RBI Assistant Mains 2022 Exam: ಮೇ 8ರಂದು ಆರ್‌ಬಿಐ ಸಹಾಯಕ ಮುಖ್ಯ ಪರೀಕ್ಷೆ; ಪಠ್ಯಕ್ರಮ, ಪರೀಕ್ಷಾ ಮಾದರಿ ಕುರಿತ ಮಾಹಿತಿ ಇಲ್ಲಿದೆ
RBI Assistant Mains 2022 Exam Syllabus: ನೀವು ಭಾರತೀಯ ರಿಸರ್ವ್ ಬ್ಯಾಂಕ್ ನಡೆಸುವ ‘ಸಹಾಯಕ ಮುಖ್ಯ ಪರೀಕ್ಷೆ’ ಅರ್ಥಾತ್ ‘ಅಸಿಸ್ಟೆನ್ಸ್ ಮೇನ್ಸ್’ಗೆ ಹಾಜರಾಗಲು ಯೋಚಿಸಿದ್ದೀರಾ? ಪರೀಕ್ಷಾ ವಿಧಾನ, ಪಠ್ಯಕ್ರಮ ಮೊದಲಾದವುಗಳ ಕುರಿತ ಮಾಹಿತಿ ಇಲ್ಲಿದೆ.
ನೀವು ಭಾರತೀಯ ರಿಸರ್ವ್ ಬ್ಯಾಂಕ್ ನಡೆಸುವ ‘ಸಹಾಯಕ ಮುಖ್ಯ ಪರೀಕ್ಷೆ’ ಅರ್ಥಾತ್ ‘ಅಸಿಸ್ಟೆನ್ಸ್ ಮೇನ್ಸ್’ಗೆ ಹಾಜರಾಗಲು ಯೋಚಿಸಿದ್ದೀರಾ? ಪರೀಕ್ಷಾ ವಿಧಾನ, ಪಠ್ಯಕ್ರಮ ಮೊದಲಾದವುಗಳ ಕುರಿತ ಮಾಹಿತಿ ಇಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ 2022ರ ಮೇ 8ರಂದು ‘RBIಯ ಸಹಾಯಕ ನೇಮಕಾತಿ 2021’ (RBI Assistant 2021 Recruitment) ಅಡಿಯಲ್ಲಿ RBI ಸಹಾಯಕ ಮುಖ್ಯ ಪರೀಕ್ಷೆ-2022 (RBI Assistant Exams 2022) ನಡೆಸಲಿದೆ. RBI ಸಹಾಯಕ ಮುಖ್ಯ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಐದು ವಿಭಾಗಗಳಲ್ಲಿ ಪರೀಕ್ಷೆ ಎದುರಿಸಬೇಕಾಗುತ್ತದೆ. ಅವುಗಳೆಂದರೆ ರೀಸನಿಂಗ್, ಇಂಗ್ಲಿಷ್ ಭಾಷಾ ಪರೀಕ್ಷೆ, ನ್ಯೂಮರಿಕಲ್ ಎಬಿಲಿಟಿ, ಸಾಮಾನ್ಯ ಜ್ಞಾನ ಮತ್ತು ಕಂಪ್ಯೂಟರ್ ಜ್ಞಾನ. ಮುಖ್ಯ ಪರೀಕ್ಷೆಯನ್ನು 200 ಅಂಕಗಳಿಗೆ ನಡೆಸಲಾಗುತ್ತದೆ. ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ‘RBI ಸಹಾಯಕ ಪರೀಕ್ಷೆ 2022’ರ ಪಠ್ಯಕ್ರಮ ಮತ್ತು ಪರೀಕ್ಷಾ ಮಾದರಿಯ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಆರ್‌ಬಿಐ ಸಹಾಯಕ ಮುಖ್ಯ ಪರೀಕ್ಷೆ- 2022 ಪರೀಕ್ಷಾ ಮಾದರಿ ಹೇಗಿರಲಿದೆ?
RBI ಸಹಾಯಕ ಮುಖ್ಯ ಪರೀಕ್ಷೆ 2022ರ ಎಲ್ಲಾ ಪ್ರಶ್ನೆಗಳು ಬಹು ಆಯ್ಕೆಯ ಮಾದರಿಯಲ್ಲಿರುತ್ತವೆ. ಅಭ್ಯರ್ಥಿಗಳಿಗೆ ಪ್ರತಿ ಪ್ರಶ್ನೆಗೆ 5 ಆಯ್ಕೆಗಳನ್ನು ನೀಡಲಾಗುತ್ತದೆ, ಅದರಲ್ಲಿ ಸರಿಯುತ್ತರವಾಗಿರುವ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ.
