AP Muthumani: ಸೂಪರ್​ಸ್ಟಾರ್​ ರಜಿನಿಗೆ ಪ್ರಪ್ರಥಮ ಫ್ಯಾನ್ಸ್ ಕ್ಲಬ್ ಆರಂಭಿಸಿದ್ದ ಎಪಿ ಮುತ್ತುಮಣಿ ನಿಧನ

Rajinikanth: ರಜಿನಿಕಾಂತ್ ಅವರಿಗೆ ಮೊದಲ ಅಭಿಮಾನಿ ಸಂಘಟನೆ ಆರಂಭಿಸಿದ್ದ ಮುತ್ತುಮಣಿ ಮಾರ್ಚ್ 10ರಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಮಧುರೈ ಮೂಲದ ಅವರು ಸೂಪರ್​ಸ್ಟಾರ್​ಗೆ ಮೊದಲ ಫ್ಯಾನ್ಸ್ ಕ್ಲಬ್ ಆರಂಭಿಸಿದ್ದರು.

AP Muthumani: ಸೂಪರ್​ಸ್ಟಾರ್​ ರಜಿನಿಗೆ ಪ್ರಪ್ರಥಮ ಫ್ಯಾನ್ಸ್ ಕ್ಲಬ್ ಆರಂಭಿಸಿದ್ದ ಎಪಿ ಮುತ್ತುಮಣಿ ನಿಧನ
ಮುತ್ತುಮಣಿ, ರಜಿನಿಕಾಂತ್
TV9kannada Web Team

| Edited By: shivaprasad.hs

Mar 12, 2022 | 3:35 PM

ಸೂಪರ್​ಸ್ಟಾರ್ ರಜಿನಿಕಾಂತ್ (Rajinikanth) ಅವರ ಬಹುದೊಡ್ಡ ಅಭಿಮಾನಿ, ರಜಿನಿ ಫ್ಯಾನ್ಸ್ ಕ್ಲಬ್ (Rajini Fans Club) ಆರಂಭಿಸಿದ್ದ ಮೊದಲ ವ್ಯಕ್ತಿ ಎಪಿ ಮುತ್ತುಮಣಿ (AP Muthumani) ಇಹಲೋಕ ತ್ಯಜಿಸಿದ್ದಾರೆ. ಮುತ್ತುಮಣಿ ಅವರು ಮಾರ್ಚ್ 10ರಂದು ನಿಧನರಾಗಿದ್ದು, ಅವರಿಗೆ 63 ವರ್ಷ ವಯಸ್ಸಾಗಿತ್ತು. ಎಪಿ ಮುತ್ತುಮಣಿ ಹಲವು ಕಾರಣಗಳಿಗೆ ಸುದ್ದಿಯಾಗಿದ್ದವರು. ಸೂಪರ್​ಸ್ಟಾರ್​ಗೆ ಬಹು ಆಪ್ತರಾಗಿದ್ದ ಮುತ್ತುಮಣಿ, ಯಾವಾಗ ಬೇಕಾದರೂ ರಜಿನಿಯನ್ನು ಭೇಟಿ ಮಾಡುವ ಅವಕಾಶವನ್ನು ಪಡೆದಿದ್ದರು. ವರದಿಗಳ ಪ್ರಕಾರ ಅನಾರೋಗ್ಯದಿಂದ ಬಳಲುತ್ತಿದ್ದ ಮುತ್ತುಮಣಿಯವರನ್ನು ಕೆಲ ವರ್ಷಗಳ ಹಿಂದೆ ಖುದ್ದು ರಜಿನಿಯೇ ಚೆನ್ನೈನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲದೇ ಅವರಿಗೆ ಉತ್ತಮ ಚಿಕಿತ್ಸೆ ಲಭ್ಯವಾಗುವಂತೆ ರಜಿನಿಯೇ ಜವಾಬ್ದಾರಿ ಹೊತ್ತುಕೊಂಡಿದ್ದರು.

