ರಣಬೀರ್​-ಆಲಿಯಾಗೆ ಕೂಡಿ ಬರುತ್ತಿಲ್ಲ ಕಂಕಣ ಭಾಗ್ಯ; ಚಿಂತೆಗೊಳಗಾದ ಕುಟುಂಬದವರು

ರಣಬೀರ್​ ಹಾಗೂ ಆಲಿಯಾ ಪ್ರೀತಿ ವಿಚಾರಕ್ಕೆ ಮನೆಯವರ ಒಪ್ಪಿಗೆ ಸಿಕ್ಕಿ ವರ್ಷಗಳೇ ಕಳೆದಿವೆ. 2020ರಲ್ಲಿ ಇಬ್ಬರೂ ಮದುವೆ ಆಗುವ ಆಲೋಚನೆ ಇಟ್ಟುಕೊಂಡಿದ್ದರು. ಇವರದ್ದು ಡೆಸ್ಟಿನೇಷನ್​ ಮದುವೆ ಎನ್ನುವ ಮಾತು ಕೂಡ ಕೇಳಿ ಬಂದಿತ್ತು.

  • TV9 Web Team
  • Published On - 17:46 PM, 3 May 2021
ರಣಬೀರ್​-ಆಲಿಯಾಗೆ ಕೂಡಿ ಬರುತ್ತಿಲ್ಲ ಕಂಕಣ ಭಾಗ್ಯ; ಚಿಂತೆಗೊಳಗಾದ ಕುಟುಂಬದವರು
ಆಲಿಯಾ ಭಟ್ - ರಣ್​​ಬೀರ್ ಕಪೂರ್

ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಪರಸ್ಪರ ಪ್ರೀತಿಸುವ ವಿಚಾರ ಜಗತ್​ಜಾಹೀರಾಗಿದೆ. ಆದರೆ, ಈ ವಿಚಾರವನ್ನು ಈ ಜೋಡಿ ಹೇಳಿಕೊಳ್ಳದಿದ್ದರೂ, ಫೋಟೋಗಳ ಮೂಲಕ ಎಲ್ಲವೂ ಸಾಬೀತಾಗಿದೆ. ಇತ್ತೀಚೆಗೆ ಈ ಜೋಡಿ ಮಾಲ್ಡೀವ್ಸ್​​ಗೆ ತೆರಳಿತ್ತು. ವಿಮಾನ ನಿಲ್ದಾಣದಲ್ಲಿ ಅವರು ಕಾಣಿಸಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ರಣಬೀರ್​-ಆಲಿಯಾ ಮದುವೆ ಈಗಾಗಲೇ ಪೂರ್ಣಗೊಂಡಿರಬೇಕಿತ್ತು. ಆದರೆ, ನಾನಾ ಕಾರಣದಿಂದ ಇವರ ಮದುವೆ ಮುಂದೂಡಲ್ಪಡುತ್ತಿದೆ.

ರಣಬೀರ್​ ಹಾಗೂ ಆಲಿಯಾ ಪ್ರೀತಿ ವಿಚಾರಕ್ಕೆ ಮನೆಯವರ ಒಪ್ಪಿಗೆ ಸಿಕ್ಕಿ ವರ್ಷಗಳೇ ಕಳೆದಿವೆ. 2020ರಲ್ಲಿ ಇಬ್ಬರೂ ಮದುವೆ ಆಗುವ ಆಲೋಚನೆ ಇಟ್ಟುಕೊಂಡಿದ್ದರು. ಇವರದ್ದು ಡೆಸ್ಟಿನೇಷನ್​ ಮದುವೆ ಎನ್ನುವ ಮಾತು ಕೂಡ ಕೇಳಿ ಬಂದಿತ್ತು. ಆದರೆ, ಕೊರೊನಾ ಇವರ ಪ್ಲ್ಯಾನ್​ಅನ್ನು ತಲೆಕೆಳಗೆ ಮಾಡಿತ್ತು.

ಹೀಗಿರುವಾಗಲೇ 2020ರ ಏಪ್ರಿಲ್​ 30ರಂದು ರಣಬೀರ್​ ತಂದೆ ರಿಷಿ ಕಪೂರ್​ ಮೃತಪಟ್ಟಿದ್ದರು. ಇದು ಕಪೂರ್​ ಕುಟುಂಬಕ್ಕೆ ಆಘಾತ ಉಂಟು ಮಾಡಿತ್ತು. ಹೀಗಾಗಿ, ರಣಬೀರ್​ ಮದುವೆಯನ್ನು ಮುಂದೂಡಿದ್ದರು. ಈ ವರ್ಷ ಈ ಜೋಡಿ ಮದುವೆ ಆಗುವ ಆಲೋಚನೆಯಲ್ಲಿತ್ತು. ಆದರೆ, ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿದೆ. ಭಾರತದಿಂದ ಬೇರೆ ದೇಶಗಳಿಗೆ ತೆರಳುವ ಫ್ಲೈಟ್​ಗಳ ಮೇಲೆ ನಿರ್ಬಂಧ ಹೇರಲಾಗಿದೆ. ಇದರಿಂದ, ಇವರ ವಿವಾಹ ಕಾರ್ಯಕ್ರಮ ಮತ್ತೆ ಮುಂದೂಡಲ್ಪಟ್ಟಿದೆ.

ದೇಶದೆಲ್ಲೆಡೆ ಕೊರೊನಾ ವೈರಸ್​ ಮಿತಿಮೀರಿ ಹರಡುತ್ತಿದೆ. ಅಕ್ಷಯ್​ ಕುಮಾರ್​ ಸೇರಿದಂತೆ ಸಾಕಷ್ಟು ಸ್ಟಾರ್​ಗಳು ಕೊರೊನಾ ವಿರುದ್ಧ ಹೋರಾಡೋಕೆ ತಮ್ಮನ್ನು ತಾವು ಮುಡಿಪಿಟ್ಟಿದ್ದಾರೆ. ಇಂಥ ಕಷ್ಟದ ಸ್ಥಿತಿಯಲ್ಲಿ ಸೋನು ಸೂದ್​ ನೇರವಾಗಿ ಅಖಾಡಕ್ಕೆ ಇಳಿದು ಸಹಾಯ ಮಾಡುತ್ತಿದ್ದಾರೆ. ಅಕ್ಷಯ್​ ಕುಮಾರ್​ ಆರ್ಥಿಕವಾಗಿ ಸಹಾಯ ಮಾಡುವ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಈ ಮಧ್ಯೆ ರಣಬೀರ್​ ಹಾಗೂ ಆಲಿಯಾ ಮಾಲ್ಡೀವ್ಸ್​ಗೆ ಹೋಗಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ: ಕೊರೊನಾದಿಂದ ಗುಣಮುಖರಾಗುತ್ತಿದ್ದಂತೆಯೇ ಮಾಲ್ಡೀವ್ಸ್​ಗೆ ಹಾರಿದ ರಣಬೀರ್ ಮತ್ತು ಆಲಿಯಾ; ಸಾಮಾಜಿಕ ಜಾಲತಾಣದಲ್ಲಿ ಫುಲ್​ ಟ್ರೋಲ್