ವಿವಾದಿತ ಯೂಟ್ಯೂಬರ್​ ವಿಕಾಸ್ ಅಲಿಯಾಸ್​ ಹಿಂದುಸ್ತಾನಿ ಬಹೂ ಅರೆಸ್ಟ್​; ಕಾರಣ ಏನು?

ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ಮಿತಿ ಮೀರಿದೆ. ಆದರೆ, ಕೆಲ ಪರೀಕ್ಷೆಗಳನ್ನು ಮುಂದೂಡಲು ಅಲ್ಲಿನ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಇದನ್ನು ವಿರೋಧಿಸಿ ವಿಕಾಸ್​ ಪ್ರತಿಭಟನೆಗೆ ಮುಂದಾಗಿದ್ದರು.

ವಿವಾದಿತ ಯೂಟ್ಯೂಬರ್​ ವಿಕಾಸ್ ಅಲಿಯಾಸ್​ ಹಿಂದುಸ್ತಾನಿ ಬಹೂ ಅರೆಸ್ಟ್​; ಕಾರಣ ಏನು?
ಹಿಂದೂಸ್ತಾನ್​ ಬಹೂ

ಯೂಟ್ಯೂಬ್​ ವಿಡಿಯೋ ಮೂಲಕ ಸಾಕಷ್ಟು ವಿವಾದ ಸೃಷ್ಟಿಸಿದ್ದ ವಿಕಾಸ್​ ಪಾಠಕ್​ ಅಲಿಯಾಸ್​ ಹಿಂದುಸ್ತಾನಿ ಬಹೂ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ತೆರಳಲು ಎಮೆರ್ಜೆನ್ಸಿ ಸೇವೆಯನ್ನು ದುರ್ಬಳಕೆ ಮಾಡಿಕೊಂಡ ಆರೋಪ ಇವರ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಫ್​ಐಆರ್​ ದಾಖಲು ಮಾಡಿದ್ದಾರೆ.

ಭಾರತದಲ್ಲಿ ಕೊರೊನಾ ವೈರಸ್​ ಮಿತಿಮೀರಿ ಹರಡುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ಮಿತಿ ಮೀರಿದೆ. ಆದರೆ, ಕೆಲ ಪರೀಕ್ಷೆಗಳನ್ನು ಮುಂದೂಡಲು ಅಲ್ಲಿನ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಇದನ್ನು ವಿರೋಧಿಸಿ ವಿಕಾಸ್​ ಪ್ರತಿಭಟನೆಗೆ ಮುಂದಾಗಿದ್ದರು.

ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಇದೆ. ಹೀಗಾಗಿ, ಅನಾವಶ್ಯಕ ಯಾರೂ ಸುತ್ತಾಡುವಂತಿಲ್ಲ, ಪ್ರತಿಭಟನೆ ಮಾಡುವಂತಿಲ್ಲ. ಹೀಗಾಗಿ, ಆಂಬುಲೆನ್ಸ್​ ಮೂಲಕ ವಿಕಾಸ್​ ಮುಂಬೈನ ಶಿವಾಜಿ ಪಾರ್ಕ್​​ಗೆ ತಲುಪಿದ್ದಾರೆ. ಆಂಬುಲೆನ್ಸ್​ ಎಮೆರ್ಜೆನ್ಸಿ ಸೇವೆ ಅಡಿಯಲ್ಲಿ ಬರುವುದರಿಂದ ಅವರು ಸುಲಭವಾಗಿ ಶಿವಾಜಿ ಪಾರ್ಕ್​ ತಲುಪಿದ್ದಾರೆ.

ಶಿವಾಜಿ ಪಾರ್ಕ್​​ನಲ್ಲಿ ಸರ್ಕಾರದ ವಿರುದ್ಧ ವಿಕಾಸ್​ ಘೋಷಣೆ ಕೂಗಿದ್ದಾರೆ. ಅಲ್ಲದೆ, ಪರೀಕ್ಷೆಗಳನ್ನು ಈಗಲೇ ರದ್ದು ಮಾಡುವಂತೆ ಆಗ್ರಹಿಸಿದ್ದಾರೆ. ಎಮೆರ್ಜೆನ್ಸಿ ಸೇವೆಯನ್ನು ದುರ್ಬಳಕೆ ಮಾಡಿಕೊಂಡ ಆರೋಪ ಹಾಗೂ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ವಿಕಾಸ್​ ಅವರನ್ನು ಬಂಧಿಸಲಾಗಿದ್ದು, ಎಫ್​ಐಆರ್​ ದಾಖಲಾಗಿದೆ. ಸದ್ಯ, ಪೊಲೀಸರು ಈ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ವಿಕಾಸ್ ಯೂಟ್ಯೂಬ್​ ಚಾನೆಲ್​ ಹೆಸರು ಹಿಂದೂಸ್ತಾನಿ ಬಹೂ ಎಂದಿತ್ತು.  ಯೂಟ್ಯೂಬ್​ ವಿಡಿಯೋಗಳ ಮೂಲಕ ಬೆಳಕಿಗೆ ಬಂದವರು. ಇವರು ಸಾಕಷ್ಟು ಜನರು ಹಾಗೂ ಸೆಲೆಬ್ರಿಟಿಗಳ್ನು ಕೆಟ್ಟ ಶಬ್ದಗಳಿಂದ ನಿಂದಿಸಿ ವಿಡಿಯೋ ಮಾಡುತ್ತಿದ್ದರು. ಈ ಕಾರಣಕ್ಕೆ ಯೂಟ್ಯೂಬ್ ಅವರ ಖಾತೆಯನ್ನು ಡಿಲೀಟ್​ ಮಾಡಿದೆ. ಸಾಕಷ್ಟು ಟ್ರೋಲ್ ಪೇಜ್​ಗಳು ಇವರ ವಿಡಿಯೋಗಳನ್ನು ಬಳಕೆ ಮಾಡಿಕೊಂಡಿದ್ದರು.

ಇದನ್ನೂ ಓದಿ: ದೇವರು ಯಾಕೆ ಹೀಗೆ ಮಾಡ್ತಿದ್ದಾನೋ ಗೊತ್ತಿಲ್ಲ; ಬಿಗ್ ಬಾಸ್- 8 ನಿಂತಿದ್ದಕ್ಕೆ ಪ್ರಥಮ್ ಬೇಸರ