ಹೇಗಿದೆ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ಟ್ರೇಲರ್? ಇಲ್ಲಿದೆ ನೋಡಿ ವಿವರ

ಹೇಗಿದೆ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ಟ್ರೇಲರ್? ಇಲ್ಲಿದೆ ನೋಡಿ ವಿವರ
ವಿಜಯ್

Beast Movie Trailer: ಪೂಜಾ ಹೆಗ್ಡೆ ಈ ಸಿನಿಮಾದ ನಾಯಕಿ. ಅವರು ಇದೇ ಮೊದಲ ಬಾರಿಗೆ ವಿಜಯ್​ಗೆ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ನೆಲ್ಸನ್​ ದಿಲೀಪ್​ಕುಮಾರ್​ ನಿರ್ದೇಶನ ಮಾಡಿದ್ದಾರೆ.

TV9kannada Web Team

| Edited By: Rajesh Duggumane

Apr 02, 2022 | 6:18 PM


‘ದಳಪತಿ’ ವಿಜಯ್ (Thalapathy Vijay) ನಟನೆಯ ‘ಬೀಸ್ಟ್’ ಸಿನಿಮಾ (Beast Movie) ಬಗ್ಗೆ ಅವರ ಅಭಿಮಾನಿಗಳಲ್ಲಿ ದೊಡ್ಡಮಟ್ಟದ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಈ ಸಿನಿಮಾ ಬಗ್ಗೆ ಒಂದು ಕುತೂಹಲ ಮೂಡೋಕೆ ಕಾರಣವೂ ಇದೆ. ‘ಕೆಜಿಎಫ್​ ಚಾಪ್ಟರ್​ 2’ ತೆರೆಕಾಣುವುದಕ್ಕೂ ಒಂದು ದಿನ ಮೊದಲು ‘ಬೀಸ್ಟ್’ ಸಿನಿಮಾ ರಿಲೀಸ್​ ಆಗುತ್ತಿದೆ. ಹೀಗಾಗಿ, ಈ ಸಿನಿಮಾ ಹೇಗಿದೆ? ನಮ್ಮ ಸಿನಿಮಾಗೆ ಸ್ಪರ್ಧೆ ಕೊಡುವಷ್ಟು ಗಟ್ಟಿತನ ಆ ಚಿತ್ರಕ್ಕಿದೆಯೇ ಎಂಬಿತ್ಯಾದಿ ಲೆಕ್ಕಾಚಾರಗಳು ಕರ್ನಾಟಕದಲ್ಲಿ ನಡೆಯುತ್ತಿದೆ. ಸಿನಿಮಾ ಹೇಗಿದೆ ಎಂಬುದಕ್ಕೆ ಇಂದು (ಏಪ್ರಿಲ್​ 2) ರಿಲೀಸ್ ಆದ ‘ಬೀಸ್ಟ್’  ಟ್ರೇಲರ್ (Beast Trailer)​ ಸಾಕ್ಷ್ಯ ನೀಡಿದೆ.

ಚೆನ್ನೈನ ಮಾಲ್​ಅನ್ನು ಹೈಜಾಕ್​ ಮಾಡಲಾಗುತ್ತದೆ. ಒಂದಷ್ಟು ಜನರನ್ನು ಹೈಜಾಕರ್ಸ್​ ಒತ್ತೆಯಾಳಾಗಿ ಇಟ್ಟುಕೊಂಡಿರುತ್ತಾರೆ. ಇದೇ ಮಾಲ್​ನಲ್ಲಿ ವೀರರಾಘವನ್​ (ವಿಜಯ್​) ಕೂಡ ಇರುತ್ತಾನೆ. ಆತ ನಟೋರಿಯಸ್​ ಸ್ಪೈ. ಮಾಲ್​ನಿಂದ ವೀರರಾಘವನ್ ಜನರನ್ನು ಹೇಗೆ ಹೊರ ತರುತ್ತಾನೆ​, ಆತನ ಹಿನ್ನೆಲೆ ಏನು ಎಂಬುದನ್ನು ಸಿನಿಮಾದಲ್ಲಿ ಹೇಳಲಾಗುತ್ತಿದೆ ಎಂಬುದು ಟ್ರೇಲರ್​ನಿಂದ ತಿಳಿದು ಬಂದಿದೆ. ವಿಜಯ್ ಸಖತ್​ ಮಾಸ್​ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ಇದೆ. ಹಿನ್ನೆಲೆ ಸಂಗೀತ ಗಮನ ಸೆಳೆದಿದೆ. ಚಿತ್ರದ ನಾಯಕಿ ಪೂಜಾ ಹೆಗ್ಡೆ ಟ್ರೇಲರ್​ನಲ್ಲಿ ಒಮ್ಮೆ ಮಾತ್ರ ಕಾಣಿಸಿಕೊಳ್ಳುತ್ತಾರೆ.

