ಬಿಗ್​ಬಾಸ್ ಮನೆಯಲ್ಲಿ ನಡೆದಿದೆ ಅತಿಥಿ ಸತ್ಕಾರದ ಪಾಠ; ಶಮಂತ್ ಮಾಡಿದ ಕಾಫಿ ಹೇಗಿತ್ತು?

Bigg Boss Kannada 8: ಹಾಗಾದರೆ ನಿಜವಾಗಿಯೂ ಶಮಂತ್ ಮಾಡಿದ ಕಾಫಿ ಹೇಗಿತ್ತು? ಪ್ರಿಯಾಂಕಾ ಸುಮ್ಮನೆ ಹಾಗೆ ಮಾಡಿದ್ದಾ ಅಥವಾ ನಿಜಕ್ಕೂ ಕಾಫಿ ಕುಡಿಯಲು ಆಗುವಂತಿರಲಿಲ್ಲವಾ? ಹೀಗೆ ಕೆಲವು ಪ್ರಶ್ನೆಗಳು ವೀಕ್ಷಕನಲ್ಲಿ ಏಳುತ್ತವೆ.

  • TV9 Web Team
  • Published On - 6:22 AM, 14 Apr 2021
ಬಿಗ್​ಬಾಸ್ ಮನೆಯಲ್ಲಿ ನಡೆದಿದೆ ಅತಿಥಿ ಸತ್ಕಾರದ ಪಾಠ; ಶಮಂತ್ ಮಾಡಿದ ಕಾಫಿ ಹೇಗಿತ್ತು?
ಕಾಫಿ ಹೇಗಿತ್ತು?

ಬಿಗ್​ಬಾಸ್ ಮನೆ ಎಂದರೆ ಹಾಗೇ. ಒಂದಿಲ್ಲೊಂದು ನಾಟಕ, ಒಂದಿಲ್ಲೊಂದು ಪ್ರಹಸನ ಅಲ್ಲಿ ನಡೆಯುತ್ತಲೇ ಇರುತ್ತದೆ ಮತ್ತು ಇರಬೇಕು. ಹಾಗಿರುವ ಕಾರಣಕ್ಕೇ ಅದು ಬಿಗ್​ಬಾಸ್ ಮನೆ.  ಇಲ್ಲಿ ಯಾರಿಗೆ ಯಾರೂ ಕಡಿಮೆ ಇಲ್ಲ, ಇದ್ರೂ ಹಾಗೆ ತೋರಿಸಿಕೊಳ್ಳಲು ಆಗೋದೇ ಇಲ್ಲ. ಇಂಥದ್ದರಲ್ಲಿ ಇಂದು ಬಿಗ್​ಬಾಸ್ ಮನೆಯಲ್ಲಿ ಒಬ್ಬರು ಕಾಫಿ ಮಾಡಿದ್ದಾರೆ. ಇನ್ನೊಬ್ಬರು ಆ ಕಾಫಿಯನ್ನು ಕುಡಿದಿದ್ದಾರೆ.

ಶಮಂತ್ ಮತ್ತು ಪ್ರಿಯಾಂಕಾ ನಡುವೆ ಅಡುಗೆ ಮನೆಯಲ್ಲಿ ಮಾತುಕತೆಯಾಗುತ್ತಿತ್ತು. ಇದೇ ವೇಳೆ ಶಮಂತ್​ಗೆ ಪ್ರಿಯಾಂಕಾ ಆತಿಥ್ಯ, ಸತ್ಕಾರದ ಪಾಠ ಮಾಡಿದ್ದಾರೆ. ಮನೆಗೆ ಬಂದ ಅತಿಥಿಗಳನ್ನು ಹೇಗೆ ಸತ್ಕರಿಸಬೇಕು ಎಂದು ಗೊತ್ತಿಲ್ವಾ ಎಂದು ಪ್ರಿಯಾಂಕಾ ಅಲ್ಲೇ ಇದ್ದ ಶಮಂತ್​​ರನ್ನು ಕೇಳಿದ್ದು, ಹಿಂದೊಂದು ದಿನ ತಾನು ಕಾಫಿ ಕೇಳಿದ್ದೆ ಆದರೆ ನೀವು ಮಾಡಿಕೊಡಲೇ ಇಲ್ಲ ಎಂದು ಶಮಂತ್​ ಅವರನ್ನು ಮಾತಿಗೆಳೆದಿದ್ದಾರೆ. ಇದನ್ನೆಲ್ಲಾ ಕೇಳಿಸಿಕೊಂಡ ಶಮಂತ್​, ‘ಇಲ್ರೀ..ನೀವೇ ಆವತ್ತು ಬೇಡ ಅಂದ್ರಲ್ರೀ’ ಎಂದು ತಾವು ಕೇಳಿದರೂ ನೀವೇ ಬೇಡ ಅಂದಿದ್ದಿರಿ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.

