ಸೇನಾ ಪೋಷಾಕಿನಲ್ಲಿ ಪ್ರಿಯಾಂಕಾ ಚೋಪ್ರಾ: ಇದು ಹೊಸ ಸಿನಿಮಾ ಮ್ಯಾಟರ್​ ಅಲ್ಲ!

ಬಾಲ್ಯದಲ್ಲಿ ತಂದೆಯ ಸೇನಾ ಉಡುಗೆಯನ್ನು ಹಾಕಿ ಪ್ರಿಯಾಂಕಾ ಪೋಸ್​ ನೀಡಿದ್ದರು. ಈ ಫೋಟೋವನ್ನು ಅವರು ಇನ್​ಸ್ಟಾಗ್ರಾಂನಲ್ಲಿ  ಹಂಚಿಕೊಂಡಿದ್ದಾರೆ.

  • Publish Date - 4:11 pm, Fri, 11 December 20 Edited By: sadhu srinath
ಸೇನಾ ಪೋಷಾಕಿನಲ್ಲಿ ಪ್ರಿಯಾಂಕಾ ಚೋಪ್ರಾ: ಇದು ಹೊಸ ಸಿನಿಮಾ ಮ್ಯಾಟರ್​ ಅಲ್ಲ!
ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಸೇನಾ ಉಡುಗೆಯಲ್ಲಿ ಹೊಸ ಫೋಟೋ ಒಂದನ್ನು ಹಾಕಿದ್ದಾರೆ! ಹಾಗಾದರೆ ಅವರೇನಾದರೂ ಭಾರತೀಯ ಸೇನೆಯ ಬಗ್ಗೆ ಹೊಸ ಸಿನಿಮಾ ಮಾಡುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಕೇಳಬೇಡಿ. ಏಕೆಂದರೆ ಇದು ಅವರ ಸಿನಿಮಾ ಬಗೆಗಿನ ವಿಚಾರವಲ್ಲ. ಇದು ನೆನಪಿನ ಬುತ್ತಿಯಿಂದ ತೆಗೆದ ಅವರ ಹಳೆಯ ಫೋಟೋ.

ಪ್ರಿಯಾಂಕಾ ತಂದೆ ಸೇನೆಯಲ್ಲಿದ್ದರು!:

ಬಾಲ್ಯದಲ್ಲಿ ತಂದೆಯ ಸೇನಾ ಉಡುಗೆಯನ್ನು ಹಾಕಿ ಪ್ರಿಯಾಂಕಾ ಪೋಸ್​ ನೀಡಿದ್ದರು. ಈ ಫೋಟೋವನ್ನು ಅವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅವರು ಫೋಟೋ ಹಾಕಿದ ಸ್ವಲ್ಪ ಹೊತ್ತಿನಲ್ಲೇ ಸಾಕಷ್ಟು ಲೈಕ್​ಗಳು ಹರಿದು ಬಂದಿವೆ.

ಪ್ರಿಯಾಂಕಾ ಚೋಪ್ರಾ Unfinished ಹೆಸರಿನಲ್ಲಿ ಆತ್ಮಚರಿತ್ರೆ ಬರೆದಿದ್ದಾರೆ. ಈ ಪುಸ್ತಕದಲ್ಲಿ ಬರುವ ಫೋಟೋ ಒಂದರ ಬಗ್ಗೆ ಬರೆದುಕೊಂಡಿರುವ ಅವರು, ಸೇನಾ ಉಡುಗೆಯನ್ನು ತೊಟ್ಟು ನನ್ನ ತಂದೆಯನ್ನು ಹಿಂಬಾಲಿಸೋದು ಎಂದರೆ ನನಗೆ ಅತಿ ಇಷ್ಟವಾಗಿತ್ತು. ನಾನು ನನ್ನ ತಂದೆಯಂತೆ ಬೆಳೆಯಲು ಬಯಸಿದ್ದೆ. ಅವರೇ ನನಗೆ ಮಾದರಿ. ನನ್ನ ತಂದೆ ನನ್ನ ಸಾಹಸ ಪ್ರಜ್ಞೆಯನ್ನು ಪ್ರೋತ್ಸಾಹಿಸಿದ್ದಾರೆ. ಬಾಲಕಿಯಾಗಿದ್ದಾಗಲೂ ನಾನು ಸದಾ ಅನ್ವೇಷಣೆಯಲ್ಲಿ ತೊಡಗುತ್ತಿದ್ದೆ. ಏನಾದರೂ ಹೊಸದನ್ನು ಮಾಡಲು ಬಯಸುತ್ತಿದೆ. ನಾನು ಸದಾ ಮೊದಲಿರಬೇಕು ಎಂದುಕೊಳ್ಳುತ್ತಿದ್ದೆ. ನನಗೆ ಆ ವಿಚಾರ ಈಗಲೂ ಕಾಡುತ್ತದೆ ಎಂದಿದ್ದಾರೆ.

ಪ್ರಿಯಾಂಕಾ ಚೋಪ್ರಾ ತಂದೆ ಅಶೋಕ್​​ ಚೋಪ್ರಾ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. 2013ರಲ್ಲಿ ಇವರು ಕ್ಯಾನ್ಸರ್​​ನಿಂದ ಮೃತಪಟ್ಟಿದ್ದರು.

ಫೆಬ್ರವರಿಯಲ್ಲಿ ಬರಲಿದೆ ಆತ್ಮಚರಿತ್ರೆ:

Unfinished ಹೆಸರಿನಲ್ಲಿ ಪ್ರಿಯಾಂಕಾ ಆತ್ಮಚರಿತ್ರೆ ಬರೆದುಕೊಂಡಿದ್ದಾರೆ. 2021ರ ಫೆಬ್ರವರಿ 9ರಂದು ಈ ಪುಸ್ತಕ ಬಿಡುಗಡೆಗೊಳ್ಳಲಿದೆ. ಸಿನಿಮಾ ವಿಚಾರಕ್ಕೆ ಬರೋದಾದರೆ ಪ್ರಿಯಾಂಕಾ ಚೋಪ್ರಾ ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಮೆರಿಕದ ಪಾಪ್​ ಸಿಂಗರ್​ ನಿಕ್​ ಜೋನಸ್​ ವಿವಾಹದ ನಂತರ ಪ್ರಿಯಾಂಕಾ ಬಣ್ಣದ ಬದುಕಿನಿಂದ ಬ್ರೇಕ್​ ತೆಗೆದುಕೊಂಡಿದ್ದರು. ಈಗ ಅವರು ಮತ್ತೆ ಸಿನಿಮಾದಲ್ಲಿ ನಟಿಸೋಕೆ ಆರಂಭಿಸಿದ್ದಾರೆ.