ಪೂಜಾ ಹೆಗ್ಡೆ ಈ ಸಿನಿಮಾದ ನಾಯಕಿ. ಅವರು ಇದೇ ಮೊದಲ ಬಾರಿಗೆ ವಿಜಯ್​ಗೆ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ನೆಲ್ಸನ್​ ದಿಲೀಪ್​ಕುಮಾರ್​ ನಿರ್ದೇಶನ ಮಾಡಿದ್ದಾರೆ. ಸನ್​ ಪಿಕ್ಚರ್ಸ್​ ಚಿತ್ರಕ್ಕೆ ಬಂಡವಾಳ ಹೂಡಿದೆ. ಈ ಚಿತ್ರದ ಮೇಲೆ ಒಂದು ನಿರೀಕ್ಷೆ ಮೂಡೋಕೆ ನಿರ್ದೇಶಕ ದಿಲೀಪ್​ಕುಮಾರ್ ಕೂಡ ಕಾರಣ. ಅವರು ಈ ಮೊದಲು ನಿರ್ದೇಶನ ಮಾಡಿದ್ದ ‘ಡಾಕ್ಟರ್​’ ಚಿತ್ರ ಹಿಟ್ ಆಗಿತ್ತು. ಆ ಬಳಿಕ ತೆರೆಗೆ ಬರುತ್ತಿರುವ ಅವರ ನಿರ್ದೇಶನದ ಸಿನಿಮಾ ಇದಾಗಿದೆ.

ಇಬ್ಬರು ಸ್ಟಾರ್​ ಕಲಾವಿದರ ಸಿನಿಮಾಗಳು ಹೀಗೆ ಏಕಕಾಲಕ್ಕೆ ತೆರೆ ಕಾಣುತ್ತಿರುವುದರಿಂದ ಚಿತ್ರಮಂದಿರಗಳ ಹಂಚಿಕೆ ವಿಚಾರದಲ್ಲಿ ಪೈಪೋಟಿ ಏರ್ಪಡಲಿದೆ. ಯಾವ ಚಿತ್ರ ಎಷ್ಟು ಕಲೆಕ್ಷನ್​ ಮಾಡುತ್ತದೆ ಎಂಬ ಕೌತುಕ ಕೂಡ ನಿರ್ಮಾಣ ಆಗಿದೆ. ಈ ನಡುವೆ ‘ಬೀಸ್ಟ್​’ ಚಿತ್ರದ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಹಾಗೂ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ನಿರ್ದೇಶಕ ಪ್ರಶಾಂತ್​ ನೀಲ್​ ಅವರು ಪರಸ್ಪರ ವಿಶ್ ಮಾಡಿಕೊಂಡಿದ್ದರು.

‘ಇದು ತುಂಬ ದೊಡ್ಡದಾಗಿದೆ ಮತ್ತು ಚೆನ್ನಾಗಿದೆ. ನಿರೀಕ್ಷೆಯಲ್ಲಿದ್ದೇನೆ’ ಎಂದು ನೆಲ್ಸನ್​ ದಿಲೀಪ್​ ಕುಮಾರ್​ ಅವರು ಟ್ವೀಟ್​ ಮಾಡಿದ್ದರು. ಅದನ್ನು ರಿಟ್ವೀಟ್​ ಮಾಡಿದ್ದ  ಪ್ರಶಾಂತ್​ ನೀಲ್​ ಅವರು, ‘ಧನ್ಯವಾದಗಳು ನೆಲ್ಸನ್​ ದಿಲೀಪ್​ ಕುಮಾರ್​. ಎಂದಿನಂತೆ ವಿಜಯ್​ ಸರ್​ ಅವರನ್ನು ದೊಡ್ಡ ಪರೆದ ಮೇಲೆ ನೋಡಲು ಕಾಯುತ್ತಿದ್ದೇನೆ. ಬೀಸ್ಟ್​ ಚಿತ್ರಕ್ಕೆ ಆಲ್​ ದಿ ಬೆಸ್ಟ್​’ ಎಂದು ಬರೆದುಕೊಂಡಿದ್ದರು. ಈ ಮೂಲಕ ಯಾವುದೇ ಕ್ಲ್ಯಾಲ್ ಇಲ್ಲ ಎನ್ನುವ ವಿಚಾರ ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ‘ಬೀಸ್ಟ್​ Vs ಕೆಜಿಎಫ್​ ಅನ್ನೋಕೆ ಇದು ಎಲೆಕ್ಷನ್​ ಅಲ್ಲ’: ದಳಪತಿ ವಿಜಯ್​ ಚಿತ್ರದ ಪೈಪೋಟಿ ಬಗ್ಗೆ ಯಶ್​ ಪ್ರತಿಕ್ರಿಯೆ

ಕರ್ನಾಟಕದಲ್ಲಿ ‘ಕೆಜಿಎಫ್​ 2’ಗೆ ಫೈಟ್​ ನೀಡಲು ‘ಬೀಸ್ಟ್’ ಮಾಡಿದ ಪ್ಲ್ಯಾನ್​ ಏನು? ಇಲ್ಲಿದೆ ವಿವರ

Follow us on

Related Stories

Most Read Stories

Click on your DTH Provider to Add TV9 Kannada