ರಾಜಕೀಯಕ್ಕೆ ಬರುವ ವಿಚಾರದಲ್ಲಿ ಸೋನು ಸೂದ್​ ನೀಡಿದ್ರು ಅಚ್ಚರಿಯ ಹೇಳಿಕೆ

ರಾಜಕೀಯಕ್ಕೆ ಬರುವ ವಿಚಾರದಲ್ಲಿ ಸೋನು ಸೂದ್​ ನೀಡಿದ್ರು ಅಚ್ಚರಿಯ ಹೇಳಿಕೆ
ಸೋನು ಸೂದ್

ಹುಮಾ ಖುರೇಶಿ ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಬಾಲಿವುಡ್​ನ ಯಾವ ಕಲಾವಿದರು ರಾಜಕೀಯಕ್ಕೆ ಎಂಟ್ರಿ ನೀಡಬೇಕು ಎಂದು ಕೇಳಿದ ಪ್ರಶ್ನೆಗೆ ಹುಮಾ ಖುರೇಶಿ ಅವರು ಸೋನು ಸೂದ್​ ಹೆಸರು ಹೇಳಿದ್ದರು.

Rajesh Duggumane

|

Jun 05, 2021 | 6:00 PM

ನಟ ಸೋನು ಸೂದ್​ ಸಾಕಷ್ಟು ಜನಪರ ಕೆಲಸ ಮಾಡುತ್ತಿದ್ದಾರೆ. ನಿತ್ಯ ನೂರಾರು ಮಂದಿಗೆ ಅವರ ಕಡೆಯಿಂದ ಸಹಾಯ ಸಿಗುತ್ತಿದೆ. ಸಮಸ್ಯೆ ಎಂದು ಟ್ವೀಟ್​ ಮಾಡಿದ ಕೆಲವೇ ಗಂಟೆಗಳಲ್ಲಿ ಸಹಾಯ ಮಾಡುತ್ತಿದ್ದಾರೆ ಸೋನು. ಅವರ ಕೆಲಸವನ್ನು ನೋಡಿ ಸಾಕಷ್ಟು ಜನರು ಮೆಚ್ಚಿಕೊಂಡಿದ್ದರು. ಅವರು ಪ್ರಧಾನ ಮಂತ್ರಿ ಅಭ್ಯರ್ಥಿ ಆಗಬೇಕು ಎಂದು ಬಾಲಿವುಡ್​ ನಟಿ ಹುಮಾ ಖುರೇಶಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ.

ಹುಮಾ ಖುರೇಶಿ ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಬಾಲಿವುಡ್​ನ ಯಾವ ಕಲಾವಿದರು ರಾಜಕೀಯಕ್ಕೆ ಎಂಟ್ರಿ ನೀಡಬೇಕು ಎಂದು ಕೇಳಿದ ಪ್ರಶ್ನೆಗೆ ಹುಮಾ ಖುರೇಶಿ ಅವರು ಸೋನು ಸೂದ್​ ಹೆಸರು ಹೇಳಿದ್ದರು. ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಟ ಸೋನು ಸೂದ್​ ಅವರು ಚುನಾವಣೆಗೆ ನಿಲ್ಲಬೇಕು. ನಾವೆಲ್ಲರೂ ವೋಟ್​ ಹಾಕುತ್ತೇವೆ. ಅದರಲ್ಲೂ ನಾನು ಖಂಡಿತವಾಗಿ ಅವರಿಗೆ ವೋಟ್​ ಹಾಕುತ್ತೇನೆ. ಸೋನು ಸೂದ್​ ನಮ್ಮ ದೇಶದ ಪ್ರಧಾನ ಮಂತ್ರಿ ಆಗಬೇಕು’ ಎಂದಿದ್ದರು.

ಇದಕ್ಕೆ ಸೋನು ಉತ್ತರಿಸಿದ್ದಾರೆ. ‘ಹುಮಾ ಅವರ ಮಾತು ಕೇಳಿ ಖುಷಿ ಆಗಿದೆ. ಅವರಿಗೆ ನಾನು ಆಭಾರಿ. ಆದರೆ, ಅಷ್ಟು ದೊಡ್ಡ ಜವಾಬ್ದಾರಿ ಹೊತ್ತುಕೊಳ್ಳಲು ನಾನು ತುಂಬಾನೇ ಸಣ್ಣವನು ಎನಿಸುತ್ತದೆ. ರಾಜೀವ್​ ಗಾಂಧಿ 40ನೇ ವರ್ಷಕ್ಕೆ ಪ್ರಧಾನಿ ಆದರು. ಆದರೆ, ಅವರು ರಾಜಕೀಯ ಹಿನ್ನೆಲೆಯಿಂದ ಬಂದಿದ್ದರು. ಆದರೆ, ನನಗೆ ರಾಜಕೀಯದಲ್ಲಿ ಯಾವುದೇ ಅನುಭವ ಇಲ್ಲ’ ಎಂದರು.

ತನ್ನ ನಾಯಕತ್ವದ ವಿಷಯವು ಅನಗತ್ಯವಾಗಿ ವಿರೋಧಿಗಳನ್ನು ಕೆರಳಿಸುತ್ತದೆ ಎಂದು ಸೋನು ಭಾವಿಸಿದ್ದಾರಂತೆ. ‘ಕೆಲವರಿಗೆ ನಾನು ಈ ರೀತಿ ಕೆಲಸ ಮಾಡುತ್ತಿರುವುದು ಇಷ್ಟವಿಲ್ಲ. ಅವರಿಗೆ ಅಸಮಾಧಾನ ಮಾಡೋಕೆ ನಾನು ಇಚ್ಛಿಸುವುದಿಲ್ಲ. ನಾನು ನಟನಾಗಿ, ಸಾಮಾಜಿಕ ಕಾರ್ಯಕರ್ತನಾಗಿ ಸೇವೆ ಮಾಡುತ್ತಿರುವುದಕ್ಕೆ ಖುಷಿ ಇದೆ. ಯಾವುದೇ ಅಧಿಕಾರ ಇಲ್ಲದೆಯೂ ನಮಗೆ ಸಾಧ್ಯವಾದಷ್ಟನ್ನು ನಾವು ಮಾಡಬಹುದು’ ಎಂಬುದು ಸೋನು ಅಭಿಪ್ರಾಯ.

ಕಳೆದ ವರ್ಷ ಕೊರೊನಾ ವೈರಸ್​ ಕಾಟ ಶುರುವಾದಾಗಿನಿಂದಲೂ ಸೋನು ಸೂದ್​ ಅವರು ಜನರ ಸಹಾಯಕ್ಕೆ ನಿಂತಿದ್ದಾರೆ. ಇಂದಿಗೂ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. ಯಾವುದೇ ರಾಜಕಾರಣಿಯೂ ಮಾಡದಂತಹ ಸೇವೆಯನ್ನು ಅವರು ಮಾಡುತ್ತಿದ್ದಾರೆ. ಹೀಗಾಗಿ ಅನೇಕರ ಮನೆಯಲ್ಲಿ ಸೋನು ಸೂದ್ ಫೋಟೋ ಇದೆ.

ಇದನ್ನೂ ಓದಿ: ಸೋನು ಸೂದ್​ ಒಂದು ಸಿನಿಮಾಗೆ ಪಡೆಯೋ ಸಂಭಾವನೆ ಎಷ್ಟು? ಈ ನಟನಿಗೆ ಎಲ್ಲಿಂದ ಬರುತ್ತೆ ಇಷ್ಟೊಂದು ಹಣ?

Follow us on

Related Stories

Most Read Stories

Click on your DTH Provider to Add TV9 Kannada