ವಿಕ್ಕಿ ಕೌಶಲ್​- ಕತ್ರಿನಾ ಸಂಬಂಧದ ಬಗ್ಗೆ ಬಾಯ್ಬಿಟ್ಟ ಕಪೂರ್​ ಕುಟುಂಬದ ಕುಡಿ; ಶೀಘ್ರವೇ ಮದುವೆ?

ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​ ಒಟ್ಟಾಗಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಿದೆ. ಇವರ ನಡುವೆ ಪ್ರೀತಿ ಹುಟ್ಟಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇದನ್ನು ಇಬ್ಬರೂ ಅಲ್ಲಗಳೆದಿದ್ದರು.

ವಿಕ್ಕಿ ಕೌಶಲ್​- ಕತ್ರಿನಾ ಸಂಬಂಧದ ಬಗ್ಗೆ ಬಾಯ್ಬಿಟ್ಟ ಕಪೂರ್​ ಕುಟುಂಬದ ಕುಡಿ; ಶೀಘ್ರವೇ ಮದುವೆ?
ವಿಕ್ಕಿ-ಕತ್ರಿನಾ

ನಟಿ ಕತ್ರಿನಾ ಕೈಫ್​ ರಿಲೇಶನ್​​ಶಿಪ್​ ವಿಚಾರದಲ್ಲಿ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ರಣಬೀರ್​ ಕಪೂರ್​, ಸಲ್ಮಾನ್​ ಖಾನ್​ ಜತೆ ಸುತ್ತಾಟ ನಡೆಸಿದ್ದ ಅವರು, ನಂತರ ಸೈಲೆಂಟ್​ ಆದರು. ಮತ್ತೆ ಯಾರ ಸುದ್ದಿಗೂ ಹೋಗುವ ಸೂಚನೆಯನ್ನು ಅವರು ನೀಡಿರಲಿಲ್ಲ. ಸದ್ಯ, ಬಾಲಿವುಡ್​ ಯಂಗ್​ ಹೀರೋ ವಿಕ್ಕಿ ಕೌಶಲ್​ ಜತೆ ಕತ್ರಿನಾ ಸುತ್ತಾಟ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರವನ್ನು ಈಗ ಕಪೂರ್​ ಕುಟುಂಬದ ಕುಡಿ ಖಚಿತಪಡಿಸಿದೆ.

ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​ ಒಟ್ಟಾಗಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಿದೆ. ಇವರ ನಡುವೆ ಪ್ರೀತಿ ಹುಟ್ಟಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇದನ್ನು ಇಬ್ಬರೂ ಅಲ್ಲಗಳೆದಿದ್ದರು. ನಾವಿಬ್ಬರೂ ಬೆಸ್ಟ್​ ಫ್ರೆಂಡ್ಸ್​​ ಅಷ್ಟೇ ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಆದರೆ, ಈಗ ಅನಿಲ್​ ಕಪೂರ್​ ಮಗ ಹರ್ಷವರ್ಧನ್​ ಕಪೂರ್​ ಕತ್ರಿನಾ-ವಿಕ್ಕಿ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಹರ್ಷವರ್ಧನ್​, ‘ಕತ್ರಿನಾ-ವಿಕ್ಕಿ ಆಪ್ತರಾಗಿದ್ದಾರೆ. ಇಬ್ಬರೂ ಮದುವೆ ಆಗುವ ಆಲೋಚನೆಯಲ್ಲಿ ಕೂಡ ಇದ್ದಾರೆ. ಬಹುಶಃ ಈ ವಿಚಾರ ಹೇಳಿದ ನಂತರದಲ್ಲಿ ನಾನು ತೊಂದರೆಗೆ ಸಿಲುಕಬಹುದು’ ಎಂದಿದ್ದಾರೆ. ಸದ್ಯ ಇವರ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಅದು, 2018ರ ಸಮಯ. ‘ಕಾಫಿ ವಿತ್​ ಕರಣ್’​ ಶೋನಲ್ಲಿ ಕತ್ರಿನಾ ಪಾಲ್ಗೊಂಡಿದ್ದರು. ಈ ವೇಳೆ ವಿಕ್ಕಿ ಜತೆ ತೆರೆ ಹಂಚಿಕೊಳ್ಳುವ ಆಸಕ್ತಿ ತೋರಿದ್ದರು ಕತ್ರಿನಾ. ಇದಾದ ನಂತರ ಅಂದರೆ, 2019ರಲ್ಲಿ ಇಬ್ಬರೂ ಮುಂಬೈನಲ್ಲಿ ಊಟಕ್ಕೆ ಒಟ್ಟಾಗಿ ಸೇರಿದ್ದರು. ಇದರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಕತ್ರಿನಾ ಕೈಫ್​ ಸದ್ಯ, ‘ಫೋನ್​ ಬೂತ್’ ಹಾಗೂ ‘ಟೈಗರ್​ 3’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೊವಿಡ್​ ಕಾರಣದಿಂದ ಸಿನಿಮಾ ಶೂಟಿಂಗ್​ ನಿಂತಿದೆ. ಶೀಘ್ರವೇ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ ನಂತರದಲ್ಲಿ ಮತ್ತೆ ಸಿನಿಮಾ ಕೆಲಸಗಳು ಆರಂಭಗೊಳ್ಳಲಿವೆ.

ಇದನ್ನೂ ಒದಿ: ಸುಶಾಂತ್​ ಸಿಂಗ್​ ರಜಪೂತ್ ರೀತಿಯೇ ಕಾರ್ತಿಕ್​ ಆರ್ಯನ್​ಗೆ ಅನ್ಯಾಯ ಆಗಲು ಕತ್ರಿನಾ ಕಾರಣವೇ?