ಹಾಲಿವುಡ್​ ನಿರ್ದೇಶಕನ ಜತೆ ಗನ್​ ಹಿಡಿದು ಶೂಟಿಂಗ್​​ಗೆ ಇಳಿದ ಯಶ್​; ಅಮೆರಿಕದಲ್ಲಿ ರಾಕಿ ಭಾಯ್ ಹವಾ

ಯಶ್ ಅವರು ಜೆರ್ರಿಯನ್ನು ಭೇಟಿ ಮಾಡಿದ್ದು ಏಕೆ? ಇಬ್ಬರೂ ಒಟ್ಟಾಗಿ ಸಿನಿಮಾ ಮಾಡುತ್ತಾರಾ? ಮಾಡಿದರೆ ಅದು ಹಾಲಿವುಡ್​ ಚಿತ್ರವೇ? ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದೆ.

ಹಾಲಿವುಡ್​ ನಿರ್ದೇಶಕನ ಜತೆ ಗನ್​ ಹಿಡಿದು ಶೂಟಿಂಗ್​​ಗೆ ಇಳಿದ ಯಶ್​; ಅಮೆರಿಕದಲ್ಲಿ ರಾಕಿ ಭಾಯ್ ಹವಾ
ಯಶ್
TV9kannada Web Team

| Edited By: Rajesh Duggumane

Sep 29, 2022 | 2:46 PM

ರಾಕಿಂಗ್ ಸ್ಟಾರ್ ಯಶ್ (Yash) ಅವರ ಮುಂದಿನ ನಡೆಯ ಬಗ್ಗೆ ಫ್ಯಾನ್ಸ್​ ಊಹಿಸಿದ್ದೆಲ್ಲವೂ ಸುಳ್ಳಾಗುತ್ತಿದೆ. ಅವರ ಮುಂದಿನ ಹೆಜ್ಜೆಯನ್ನು ಯಾರಿಂದಲೂ ಊಹಿಸಲು ಸಾಧ್ಯವಾಗುತ್ತಿಲ್ಲ. ಅವರ ಮುಂದಿನ ಚಿತ್ರ ಯಾವುದು ಎಂಬುದು ಅನೇಕರ ಪ್ರಶ್ನೆ. ಇದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಹೀಗಿರುವಾಗಲೇ ಹಾಲಿವುಡ್​​ನ (Hollywood) ನಿರ್ದೇಶಕನ ಜತೆ ಯಶ್ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಯಶ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದ ಮತ್ತಷ್ಟು ಕುತೂಹಲ ಹೆಚ್ಚಿದೆ.

ಯಶ್ ಅವರು ಹಾಲಿವುಡ್​ ನಟ, ನಿರ್ದೇಶಕ ಜೆಜೆ ಪೆರ್ರಿ ಅವರನ್ನು ಭೇಟಿ ಮಾಡಿದ್ದಾರೆ. ಅಮೆರಿಕದ Taran Tactical Innovations ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಜೆರ್ರಿ ಜತೆ ಸೇರಿ ಗನ್​ ಹಿಡಿದು ಶೂಟಿಂಗ್ ಮಾಡಿದ್ದಾರೆ. ಈ ಸಮಯವನ್ನು ಯಶ್ ಅವರು ಸಖತ್ ಎಂಜಾಯ್ ಮಾಡಿದ್ದಾರೆ. ಆ ವಿಡಿಯೋವನ್ನು ಯಶ್​ ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

‘ಟಾರ್ಗೆಟ್ ತಲುಪಲು ಯಾವಾಗಲೂ ಒಂದು ಮಾರ್ಗ ಇರುತ್ತದೆ. ಅದನ್ನು ಗುರುತಿಸುವುದು ಒಂದು ಚಾಲೆಂಜ್. ಧನ್ಯವಾದಗಳು ಜೆರ್ರಿ. ಎಂತಹ ಅದ್ಭುತ ದಿನ’ ಎಂದು ಯಶ್ ಬರೆದುಕೊಂಡಿದ್ದಾರೆ. ಜತೆಗೆ ‘ಕೆಜಿಎಫ್​ 2’ನಲ್ಲಿ ಬಳಕೆ ಆಗಿದ್ದ ಕಲಾಶ್​ನಿಕೋವ್ ಗನ್​ ಅನ್ನು ನೆನಪಿಸಿಕೊಂಡಿದ್ದಾರೆ ಅವರು. ಕೇವಲ ಎರಡು ಗಂಟೆಗಳಲ್ಲಿ ಈ ವಿಡಿಯೋ 25 ಲಕ್ಷ ಬಾರಿ ವೀಕ್ಷಣೆ ಕಂಡಿದೆ.

ಯಶ್ ಅವರು ಜೆರ್ರಿಯನ್ನು ಭೇಟಿ ಮಾಡಿದ್ದು ಏಕೆ? ಇಬ್ಬರೂ ಒಟ್ಟಾಗಿ ಸಿನಿಮಾ ಮಾಡುತ್ತಾರಾ? ಮಾಡಿದರೆ ಅದು ಹಾಲಿವುಡ್​ ಚಿತ್ರವೇ? ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಇದಕ್ಕೆ ಉತ್ತರ ನೀಡುವ ಗೋಜಿಗೆ ಯಶ್ ಹೋಗಿಲ್ಲ.

View this post on Instagram

A post shared by Yash (@thenameisyash)

ಇದನ್ನೂ ಓದಿ: ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಬೈಕ್ ರೇಸರ್ ಐಶ್ವರ್ಯಾ, ‘ಮಂಗಳಗೌರಿ ಮದುವೆ’ ಖ್ಯಾತಿಯ ಕಾವ್ಯಶ್ರೀ

ಇದನ್ನೂ ಓದಿ

ಯಶ್ ಮುಂದಿನ ಚಿತ್ರ ನಿರ್ದೇಶಕ ನರ್ತನ್ ಜತೆಗೆ ಎಂದು ಹೇಳಲಾಗುತ್ತಿದೆ. ‘ಮಫ್ತಿ’ ಸಿನಿಮಾದಿಂದ ನರ್ತನ್​ ದೊಡ್ಡ ಮಟ್ಟದ ಯಶಸ್ಸು ಪಡೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್ ಕೂಡ ನಟಿಸಲಿದ್ದಾರೆ ಎಂದು ವರದಿ ಆಗಿದೆ. ಆದರೆ, ಈ ಬ ಗ್ಗೆ ಈವರೆಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಶಂಕರ್ ಜತೆಗೂ ಯಶ್ ಸಿನಿಮಾ ಮಾಡ್ತಾರೆ ಎನ್ನಲಾಗುತ್ತಿದೆ. ಆ ಬಗ್ಗೆಯೂ ಯಾವುದೇ ಸ್ಪಷ್ಟನೆ ಇಲ್ಲ. ಶಂಕರ್ ಸದ್ಯ ಕಮಲ್ ಹಾಸನ್ ಹಾಗೂ ರಾಮ್ ಚರಣ್ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಕಾರಣದಿಂದ ಶಂಕರ ಜತೆಗಿನ ಯಶ್ ಸಿನಿಮಾ ಸದ್ಯಕ್ಕಂತೂ ಸೆಟ್ಟೇರುವುದು ಅನುಮಾನ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada