2 ಕೋಟಿ ರೂ. ದೇಣಿಗೆ ನೀಡಿ, ಮಕ್ಕಳ ದತ್ತು ಪಡೆದು, ನೂರಾರು ರೈತರ ಸಾಲ ತೀರಿಸಿದ ಅಮಿತಾಭ್​ಗೆ ಯಾಕಿಷ್ಟು ಕೆಟ್ಟ ಕಮೆಂಟ್​?

Amitabh Bachchan: ಅಮಿತಾಭ್ ಬಚ್ಚನ್​​ ಮತ್ತು ಅವರ ಇಡೀ ಫ್ಯಾಮಿಲಿಯನ್ನು ಟಾರ್ಗೆಟ್​ ಮಾಡಿ ಕೆಟ್ಟ ಪದಗಳಿಂದ ನಿಂದಿಸಲಾಗಿದೆ. ಇದರ ಬಗ್ಗೆ ಅಮಿತಾಭ್​ ಸಿಡಿದೆದ್ದಿದ್ದಾರೆ. ಇಲ್ಲಿಯವರೆಗೂ ತಾವು ಏನೇನು ಮಾಡಿದ್ದೇವೆ ಎಂಬುದನ್ನು ಇಂಚಿಂಚೂ ವಿವರಿಸಿದ್ದಾರೆ.

2 ಕೋಟಿ ರೂ. ದೇಣಿಗೆ ನೀಡಿ, ಮಕ್ಕಳ ದತ್ತು ಪಡೆದು, ನೂರಾರು ರೈತರ ಸಾಲ ತೀರಿಸಿದ ಅಮಿತಾಭ್​ಗೆ ಯಾಕಿಷ್ಟು ಕೆಟ್ಟ ಕಮೆಂಟ್​?
ಅಮಿತಾಭ್ ಬಚ್ಚನ್

ಕೊರೊನಾ ವೈರಸ್​ನಿಂದಾಗಿ ಇಡೀ ದೇಶವೇ ತತ್ತರಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ದುಡಿಮೆ ಇಲ್ಲದೇ ಕೋಟ್ಯಂತರ ಮಂದಿ ಕಂಗೆಟ್ಟಿದ್ದಾರೆ. ಅಂಥವರಿಗೆ ಸಹಾಯ ಮಾಡಲು ಕೆಲವು ಸೆಲೆಬ್ರಿಟಿಗಳು ಮುಂದೆ ಬರುತ್ತಿರುವುದು ಶ್ಲಾಘನೀಯ. ಹಾಗಂತ ತಾವು ಮಾಡಿದ ಸಹಾಯದ ಬಗ್ಗೆ ಎಲ್ಲರೂ ಪ್ರಚಾರ ಮಾಡಿಕೊಳ್ಳೋಕೆ ಇಷ್ಟಪಡುವುದಿಲ್ಲ. ಅಂಥವರ ಸಾಲಿನಲ್ಲಿ ಅಮಿತಾಭ್​ ಬಚ್ಚನ್​ ಕೂಡ ಇದ್ದಾರೆ. ಆದರೆ ಬಿಗ್​ ಬಿ ಮಾಡಿದ ಸಮಾಜಮುಖಿ ಕೆಲಸದ ಬಗ್ಗೆ ಗೊತ್ತಿರದ ಅನೇಕರು ಕೆಟ್ಟದಾಗಿ ಕಮೆಂಟ್​ ಮಾಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಅಮಿತಾಭ್​ ಸದಾ ಆ್ಯಕ್ಟೀವ್​ ಆಗಿರುತ್ತಾರೆ. ಕೊವಿಡ್​ ಕಷ್ಟದ ಸಂದರ್ಭದಲ್ಲಿ ಅವರು ಯಾವುದೇ ಸಹಾಯ ಮಾಡಿಲ್ಲ ಎಂದು ಆರೋಪಿಸಿ ಅನೇಕ ನೆಟ್ಟಿಗರು ಕೆಟ್ಟ ಕಮೆಂಟ್​ಗಳ ಮೂಲಕ ನಿಂದಿಸಿದ್ದಾರೆ. ಅಮಿತಾಭ್​ ಮತ್ತು ಅವರ ಇಡೀ ಫ್ಯಾಮಿಲಿಯನ್ನು ಟಾರ್ಗೆಟ್​​ ಮಾಡಿ ಕಟು ಪದಗಳಿಂದ ನಿಂದಿಸಲಾಗಿದೆ. ಇದರ ಬಗ್ಗೆ ಅಮಿತಾಭ್​ ಸಿಡಿದೆದ್ದಿದ್ದಾರೆ. ಇಲ್ಲಿಯವರೆಗೂ ತಾವು ಏನೇನು ಮಾಡಿದ್ದೇವೆ ಎಂಬುದನ್ನು ಇಂಚಿಂಚೂ ವಿವರಿಸಿದ್ದಾರೆ.

