ಎರಡನೇ ಮಗು ಜನನದ ಬಳಿಕ ಮೊದಲ ಬಾರಿಗೆ ಫೋಟೋ ಹಂಚಿಕೊಂಡ ಕರೀನಾ ಕಪೂರ್; ಏನು ಹೇಳಿದ್ದಾರೆ?

Kareena Kapoor: ‘Oh hello there.. Missed you all’ ಎಂದು ಕರೀನಾ ಬರೆದುಕೊಂಡಿದ್ದಾರೆ. ಕರೀನಾ ಕಪೂರ್ ವಿಶಿಷ್ಟ ಟೋಪಿ ಮತ್ತು ಕಪ್ಪು ಕನ್ನಡಕ ಧರಿಸಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳನ್ನು ಮಿಸ್ ಮಾಡಿಕೊಂಡೆ ಎಂದು ಹೇಳಿದ್ದಾರೆ.

  • TV9 Web Team
  • Published On - 14:07 PM, 1 Mar 2021
ಎರಡನೇ ಮಗು ಜನನದ ಬಳಿಕ ಮೊದಲ ಬಾರಿಗೆ ಫೋಟೋ ಹಂಚಿಕೊಂಡ ಕರೀನಾ ಕಪೂರ್; ಏನು ಹೇಳಿದ್ದಾರೆ?
ಕರೀನಾ ಕಪೂರ್ ಖಾನ್

ಬಾಲಿವುಡ್ ಅಂಗಳದ ಖ್ಯಾತ ನಟಿ ಕರೀನಾ ಕಪೂರ್ ಎರಡನೇ ಮಗು ಜನನದ ಬಳಿಕ ತಮ್ಮ ಮೊದಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿಗಳಿಗೆ ಮೊದಲನೆ ಬಾರಿಗೆ ಗಂಡು ಮಗುವಾಗಿತ್ತು. ಫೆಬ್ರವರಿ 15ರಂದು ಎರಡನೇ ಮಗನ ಜನನವಾಗಿದೆ. ಎರಡನೇ ಮಗುವಿಗೆ ಏನು ಹೆಸರಿಡಬಹುದು ಎಂದು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದರು. ಆ ಬಗ್ಗೆ ಗುಟ್ಟು ಬಿಚ್ಚಿಡದ ಕರೀನಾ, ತಮ್ಮ ಫೋಟೋ ಮಾತ್ರ ಹಂಚಿಕೊಂಡಿದ್ದಾರೆ. ಅಭಿಮಾನಿಗಳನ್ನು ಮಿಸ್ ಮಾಡಿಕೊಂಡೆ ಎಂದು ಹೇಳಿದ್ದಾರೆ.

‘Oh hello there.. Missed you all’ ಎಂದು ಕರೀನಾ ಬರೆದುಕೊಂಡಿದ್ದಾರೆ. ಕರೀನಾ ಕಪೂರ್ ವಿಶಿಷ್ಟ ಟೋಪಿ ಮತ್ತು ಕಪ್ಪು ಕನ್ನಡಕ ಧರಿಸಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳನ್ನು ಮಿಸ್ ಮಾಡಿಕೊಂಡೆ ಎಂದು ಹೇಳಿದ್ದಾರೆ. ಎರಡನೇ ಮಗುವಿಗೆ ಜನನದ ಬಳಿಕ ಅವರು ಹಂಚಿಕೊಳ್ಳುತ್ತಿರುವ ಎರಡನೇ ಪೋಸ್ಟ್ ಇದಾಗಿದೆ. ಈ ಮೊದಲು, ಸೈಫ್ ಅಲಿ ಖಾನ್​ರ ಭೂತ್ ಪೊಲೀಸ್ ಸಿನಿಮಾ ಪೋಸ್ಟ್ ಹಂಚಿಕೊಂಡಿದ್ದರು. ಆದರೆ, ತಮ್ಮ ಫೋಟೋ ಹಾಕಿರಲಿಲ್ಲ. ಹೆರಿಗೆಯ ಬಳಿಕ ಇದೇ ಮೊದಲ ಬಾರಿಗೆ ತಾವು ಕಾಣಿಸಿಕೊಂಡಿದ್ದಾರೆ. ಕರೀನಾ ಕಪೂರ್ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ನೀಲಿ ಬಣ್ಣದ ಟಾಪ್​ನಲ್ಲಿ ಕಾಣಿಸಿಕೊಂಡಿರುವ ಕರೀನಾ ಕಪೂರ್ ಸೈಫ್ ಅಲಿ ಖಾನ್​ರ ಹೊಸ ಮನೆಯ ಟೆರೆಸ್​ನಲ್ಲಿ ಫೊಟೊ ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕರೀನಾ ದಂಪತಿ ಎರಡನೇ ಮಗುವಿನ ಜನನದ ಬಳಿಕ ಹಳೆಯ ಮನೆಯ ಸಮೀಪವಿರುವ ಹೊಸ ಫ್ಲಾಟ್ ಒಂದಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.