ಪ್ರತಿ ವಿಭಾಗವು 40 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಗಳು ರೀಸನಿಂಗ್, ಇಂಗ್ಲಿಷ್ ಭಾಷೆ ಮತ್ತು ನ್ಯೂಮರಿಕಲ್ ಎಬಿಲಿಟಿ ಪರೀಕ್ಷೆಗೆ ತಲಾ 30 ನಿಮಿಷಗಳನ್ನು ಪಡೆಯುತ್ತಾರೆ. ಸಾಮಾನ್ಯ ಜ್ಞಾನದ ಪರೀಕ್ಷೆಗೆ 25 ನಿಮಿಷಗಳು ಮತ್ತು ಕಂಪ್ಯೂಟರ್ ಜ್ಞಾನ ವಿಭಾಗಕ್ಕೆ ಅಭ್ಯರ್ಥಿಗಳಿಗೆ 20 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
ಆರ್‌ಬಿಐ ಅಸಿಸ್ಟೆಂಟ್ ಮೇನ್ಸ್ ಪರೀಕ್ಷೆ ಒಟ್ಟು 135 ನಿಮಿಷಗಳ ಕಾಲ ಅಂದರೆ 2 ಗಂಟೆ 15 ನಿಮಿಷಗಳ ಕಾಲ ನಡೆಯುತ್ತದೆ. ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚಿತವಾವಗಿ ಅಭ್ಯರ್ಥಿಗಳು ಬರಬೇಕಾಗುತ್ತದೆ.
ಪರೀಕ್ಷೆಯಲ್ಲಿ ಅಂಕ ನೀಡುವ ವಿಧಾನ ಹೇಗೆ?
ಬಹುಆಯ್ಕೆಯ ಮಾದರಿಯ ಪ್ರಶ್ನೆಗಳಲ್ಲಿ ಸರಿಯಾಗಿ ಉತ್ತರಿಸಿದ ಪ್ರತಿ ಪ್ರಶ್ನೆಗೆ ಅಭ್ಯರ್ಥಿಗಳಿಗೆ 1 ಅಂಕವನ್ನು ನೀಡಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕವನ್ನು ಕಳೆಯಲಾಗುತ್ತದೆ.
ಆರ್‌ಬಿಐ ಸಹಾಯಕ ಮುಖ್ಯ ಪರೀಕ್ಷೆ- 2022 ಪಠ್ಯಕ್ರಮ ಹೇಗಿದೆ? ಇಲ್ಲಿದೆ ನೋಡಿ
ಮೇಲೆ ತಿಳಿಸಿದಂತೆ, ಅಭ್ಯರ್ಥಿಗಳು ರೀಸನಿಂಗ್, ಇಂಗ್ಲಿಷ್ ಭಾಷೆ, ನ್ಯೂಮರಿಕಲ್ ಎಬಿಲಿಟಿ, ಸಾಮಾನ್ಯ ಜ್ಞಾನ ಮತ್ತು ಕಂಪ್ಯೂಟರ್ ಜ್ಞಾನದ ಐದು ಪ್ರಮುಖ ಕ್ಷೇತ್ರಗಳಲ್ಲಿ ಪರೀಕ್ಷೆ ಎದುರಿಸಬೇಕಾಗುತ್ತದೆ. ಈ ವಿಭಾಗಗಳ ಪಠ್ಯಕ್ರಮ ಇಂತಿದೆ.
Reasoning: Number Series, Blood Relations, Analogy, Odd Man Out, Coding and Decoding, Directions Based Concept, Row Arrangements, Symbols, Statement Reading, Understanding
English Language: Reading Comprehension, Synonyms, Antonyms, Sentence Correction, Word Meanings, One Word Substitution, Sentence Rearrangement, Sentence Completion, Phrases, Active & Passive Voice, Cloze Test
Numerical Ability: Time and Distance, Time and Work, HCF and LCM, Simple and Compound Interest, Problems on Trains, Average, Probability, Allegations and Comparison, Permutation and Combination, Number System, Geometry, Mensuration, Percentage, Algebra, Trigonometry
General Awareness: Current Affairs – Global and India, Geography Concepts, History Concepts, Political Science, Banking Awareness, RBI Terms, Emoluments and Other Benefits, Acts and Laws related to Reserve Bank of India
Computer Knowledge: Languages, Basic Hardware and Software, History of Computers and related devices, Viruses, Hacking, Computer commands, Microsoft Office
ಅಭ್ಯರ್ಥಿಗಳು ಪರೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನೂ ವೀಕ್ಷಿಸಬಹುದು. ಮೇ 8ರಂದು ಪರೀಕ್ಷೆ ನಡೆಯಲಿದೆ. ಇನ್ನೂ ಹೆಚ್ಚಿನ ಮಾಹಿತಿಗೆ ಆಸಕ್ತರು https://rbi.org.in/ ಗೆ ಭೇಟಿ ನೀಡಬಹುದು.
ಇದನ್ನೂ ಓದಿ: Horoscope Today- ದಿನ ಭವಿಷ್ಯ; ಈ ರಾಶಿಯ ಕೆಲವರಿಗೆ ಸ್ಥಳ ಬದಲಾವಣೆ ಅಥವಾ ಉದ್ಯೋಗ ವರ್ಗಾವಣೆ ಸಾಧ್ಯ
IRCON Recruitment 2022: ಇಂಡಿಯನ್ ರೈಲ್ವೇ ಕನ್ಸ್ಟ್ರಕ್ಷನ್ನಲ್ಲಿ ಉದ್ಯೋಗಾವಕಾಶ: ವೇತನ 36 ಸಾವಿರ ರೂ.
Published On - 1:39 pm, Fri, 29 April 22