ಒಂದೇ ನಿರ್ದೇಶಕನಿಗೆ ನಾಲ್ಕನೇ ಬಾರಿ ಕಾಲ್​ಶೀಟ್ ನೀಡಿದ ಅಲ್ಲು ಅರ್ಜುನ್

ಇವರ ಕಾಂಬಿನೇಷನ್​ ಪ್ರೇಕ್ಷಕರಿಗೆ ಸಾಕಷ್ಟು ಇಷ್ಟ ಆಗಿದೆ. ಈ ಕಾರಣದಿಂದ ತ್ರಿವಿಕ್ರಂ ಅವರು ಅಲ್ಲು ಅರ್ಜುನ್​ಗೋಸ್ಕರ ಹೊಸ ಕಥೆ ರೆಡಿ ಮಾಡಿಕೊಂಡಿದ್ದಾರೆ.

ಒಂದೇ ನಿರ್ದೇಶಕನಿಗೆ ನಾಲ್ಕನೇ ಬಾರಿ ಕಾಲ್​ಶೀಟ್ ನೀಡಿದ ಅಲ್ಲು ಅರ್ಜುನ್
ತ್ರಿವಿಕ್ರಂ ಶ್ರೀನಿವಾಸ್-ಅಲ್ಲು ಅರ್ಜುನ್
TV9kannada Web Team

| Edited By: Rajesh Duggumane

Sep 24, 2022 | 8:29 AM

ಚಿತ್ರರಂಗದಲ್ಲಿ ಕೆಲ ಕಾಂಬಿನೇಷನ್​​ಗಳನ್ನು ಫ್ಯಾನ್ಸ್ ಸಾಕಷ್ಟು ಇಷ್ಟಪಡುತ್ತಾರೆ. ಈ ಕಾರಣಕ್ಕೆ ಅವರು ಮತ್ತೆ ಮತ್ತೆ ಒಟ್ಟಾಗಿ ಕೆಲಸ ಮಾಡಲಿ ಎಂದು ಬಯಸುತ್ತಾರೆ. ಅಲ್ಲು ಅರ್ಜುನ್ (Allu Arjun) ಹಾಗೂ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್  (Trivikram Srinivas) ಕಾಂಬಿನೇಷನ್​ ಕೂಡ ಸೂಪರ್ ಹಿಟ್ ಕಾಂಬಿನೇಷನ್​ ಎಂದು ಕರೆಸಿಕೊಂಡಿದೆ. ಈ ಮೂವರು ಒಟ್ಟಾಗಿ ಕೆಲಸ ಮಾಡಿದ ಮೂರು ಚಿತ್ರಗಳು ಸೂಪರ್ ಹಿಟ್ ಆಗಿದೆ. ಈಗ ನಾಲ್ಕನೇ ಬಾರಿ ಇವರು ಒಂದಾಗೋಕೆ ವೇದಿಕೆ ಸಜ್ಜಾಗಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಅಲ್ಲು ಅರ್ಜುನ್ ನಟನೆಯ ‘ಜುಲಾಯಿ’, ‘ಸನ್ ಆಫ್​ ಸತ್ಯಮೂರ್ತಿ’ ಹಾಗೂ ‘ಅಲಾ ವೈಕುಂಟಪುರಮುಲೋ’ ಚಿತ್ರಕ್ಕೆ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನ ಮಾಡಿದ್ದರು. ಈ ಮೂರು ಚಿತ್ರಗಳು ಸೂಪರ್ ಹಿಟ್ ಆಗಿವೆ. ಇವರ ಕಾಂಬಿನೇಷನ್​ ಪ್ರೇಕ್ಷಕರಿಗೆ ಸಾಕಷ್ಟು ಇಷ್ಟ ಆಗಿದೆ. ಈ ಕಾರಣದಿಂದ ತ್ರಿವಿಕ್ರಂ ಅವರು ಅಲ್ಲು ಅರ್ಜುನ್​ಗೋಸ್ಕರ ಹೊಸ ಕಥೆ ರೆಡಿ ಮಾಡಿಕೊಂಡಿದ್ದಾರೆ. ಇಬ್ಬರೂ ಬೇರೆಬೇರೆ ಪ್ರಾಜೆಕ್ಟ್​ನಲ್ಲಿ ಬ್ಯುಸಿ ಇದ್ದು, ಈ ಕಾರಣದಿಂದ ಸಿನಿಮಾ ಸೆಟ್ಟೇರುವುದು ಕೊಂಚ ವಿಳಂಬ ಆಗಬಹುದು ಎನ್ನಲಾಗುತ್ತಿದೆ.

ತ್ರಿವಿಕ್ರಂ ಅವರು ಸದ್ಯ ಮಹೇಶ್ ಬಾಬು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಸದ್ಯ ಒಂದು ಹಂತದ ಶೂಟಿಂಗ್ ಮಾತ್ರ ಪೂರ್ಣಗೊಂಡಿದೆ. ಇನ್ನೂ ಹೆಸರಿಡದ ಈ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ. ‘ಸರ್ಕಾರು ವಾರಿ ಪಾಟ’ ಯಶಸ್ಸಿನ ಬಳಿಕ ಮಹೇಶ್ ಬಾಬು ಹೊಸ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅವರು ಸಾಕಷ್ಟು ಶ್ರದ್ಧೆ ತೋರುತ್ತಿದ್ದಾರೆ. ಇನ್ನು, ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರದ ಕೆಲಸಗಳಿಗೆ ಚಾಲನೆ ನೀಡಿದ್ದಾರೆ. ಹೈ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿರುವ ಈ ಸಿನಿಮಾ ಕೆಲಸ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕಾಗಲಿದೆ ಎನ್ನಲಾಗುತ್ತಿದೆ ಈ ಎರಡೂ ಕೆಲಸಗಳು ಪೂರ್ಣಗೊಂಡ ಬಳಿಕವಷ್ಟೇ ಹೊಸ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಸೈಮಾ’ ಅವಾರ್ಡ್ಸ್​ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ಅಲ್ಲು ಅರ್ಜುನ್​; ವಿಡಿಯೋ ನೋಡಿ

ಅಲ್ಲು ಅರ್ಜುನ್ ಸದ್ಯ ಒನ್​ಲೈನ್​ ಸ್ಟೋರಿಯನ್ನು ಮಾತ್ರ ಕೇಳಿದ್ದಾರೆ. ಈ ಚಿತ್ರಕ್ಕೆ ಸ್ಕ್ರಿಪ್ಟ್​ ಇನ್ನಷ್ಟೇ ರೆಡಿ ಆಗಬೇಕಿದೆ. ಆ ಬಳಿಕವೇ ಸಿನಿಮಾ ಫೈನಲ್ ಮಾಡಿ ಘೋಷಣೆ ಮಾಡುವ ಬಗ್ಗೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada