ಬಾಲಿವುಡ್ ಬೆಡಗಿ ನೇಹಾ ಶರ್ಮಾ ಫಿಟ್ನೆಸ್ ಗುಟ್ಟು!

ಬಾಲಿವುಡ್ ಬೆಡಗಿ ನೇಹಾ ಶರ್ಮಾ ಫಿಟ್ನೆಸ್ ಗುಟ್ಟು!

ನೇಹಾ ಶರ್ಮಾ ‘ಕ್ಯಾ ಸೂಪರ್ ಹೇ ಹಮ್​’ನಲ್ಲಿ ತುಂಬಾ ಸ್ಲಿಮ್​ ಆ್ಯಂಡ್ ಫಿಟ್ ಆಗಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ. ಪರ್ಫೆಕ್ಟ್ ಫಿಟ್ನೆಸ್ ಮೇಂಟೇನ್ ಮಾಡಲು ನೇಹಾ ಹೆಚ್ಚು ಶ್ರಮ ವಹಿಸಿದ್ದಾರಂತೆ. ನೇಹಾ ಅವರ ಫಿಟ್ನೆಸ್ ಗುಟ್ಟು ಅವರು ಪಾಲಿಸುವ ಡಯಟ್ ಚಾರ್ಟ್ ಅಂತೆ.

ಬ್ಯೂಟಿಫುಲ್ ನೇಹಾ ಶರ್ಮ ಫುಡ್ಡಿ ಅಂತೆ. ಹಾಗಾಗಿ ಇವರು ಯಾವ ಆಹಾರ ಇಷ್ಟಪಡ್ತಾರೋ ಅದನ್ನು ಕಡಿಮೆ ಪ್ರಮಾಣದಲ್ಲಿ ತಿಂತಾರಂತೆ. ಚೀಟ್​ ಡೇ ಬಿಟ್ಟು ಉಳಿದ ದಿನಗಳಲ್ಲಿ ಸ್ಟ್ರಿಕ್ಟಾಗಿ ಡಯಟ್ ಚಾರ್ಟ್ ಫಾಲೋ ಮಾಡೋದಕ್ಕೆ ನೋ ಪ್ರಾಬ್ಲಂ ಅಂತಾರೆ ಫಿಟ್ನೆಸ್ ಪ್ರೀಕ್ ನೇಹಾ. ಇವರ ಬ್ರೇಕ್​ಫಾಸ್ಟ್​ನಲ್ಲಿ ಒಂದು ಬೌಲ್ ಮಿಕ್ಸೆಡ್ ಫ್ರೂಟ್ಸ್​, ಎರಡು ಮೊಟ್ಟೆ ಅಥವಾ ಓಟ್​ಮೀಲ್ ಮತ್ತು ಒಂದು ಆರೆಂಜ್ ಹಣ್ಣಿನ ಜ್ಯೂಸ್ ಇರುತ್ತಂತೆ. ಒಂದು ವೇಳೆ ಮಾರ್ನಿಂಗ್ ಸಿಹಿ ರುಚಿ ಬೇಕು ಅನಿಸಿದ್ರೆ ಬ್ಲೂಬೆರಿ ಪಾನ್​ಕೇಕ್ ವಿತ್ ಮಾಪ್ಲೆ ಸಿರಪ್ ತಿಂತೀನಿ ಅಂತಾರೆ ಫಿಟ್ ಆ್ಯಂಡ್ ಫೈನ್ ನೇಹಾ.

ಇನ್ನು ಇವರ ಮಧ್ಯಾಹ್ನದ ಊಟದಲ್ಲಿ ಕಡಿಮೆ ಪ್ರಮಾಣದ ಆಹಾರ ಇರುತ್ತೆ. ಅದರಲ್ಲಿ ಗ್ರೀನ್​ ವೆಜ್ಜೀಸ್ ಮತ್ತು ಬ್ರೌನ್ ರೈಸ್​ ಅಥವಾ ರೋಟಿ ತಿಂತಾರಂತೆ. ಬ್ರೌನ್​ ರೈಸ್​ನಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟಿನ್​ ಇರುವುದರಿಂದ ಇವರ ಹೆಲ್ತಿ ಫಿಟ್ನೆಸ್​ ಮೇಲೆ ಪರಿಣಾಮ ಬೀರುತ್ತೆ ಅನ್ನೋದು ನೇಹಾ ಅಭಿಪ್ರಾಯ. ಸಂಜೆಯ ಸಮಯದಲ್ಲಿ ಒಂದು ಕಪ್ ಗ್ರೀನ್ ಟೀ ಮತ್ತು ಲೈಟಾಗಿ ಸ್ಯಾಂಡ್​ವಿಜ್ ತಿಂತಾರಂತೆ ಈ ಚೆಲುವೆ. ಇನ್ನು ನೇಹಾ ರಾತ್ರಿಯ ಊಟವನ್ನು ಬೇಗ ಮಾಡಿ ಮುಗಿಸ್ತಾರೆ. ಯಾಕಂದ್ರೆ ಬೇಗ ನಿದ್ದೆ ಮಾಡೋದು ಕೂಡಾ ಅತ್ಯವಶ್ಯಕ. ಇದ್ರಿಂದ ಮರುದಿನದ ಕೆಲಸ ಕಾರ್ಯಗಳಿಗೆ ಯಾವುದೇ ರೀತಿಯ ಎಫೆಕ್ಟ್ ಆಗಲ್ಲ ಅನ್ನೋದು ನೇಹಾ ಮಾತು.

ಡಿನ್ನರ್​ನಲ್ಲಿ ಕ್ಯಾರೆಟ್​ ಮತ್ತು ಕುಂಬಳಕಾಯಿ ಸೂಪ್ ಅಥವಾ ಚಿಕನ್ ಕ್ಲಿಯರ್ ಸೂಪ್ ಕುಡೀತಾರೆ. ಜೊತೆಗೆ ಸಲಾಡ್, ಸ್ಮೊಕ್​ಡ್ ಟರ್ಕಿ, ಗ್ರಿಲ್ಡ್​ ಚಿಕನ್ ಅಥವಾ ಫಿಶ್ ಇರುತ್ತಂತೆ.

ವಾರದಲ್ಲಿ ಒಂದು ದಿನ ಡಯಟ್ ಚಾರ್ಟ್​ಗೆ ಚೀಟ್ ಮಾಡೋ ಇವರು, ಆ ದಿನ ನನಗೆ ಏನೆಲ್ಲ ತಿನ್ಬೇಕೋ ಅನ್ಸುತ್ತೋ ಅದನ್ನೇ ತಿಂತೀನಿ ಅಂತಾರೆ ಬ್ಯೂಟಿಫುಲ್ ನೇಹಾ. ಅದರಲ್ಲಿ ಚಾಕೋಲೇಟ್, ಐಸಿ ಕ್ರೀಮ್ ಇತ್ಯಾದಿಗಳು ಇರುತ್ತಂತೆ.

Click on your DTH Provider to Add TV9 Kannada