ಆದರೆ, ಅಷ್ಟಕ್ಕೆ ಸುಮ್ಮನಾಗದ ಪ್ರಿಯಾಂಕಾ ಮತ್ತೊಮ್ಮೆ ಶಮಂತ್ ಬಳಿ ಮಾತು ಮುಂದುವರೆಸಿ ಮನೆಗೆ ಬಂದವ್ರಿಗೆ ಏನೂ ಮಾಡಿಕೊಡಲ್ವಾ? ಮನೆಗೆ ಬಂದವರು ನಿಮ್ಮ ಬಳಿ ಅದನ್ನ, ಇದನ್ನ ಮಾಡಿಕೊಡಿ ಎಂದು ಕೇಳ್ತಾರಾ? ಬೇಡ ಅಂತಲೇ ಹೇಳ್ತಾರೆ ಅಲ್ವಾ? ಎಂದು ಕಾಲೆಳೆದಿದ್ದಾರೆ. ಪ್ರಿಯಾಂಕ ಇಷ್ಟೆಲ್ಲಾ ಹೇಳಿದ ಮೇಲೆ ಕಾಫಿ ಮಾಡೋಕೆ ತಯಾರಾದ ಶಮಂತ್, ನೋಡಿ ಮಾಡಿಕೊಡ್ತೀನಲ್ಲ ಎಂದು ಹೇಳುತ್ತಾ ಒಂದು ಕಪ್​ನಲ್ಲಿ ಕಾಫಿ ತಂದು ಕೊಟ್ಟೇಬಿಟ್ಟರು. ಆಗ ಶಮಂತ್, ತಾನು ಮಾಡಿದ ಕಾಫಿಯ ಬಗ್ಗೆ ಮಾತು ಶುರುಮಾಡಿ ಕಾಫಿಯನ್ನು ಕುಡಿಯಬಹುದಾ? ಕಾಫಿ ಕುಡಿಯುವಂತೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ. ಆದರೆ, ಕಾಫಿ ಕಪ್​ ಅನ್ನು ಕೈಯಲ್ಲಿ ಹಿಡಿದು ಶಮಂತ್ ಮಾಡಿದ ಕಾಫಿಯನ್ನು ಕುಡಿದ ಪ್ರಿಯಾಂಕ ಮಾತ್ರ ಕಾಫಿ ಕುಡಿಯುವಂತೆಯೇ ಇಲ್ಲ ಎಂಬಂತೆ ಪ್ರತಿಕ್ರಿಯೆ ನೀಡಿದ್ದು ಶಮಂತ್​ ಅವರನ್ನು ಬೇಸ್ತು ಬೀಳಿಸಿದ್ದಾರೆ.

ಇದನ್ನೂ ಓದಿ: Priyanka Thimmesh: ಮೊದಲ ದಿನವೇ ಶಮಂತ್ ಮಾನ ಹರಾಜು ಹಾಕಿದ ಪ್ರಿಯಾಂಕಾ! ಒಂದೇ ಮಾತಿಗೆ ಬ್ರೋ ಗೌಡ ಸೈಲೆಂಟ್

BBK 8 Wild Card Entry: ಬಿಗ್​ಬಾಸ್​ಗೆ ಮತ್ತೊಂದು ವೈಲ್ಡ್​ ಕಾರ್ಡ್​ ಎಂಟ್ರಿ: ಆದ್ರೆ ಈ ನಟಿ ಮನೆಗೆ ಕಾಲಿಡುತ್ತಿದ್ದಂತೆ ಮಂಜು ನಾಪತ್ತೆ!