಲ್ರೂ ಸೇರ್ಕೊಂಡು ತಮ್ಮ ಮಸ್ತಿಗೆ ಅಂತ್ಲೇ ಟೈಂ ಮಾಡ್ಕೊಂಡು ಪ್ರೋಗ್ರಾಂ ಫಿಕ್ಸ್ ಮಾಡಿದ್ರು. ಅಷ್ಟೇ. ಅವ್ರ ಖುಷಿ ಯಾಕೆ ಕೇಳ್ತೀರಾ.

ಹಗ್ಗಜಗ್ಗಾಟದಾಟ:
, ಪರಸ್ಪರ ಕೈ ಕೈ ಹಿಡಿದು ಹಸು, ಹುಲಿ ಓಟ, ಗದಗ್​ನಲ್ಲಿ ದೇಸೀ ಕ್ರೀಡೆ ಗಮ್ಮತ್ತುಇನ್ನೂ ಎಳೀ ಐಸಾ. ಜೋರಾಗ್ ಎಳೀ ಐಸಾ ಅಂತಾ ಹಗ್ಗಜಗ್ಗಾಟ.. ನದಿ ದಡ ಅಂತಾ ಜಂಪಿಂಗ್ ಆಟ.. ಕೈ ಕೈ ಹಿಡಿದು ಹಸು, ಹುಲಿ ಓಟ.. ಗುರಿ ಇಟ್ಟು ಹೊಡೆಯೋ ಚಿನ್ನಿದಾಂಡು ಸಾಹಸ.. ಅಬ್ಬಬ್ಬಾ.. ಇವ್ರ ಸ್ಪೋರ್ಟ್ಸ್ ಕ್ರೇಜ್ ಏನು.. ಕುಣಿದು ಕುಪ್ಪಳಿಸೋದೇನು.

ಹೊಡಿ ಒಂಬತ್ ಅಂತಾ ಬಿಂದಾಸ್ ಆಗಿ ಮಸ್ತಿ ಏನೋ ಮಾಡಿದ್ರು.. ಇಷ್ಟೆಲ್ಲಾ ಆಟ ಆಡಿದ್ರು ಅಂದ್ರೆ ಹೊಟ್ಟೆ ಚುರ್ ಅನ್ದೇ ಇರುತ್ತಾ.. ಸೋ ಅಂಥವ್ರಿಗಾಗೇ ರೆಡಿಯಾಗಿತ್ತು ನೋಡಿ ವೆರೈಟಿ ವೆರೈಟಿ ಖಾದ್ಯ.. ಹೋಳಿಗೆ, ಪಾಯ್ಸ, ಸ್ವೀಟ್, ಪಲ್ಯ, ಖಡಕ್ ರೊಟ್ಟಿ.. ಅಬ್ಬಬ್ಬಾ.. ಒಂದಾ ಎರಡಾ.. ಪ್ಲೇಟ್​ಗೆ ಹಾಕಿಸ್ಕೊಂಡು ಕುಂತ್ರು ಅಂದ್ರೆ ಭರ್ಜರಿ ಬ್ಯಾಟಿಂಗ್ ಮಾಡೋದೇ.

, ಪರಸ್ಪರ ಕೈ ಕೈ ಹಿಡಿದು ಹಸು, ಹುಲಿ ಓಟ, ಗದಗ್​ನಲ್ಲಿ ದೇಸೀ ಕ್ರೀಡೆ ಗಮ್ಮತ್ತುಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಟಿ ಮಂದಿಗೆ ಹಳ್ಳಿ ಸೊಗಡನ್ನು ಪರಿಚಯಿಸ್ಬೇಕು ಅಂತಾ ದೇಸೀ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಯುವಕ, ಯುವತಿಯರು, ಮಹಿಳೆಯರು, ಪುರುಷರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಸಾಂಪ್ರದಾಯಿಕ ಕ್ರೀಡೆಗಳನ್ನ ಆಡಿಸಿ ಹಳ್ಳಿ ಆಟಗಳ ಮಹತ್ವದ ಬಗ್ಗೆ ತಿಳಿದುಕೊಂಡ್ರು.

