ಪ್ರೆಗಾ ನ್ಯೂಸ್​ ಹಿಡಿದು ಪೋಸ್​ ನೀಡಿದ ಕಾಜಲ್​; ಏನಿದು ಹೊಸ ಸುದ್ದಿ?

TV9 Digital Desk

| Edited By: Rajesh Duggumane

Updated on: Oct 13, 2021 | 6:01 PM

ಹೀರೋಯಿನ್​ಗಳು ತಮ್ಮ ವೃತ್ತಿ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಈ ಕಾರಣಕ್ಕೆ ಮದುವೆ ಆದ ನಂತರ ಮಗು ಮಾಡಿಕೊಳ್ಳೋಕೆ ವಿಳಂಬ ಮಾಡುತ್ತಾರೆ. ಆದರೆ, ಕಾಜಲ್​ ಈ ವಿಚಾರದಲ್ಲಿ ಹಾಗಿಲ್ಲ.

ಪ್ರೆಗಾ ನ್ಯೂಸ್​ ಹಿಡಿದು ಪೋಸ್​ ನೀಡಿದ ಕಾಜಲ್​; ಏನಿದು ಹೊಸ ಸುದ್ದಿ?
ಕಾಜಲ್​ ಅಗರ್​ವಾಲ್​
Follow us

ನಟಿ ಕಾಜಲ್​ ಅಗರ್​ವಾಲ್​ ಸಾಲುಸಾಲು ಸಿನಿಮಾಗಳಿಂದ ಹೊರ ನಡೆಯುತ್ತಿದ್ದಾರೆ. ಮದುವೆಯಾದ ಒಂದು ವರ್ಷಕ್ಕೆ ಅವರು ಈ ರೀತಿ ಮಾಡುತ್ತಿರುವುದು ಸಹಜವಾಗಿಯೇ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಹೀಗಿರುವಾಗಲೆ ಅವರು ಪ್ರೆಗಾ ನ್ಯೂಸ್​ನ ಬಾಕ್ಸ್​ ಹಿಡಿದು ಪೋಸ್​ ನೀಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಸಾಕಷ್ಟು ಕುತೂಹಲಗೊಂಡಿದ್ದಾರೆ.

ಹೀರೋಯಿನ್​ಗಳು ತಮ್ಮ ವೃತ್ತಿ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಈ ಕಾರಣಕ್ಕೆ ಮದುವೆ ಆದ ನಂತರ ಮಗು ಮಾಡಿಕೊಳ್ಳೋಕೆ ವಿಳಂಬ ಮಾಡುತ್ತಾರೆ. ಆದರೆ, ಕಾಜಲ್​ ಈ ವಿಚಾರದಲ್ಲಿ ಹಾಗಿಲ್ಲ. ಮದುವೆ ಆದ ಒಂದೇ ವರ್ಷದಲ್ಲಿ ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಆ ಬಗ್ಗೆ ನಟಿ ಕಡೆಯಿಂದ ಯಾವುದೇ ಅಪ್​ಡೇಟ್​ ಸಿಕ್ಕಿಲ್ಲ.

ಗರ್ಭಧಾರಣೆ ಪತ್ತೆ ಮಾಡುವ ಕಾರ್ಡ್​ ಪ್ರೆಗಾ ನ್ಯೂಸ್​. ಇದರ ಸ್ಥಳೀಯ ಬ್ರ್ಯಾಂಡ್​ ಅಂಬಾಸಿಡರ್​ ಆಗಿ ಕಾಜಲ್​ ಅವರನ್ನು ಕರೆ ತರಲಾಗಿದೆ. ಈ ಕಾರಣಕ್ಕೆ ಅವರು ಪ್ರೆಗಾ ನ್ಯೂಸ್ ಇಟ್ಟುಕೊಂಡು ಪೋಸ್​ ನೀಡಿದ್ದಾರೆ. ಇದನ್ನು ನೋಡಿದ ಕೆಲವರು ಗೊಂದಲ ಮಾಡಿಕೊಂಡಿದ್ದಾರೆ. ಕಾಜಲ್​ ಅವರು ಗರ್ಭಿಣಿ ಆಗಿದ್ದಾರೆ. ಹೀಗಾಗಿ, ಪ್ರೆಗಾ ನ್ಯೂಸ್​ ಹಿಡಿದು ಅವರು ಪೋಸ್​ ನೀಡಿದ್ದಾರೆ ಎಂದು ಕೆಲವರು ಹೇಳಿಕೊಂಡಿದ್ದಾರೆ.

ಕಾಜಲ್ ಅಗರ್​ವಾಲ್​ ಅವರು ಅಕ್ಕಿನೇನಿ ನಾಗಾರ್ಜುನ ನಟನೆಯ ‘ಘೋಸ್ಟ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್​ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ತೆಲುಗು ಬಿಗ್​ ಬಾಸ್​ ಸೀಸನ್​ 5ರ ನಿರೂಪಣೆಯಲ್ಲಿ ಬ್ಯುಸಿ ಇರುವ ನಾಗಾರ್ಜುನ ಶೀಘ್ರವೇ ಈ ಸಿನಿಮಾದ ಸೆಟ್​ ಸೇರಿಕೊಳ್ಳುತ್ತಿದ್ದಾರೆ. ಆದರೆ, ಈ ಸಿನಿಮಾದಿಂದ ಹೊರ ನಡೆಯಲು ಕಾಜಲ್​ ನಿರ್ಧರಿಸಿದ್ದಾರೆ. ಗರ್ಭಿಣಿ ಆದ ನಂತರ ಶೂಟಿಂಗ್​ ಪೂರ್ಣಗೊಳಿಸೋದು ಕಷ್ಟ. ಈ ಕಾರಣಕ್ಕೆ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ..

ಕೆಲ ತಿಂಗಳ ಹಿಂದೆ ಮಾಧ್ಯಮಗಳ ಜತೆ ಮಾತನಾಡಿದ್ದ ಕಾಜಲ್​, ‘ನನ್ನ ಪತಿ ಚಿತ್ರರಂಗ ತೊರೆಯಲು ಹೇಳಿದರೆ ನಾನು ಹಾಗೆಯೇ ಮಾಡುತ್ತೇನೆ. ನಾನು ಇಂದು ಈ ಸ್ಥಾನದಲ್ಲಿ ಇರುವುದಕ್ಕೆ ಕಾರಣ ನನ್ನ ಪತಿ ಹಾಗೂ ನನ್ನ ಕುಟುಂಬ. ನಾನು ನನ್ನ ಪತಿಯ ಅನುಮತಿ ಪಡೆದೇ ನಟನೆ ಮುಂದುವರಿಸುತ್ತಿದ್ದೇನೆ’ ಎಂದಿದ್ದರು.

ಇದನ್ನೂ ಓದಿ: ‘ಶೀಘ್ರವೇ ಮಹತ್ವದ ಘೋಷಣೆ ಮಾಡುತ್ತೇನೆ ಎಂದ ಕಾಜಲ್ ಅಗರ್​​ವಾಲ್​’​; ನಟಿ ಪ್ರೆಗ್ನೆಂಟ್​ ಎಂದ ಅಭಿಮಾನಿಗಳು

ತಾಜಾ ಸುದ್ದಿ

Click on your DTH Provider to Add TV9 Kannada