ಅಗಸ್ಟ್ 12, 2020ರಂದು ತಾರಾ ದಂಪತಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಮತ್ತೊಮ್ಮೆ ಅಪ್ಪ ಅಮ್ಮ ಆಗುತ್ತಿರುವ ಸಂಭ್ರಮವನ್ನು ಸಾರ್ವಜನಿಕವಾಗಿ ಘೋಷಿಸಿಕೊಂಡಿದ್ದರು. ‘ನಮ್ಮ ಕುಟುಂಬಕ್ಕೆ ಇನ್ನೋರ್ವ ಸದಸ್ಯನ ಆಗಮನವಾಗುತ್ತಿದೆ. ನಿಮ್ಮೆಲ್ಲರ ಹಾರೈಕೆ ಸದಾ ಇರಲಿ ಎಂದು ಈ ಜೋಡಿ ಹೇಳಿತ್ತು.

ಕರೀನಾ ಕಪೂರ್ ಅವರ ಸಹೋದರಿ ಇಂದು ಬೆಳಗ್ಗೆ ಬೆಬೊ ಗಂಡು ಮಗುವಿಗೆ ಜನ್ಮ ನೀಡಿದ ವಿಷಯವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ. 2012ರಲ್ಲಿ  ಕರೀನಾ ಕಪೂರ್​  ಸೈಫ್ ಅಲಿ ಖಾನ್​  ಅವರನ್ನು ವಿವಾಹವಾಗಿದ್ದು 2016ರಲ್ಲಿ  ತೈಮೂರ್​ಗೆ  ಜನ್ಮ ನೀಡಿದ್ದರು.

ಗರ್ಭಿಣಿಯಾದ ನಂತರವೂ ಚಟುವಟಿಕೆ ನಿಲ್ಲಿಸಿರಲಿಲ್ಲ
ಕರೀನಾ ಗರ್ಭವತಿಯಾದ ನಂತರವೂ ಚಟುವಟಿಕೆಗಳನ್ನು ನಿಲ್ಲಿಸಿರಲಿಲ್ಲ. ರ‍್ಯಾಂಪ್ ವಾಕ್ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಮಗ ತೈಮೂರ್ ಅಲಿ ಖಾನ್ ಮತ್ತು ಪತಿ ಸೈಫ್ ಅಲಿ ಖಾನ್ ಜೊತೆಗೆ 10 ದಿನಗಳ ಕಾಲ ಧರ್ಮಶಾಲೆಯಲ್ಲಿ ಕಳೆದಿದ್ದರು. ಸದ್ಯ ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿರುವ ಕರೀನಾ ಮಗುವಿನ ಆರೈಕೆ ಮತ್ತು ಕೆಲಸ ಎರಡನ್ನು ಸರಿದೂಗಿಸಿಕೊಂಡು ಹೋಗುವುದು ತಾಯಿಯಾಗಿ ನನ್ನ ಕರ್ತವ್ಯ ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ತಿಳಿಸಿದ್ದರು.

ಗರ್ಭಿಣಿಯಾದವರು ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಗರ್ಭಾವಸ್ಥೆಯಲ್ಲಿರಲಿ ಅಥವಾ ಹೆರಿಗೆಯ ನಂತರದ ದಿನಗಳಲ್ಲಿಯೇ ಆಗಲಿ, ನಾವು ಸಕ್ರಿಯರಾಗಿದ್ದರೆ ಎಲ್ಲವೂ ಸಾಧ್ಯ. ಯೋಗ ಮತ್ತು ವ್ಯಾಯಾಮದ ಜೊತೆ ಸದಾ ಗುರುತಿಸಿಕೊಳ್ಳುವುದರಿಂದ ತಾಯಿ ಮತ್ತು ಮಗು ಇಬ್ಬರೂ ಕೂಡ ಆರೋಗ್ಯವಾಗಿರುತ್ತಾರೆ. ದೇಹರಚನೆ ಮೊದಲಿನಂತೆ ಕಾಪಾಡಿಕೊಳ್ಳಲು ಸದಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ ಎಂದು ಕರೀನಾ ಕಪೂರ್ ಖಾನ್ ತಿಳಿಸಿದ್ದರು.

ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಕರೀನಾ ಕಪೂರ್: ಬೇಬಿ ಬಂಪ್ ಫೋಟೋ ವೈರಲ್..!

ವಿರುಷ್ಕಾ ದಂಪತಿಗೆ ಹೆಣ್ಣು ಮಗು; ಟ್ವಿಟರ್​ನಲ್ಲಿ ತೈಮೂರ್ ಮೀಮ್ ಟ್ರೆಂಡಿಂಗ್