ಕೊರೊನಾದಿಂದ ಕಂಗೆಟ್ಟಿರುವ ದೆಹಲಿಗೆ ಅಮಿತಾಬ್​ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಒಂದೂವರೆ ಸಾವಿರ ರೈತರ ಸಾಲವನ್ನು ತೀರಿಸಿದ್ದಾರೆ. ಆ ಮೂಲಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಿದ್ದಾರೆ. ಹುತಾತ್ಮ ಸೈನಿಕರ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಹಲವು ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳನ್ನು ನೀಡಿದ್ದಾರೆ. ಕಳೆದ ವರ್ಷ 4 ಲಕ್ಷ ಜನರಿಗೆ ಒಂದು ತಿಂಗಳ ಕಾಲ ಉಚಿತವಾಗಿ ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡಿದ್ದರು. ಮುಂಬೈನ 5 ಸಾವಿರ ಜನರಿಗೆ ಪ್ರತಿದಿನ ಊಟ ನೀಡಿದ್ದರು.

ಕಠಿಣ ಲಾಕ್​ಡೌನ್​ನಿಂದ ತಮ್ಮ ಊರುಗಳಿಗೆ ಬರಿಗಾಲಿನಲ್ಲಿ ನಡೆಯುತ್ತಿದ್ದ ಸಾವಿರಾರು ವಲಸೆ ಕಾರ್ಮಿಕರಿಗೆ ಅಮಿತಾಬ್​ ಚಪ್ಪಲಿಗಳನ್ನು ಕೊಡಿಸಿದ್ದರು. 30 ಬಸ್​ಗಳನ್ನು ಬುಕ್​ ಮಾಡಿ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದರು. ಹೀಗೆ ಬೆಳೆಯುತ್ತ ಸಾಗುತ್ತದೆ ಅಮಿತಾಬ್​ ಮಾಡಿರುವ ದಾನ ಧರ್ಮದ ಪಟ್ಟಿ. ಅಲ್ಲದೆ ಕೊವಿಡ್​ನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳನ್ನು ಅಮಿತಾಬ್​ ದತ್ತು ಪಡೆದುಕೊಂಡು, ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಇಷ್ಟೆಲ್ಲ ಮಾಡಿದ್ದನ್ನು ಬಾಯಿ ಬಿಟ್ಟು ಹೇಳಿಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದಕ್ಕೆ ಮುಜುಗರ ಆಗುತ್ತಿದೆ ಎಂದು ಅವರು ಹೇಳಿದ್ದಾರೆ. ಇನ್ಮೇಲಾದರೂ ಸತ್ಯ ತಿಳಿಯದೇ ಕಮೆಂಟ್​ ಮಾಡುವವರು ಸುಮ್ಮನಿರುತ್ತಾರೋ ಇಲ್ಲವೋ ಗೊತ್ತಿಲ್ಲ. ಕೆಲವೇ ದಿನಗಳ ಹಿಂದೆ ನಟ ಅಕ್ಷಯ್​ ಕುಮಾರ್​ ಅವರನ್ನೂ ಇದೇ ರೀತಿ ಟಾರ್ಗೆಟ್​ ಮಾಡಲಾಗಿತ್ತು. ಅದಕ್ಕೆ ಅವರ ಪತ್ನಿ ಟ್ವಿಂಕಲ್​ ಖನ್ನಾ ಸರಿಯಾಗಿ ತಿರುಗೇಟು ನೀಡಿದ್ದರು.

ಇದನ್ನೂ ಓದಿ:

Akshay Kumar: ಈ ಕಷ್ಟದಲ್ಲೂ ಅಕ್ಷಯ್​ ಕುಮಾರ್​ ಏನೂ ಸಹಾಯ ಮಾಡ್ತಿಲ್ವಾ? ಪತ್ನಿ ಟ್ವಿಂಕಲ್​ ಖನ್ನಾ ಕೊಟ್ರು ಖಡಕ್​ ಉತ್ತರ

ಕೊವಿಡ್​ ಸಂಕಷ್ಟಕ್ಕೆ ಅನುಷ್ಕಾ-ವಿರಾಟ್​ 2 ಕೋಟಿ ರೂ. ದೇಣಿಗೆ; ನಿಧಿ ಸಂಗ್ರಹಕ್ಕೆ ಮುಂದಾದ ದಂಪತಿ