ಇನ್ನು ಕಾರ್ಯಕ್ರಮದಲ್ಲಿ ಚಿನ್ನಿದಾಂಡು, ಲಗೋರಿ, ಕುಂಟೆ ಬಿಲ್ಲೆ, ಹಗ್ಗಜಗ್ಗಾಟ, ಹಸು ಹುಲಿ ಆಟ ಹೀಗೆ ಅನೇಕ ಆಟಗಳನ್ನ ಆಡಿಸಲಾಯ್ತು. ಜತೆಗೆ ಉತ್ತರ ಕರ್ನಾಟಕ ಸ್ಟೈಲ್​ ಊಟವನ್ನು ಕೂಡಾ ನೀರೂರಿಸಿತ್ತು. ರೊಟ್ಟಿ, ಬದನೆಕಾಯಿ ಪಲ್ಯೆ, ಹಿಟ್ಟಿನ ಪಲ್ಯೆ, ಕೆಂಪು ಚಟ್ನಿ, ಶೇಂಗಾ ಚಟ್ನಿ, ರೊಟ್ಟಿ, ಎಳ್ಳು ಹೋಳಿಗೆ ಹೀಗೆ ಅನೇಕ ಬಗೆಯ ಖಾದ್ಯ ಎಲ್ಲರ ಬಾಯಿ ತಣಿಸಿತ್ತು.

ದಿನ ಕಳೆದಂತೆ ಮರೆಯಾಗ್ತಿರೋ ಹಳ್ಳಿ ಆಟಗಳ ಆಡಿ ಖುಷಿ ಪಡೋ ಚಾನ್ಸ್ ಗದಗ ಮಂದಿಗೆ ಸಿಕ್ಕಿತ್ತು. ಸೋ ಇಂಥಾ ಅವಕಾಶವನ್ನ ಮಿಸ್ ಮಾಡ್ಕೊಳ್ದೇ ಎಲ್ರೂ ಎಂಜಾಯ್ ಮಾಡಿ ಸ್ಪೆಷಲ್ ಊಟ ಸವಿದ್ರು.
, ಪರಸ್ಪರ ಕೈ ಕೈ ಹಿಡಿದು ಹಸು, ಹುಲಿ ಓಟ, ಗದಗ್​ನಲ್ಲಿ ದೇಸೀ ಕ್ರೀಡೆ ಗಮ್ಮತ್ತು

, ಪರಸ್ಪರ ಕೈ ಕೈ ಹಿಡಿದು ಹಸು, ಹುಲಿ ಓಟ, ಗದಗ್​ನಲ್ಲಿ ದೇಸೀ ಕ್ರೀಡೆ ಗಮ್ಮತ್ತು

, ಪರಸ್ಪರ ಕೈ ಕೈ ಹಿಡಿದು ಹಸು, ಹುಲಿ ಓಟ, ಗದಗ್​ನಲ್ಲಿ ದೇಸೀ ಕ್ರೀಡೆ ಗಮ್ಮತ್ತು

, ಪರಸ್ಪರ ಕೈ ಕೈ ಹಿಡಿದು ಹಸು, ಹುಲಿ ಓಟ, ಗದಗ್​ನಲ್ಲಿ ದೇಸೀ ಕ್ರೀಡೆ ಗಮ್ಮತ್ತು

, ಪರಸ್ಪರ ಕೈ ಕೈ ಹಿಡಿದು ಹಸು, ಹುಲಿ ಓಟ, ಗದಗ್​ನಲ್ಲಿ ದೇಸೀ ಕ್ರೀಡೆ ಗಮ್ಮತ್ತು

, ಪರಸ್ಪರ ಕೈ ಕೈ ಹಿಡಿದು ಹಸು, ಹುಲಿ ಓಟ, ಗದಗ್​ನಲ್ಲಿ ದೇಸೀ ಕ್ರೀಡೆ ಗಮ್ಮತ್ತು

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!