ಮಧುರೈನಲ್ಲಿ ಜನಿಸಿದ್ದು ಮುತ್ತುಮಣಿಯವರ ತಂದೆ ಬುಲ್ಡಿಂಗ್ ಕಂಟ್ರಾಕ್ಟರ್ ಆಗಿದ್ದವರು. ಚಿತ್ರ ತಾರೆಯರ ಅಭಿಮಾನಿ ಸಂಘಟನೆಗಳಿಗೆ ಮಧುರೈ ಹೆಸರುವಾಸಿ. ಅಲ್ಲಿ ನೆಚ್ಚಿನ ತಾರೆಯರ ಫೋಟೋಗಳನ್ನು ಫ್ರೇಮ್ ಹಾಕಿಸಿ, ಅಭಿಮಾನಿಗಳಿಂದ ಪೂಜೆಯೂ ನಡೆಯುತ್ತದೆ. ರಜಿನಿ ನೆಗೆಟಿವ್ ರೋಲ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಮಯದಲ್ಲಿಯೇ ಮುತ್ತುಮಣಿ ರಜಿನಿ ಅಭಿಮಾನಿಯಾಗಿ, ಅಭಿಮಾನಿ ಸಂಘಟನೆ ಆರಂಭಿಸಿದ್ದರು.

ಮುತ್ತುಮಣಿಯವರ ಅಭಿಮಾನವನ್ನು ಅಭಿಮಾನಿಯೋರ್ವರು ಹಂಚಿಕೊಂಡಿದ್ದರು. ರಜಿನಿಯ ನಾಲ್ಕನೇ ಚಿತ್ರ ‘ಕವಿಕುಯಿಲ್’ 1977ರಲ್ಲಿ ತೆರೆ ಕಂಡಿತ್ತು. ಮಧುರೈನ ಶ್ರೀದೇವಿ ಚಿತ್ರಮಂದಿರದಲ್ಲಿ ಅದು ಪ್ರದರ್ಶನವಾಗುತ್ತಿತ್ತು. ಆಗ ಅಭಿಮಾನಿಯೊಬ್ಬರು ಚಿತ್ರಮಂದಿರದಲ್ಲಿ ರಜಿನಿ ಫೋಟೋವನ್ನು ಫ್ರೇಮ್ ಹಾಕಿಸಿ, ‘ಸೂಪರ್​ಸ್ಟಾರ್ ಆಫ್​ ದಿ ಎರಾ’ ಎಂದು ಅದರಡಿಯಲ್ಲಿ ಬರೆದಿರುವುದನ್ನು ಗಮನಿಸಿದ್ದರು. ಈ ಕೆಲಸವನ್ನು ಮಾಡಿದ್ದವರು ಮುತ್ತುಮಣಿ. ತಾವು ಸ್ಥಾಪಿಸಿದ್ದ ರಜಿನಿ ಫ್ಯಾನ್ಸ್ ಸಂಘಟನೆಯಿಂದ ಅವರು ಆ ಕೆಲಸ ಮಾಡಿದ್ದರು.

ಪ್ರಸ್ತುತ ರಜಿನಿಕಾಂತ್​ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆದರೆ ಮುತ್ತುಮಣಿಯವರು ರಜಿನಿಯವರ ಆರಂಭದ ದಿನಗಳಿಂದ ಅವರ ಫ್ಯಾನ್ ಆಗಿದ್ದವರು. ಮುತ್ತುಮಣಿಯವರ ಮದುವೆಯಲ್ಲಿ ರಜಿನಿ ಭಾಗವಹಿಸಿದ್ದರಂತೆ. ಪ್ರಸ್ತುತ ಮುತ್ತುಮಣಿ ನಿಧನಕ್ಕೆ ರಜಿನಿ ಅಭಿಮಾನಿ ಬಳಗ ಕಂಬನಿ ಮಿಡಿದಿದೆ.

ಇದನ್ನೂ ಓದಿ:

‘ರಾಧೆ ಶ್ಯಾಮ್’ಗೆ ಪ್ರಬಲ ಪೈಪೋಟಿ ನೀಡುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’; ಮೊದಲ ದಿನದ ಕಲೆಕ್ಷನ್ ಎಷ್ಟು? ಇಲ್ಲಿದೆ ಲೆಕ್ಕಾಚಾರ

ಲಿಂಗ ಬದಲಾವಣೆ ಮಾಡಿಕೊಂಡ ಸೈಶಾಗೆ ಸಹ ಸ್ಪರ್ಧಿ ಮೇಲೆ ಪ್ರೀತಿ; ‘ಇದು ಬಲು ಕಷ್ಟ’ ಎಂದ ಫ್ಯಾಷನ್​ ಡಿಸೈನರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada