ಮಾಧುರಿ ದೀಕ್ಷಿತ್​ಗೂ ಹತ್ತಿದೆ ‘ಕಚ್ಚಾ ಬಾದಾಮ್​’ ಗುಂಗು; ರಿತೇಶ್​​ ಜತೆ ಮಸ್ತ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ

ಮಾಧುರಿ ದೀಕ್ಷಿತ್​ಗೂ ಹತ್ತಿದೆ ‘ಕಚ್ಚಾ ಬಾದಾಮ್​’ ಗುಂಗು; ರಿತೇಶ್​​ ಜತೆ ಮಸ್ತ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ
ಮಾಧುರಿ ದೀಕ್ಷಿತ್, ರಿತೇಶ್ ದೇಶಮುಖ್

Madhuri Dixit | Kacha Badam: ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ‘ಕಚ್ಚಾ ಬಾದಾಮ್’ ಹಾಡಿನ ಗುಂಗು ಹತ್ತಿಸಿಕೊಂಡಿದ್ದಾರೆ. ಮಾಧುರಿ ದೀಕ್ಷಿತ್​ ಸಹ ಇದಕ್ಕೆ ಹೊರತಾಗಿಲ್ಲ.

TV9kannada Web Team

| Edited By: Madan Kumar

Apr 06, 2022 | 12:22 PM

ಮಾಧುರಿ ದೀಕ್ಷಿತ್ (Madhuri Dixit) ಅವರ ಡ್ಯಾನ್ಸ್​ ನೋಡಲು ಅಭಿಮಾನಿಗಳು ತುಂಬ ಇಷ್ಟಪಡುತ್ತಾರೆ. ಮಾಧುರಿ ದೀಕ್ಷಿತ್​ ಎಂದರೆ ಡ್ಯಾನ್ಸ್​, ಡ್ಯಾನ್ಸ್​ ಎಂದರೆ ಮಾಧುರಿ ದೀಕ್ಷಿತ್​ ಎಂಬಷ್ಟರ ಮಟ್ಟಿಗೆ ಡ್ಯಾನ್ಸ್​ ಮೂಲಕ ಫೇಮಸ್​ ಆದ ನಟಿ ಅವರು. ದಶಕಗಳ ಹಿಂದೆ ಬಾಲಿವುಡ್​ ಸಿನಿಮಾಗಳಲ್ಲಿ ಅವರು ಸ್ಟೆಪ್​ ಹಾಕಿದ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಈಗಲೂ ಮಾಧುರಿ ದೀಕ್ಷಿತ್​ ಅವರು ಅದೇ ಚಾರ್ಮ್​ ಉಳಿಸಿಕೊಂಡಿದ್ದಾರೆ. ರಿಯಾಲಿಟಿ ಶೋಗಳಿಗೆ ಜಡ್ಜ್​ ಆಗಿ ಕಾಣಿಸಿಕೊಳ್ಳುವ ಮೂಲಕ ಅವರು ಬ್ಯುಸಿ ಆಗಿದ್ದಾರೆ. ಅದರ ಜೊತೆಗೆ ಸೋಶಿಯಲ್​ ಮೀಡಿಯಾದಲ್ಲಿ ಆಗಾಗ ಪೋಸ್ಟ್​ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇರಲು ಅವರು ಬಯಸುತ್ತಾರೆ. ಮಾಧುರಿ ದೀಕ್ಷಿತ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚಾಗಿ ಡ್ಯಾನ್ಸ್​ ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಾರೆ. ಇತ್ತೀಚೆಗೆ ಅವರು ‘ಕಚ್ಚಾ ಬಾದಾಮ್​..’ (Kacha Badam) ಹಾಡಿಗೆ ಬಿಂದಾಸ್​ ಆಗಿ ಸ್ಟೆಪ್​ ಹಾಕಿದ್ದಾರೆ. ಆ ವಿಡಿಯೋ ಕಂಡು ಫ್ಯಾನ್ಸ್​ ಖುಷಿ ಪಟ್ಟಿದ್ದಾರೆ. ನಟ ರಿತೇಶ್​ ದೇಶಮುಖ್​ (Riteish Deshmukh) ಅವರು ಕೂಡ ಮಾಧುರಿ ದೀಕ್ಷಿತ್​ಗೆ ಸಾಥ್​ ನೀಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದೆ.

ಈ ಸೋಶಿಯಲ್​ ಮೀಡಿಯಾ ಯುಗದಲ್ಲಿ ಯಾರು ಬೇಕಾದರೂ ಸೆಲೆಬ್ರಿಟಿ ಆಗಬಹುದು. ರಾತ್ರೋರಾತ್ರಿ ಫೇಮಸ್​ ಆಗಿ ಬಿಡಬಹುದು. ‘ಕಚ್ಚಾ ಬಾದಾಮ್​..’ ಹಾಡು ಕೂಡ ಅದೇ ರೀತಿ ವೈರಲ್​ ಆಗಿದೆ. ಅದಕ್ಕೆ ಕೋಟ್ಯಂತರ ಮಂದಿ ರೀಲ್ಸ್​ ಮಾಡಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ಹಾಡಿನ ಗುಂಗು ಹತ್ತಿಸಿಕೊಂಡಿದ್ದಾರೆ. ಮಾಧುರಿ ದೀಕ್ಷಿತ್​ ಸಹ ಇದಕ್ಕೆ ಹೊರತಾಗಿಲ್ಲ.

‘ಇದು ತುಂಬ ಮಜವಾಗಿತ್ತು ಅಲ್ಲವೇ? ಇದರಲ್ಲಿ ನನ್ನ ಜೊತೆ ಪಾಲ್ಗೊಂಡಿದ್ದಕ್ಕೆ ರಿತೇಶ್​ ಅವರಿಗೆ ಧನ್ಯವಾದಗಳು’ ಎಂದು ಮಾಧುರಿ ದೀಕ್ಷಿತ್ ಅವರು ಕ್ಯಾಪ್ಷನ್​ ನೀಡಿದ್ದಾರೆ. 12 ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋವನ್ನು ಲೈಕ್​ ಮಾಡಿದ್ದಾರೆ. ನಾಲ್ಕು ಸಾವಿರಕ್ಕೂ ಹೆಚ್ಚು ಕಮೆಂಟ್​ಗಳು ಬಂದಿವೆ. ಸೋಶಿಯಲ್​ ಮೀಡಿಯಾದಲ್ಲಿ ಈ ಹಾಡಿಗೆ ಮತ್ತು ಮಾಧುರಿ ದೀಕ್ಷಿತ್​ ಅವರಿಗೆ ಯಾವ ಪರಿ ಫ್ಯಾನ್​ ಫಾಲೋಯಿಂಗ್​ ಇದೆ ಎಂಬುದಕ್ಕೆ ಈ ಸಂಖ್ಯೆಗಳೇ ಸಾಕ್ಷಿ.

‘ಕಚ್ಚಾ ಬಾದಾಮ್​..’ ಹಾಡು ಸಿಕ್ಕಾಪಟ್ಟೆ ಜನಪ್ರಿಯ ಆಗಿದೆ. ರೀಲ್ಸ್​ ಓಪನ್​ ಮಾಡಿದರೆ ಪದೇ ಪದೇ ಈ ಹಾಡು ಕೇಳಿಸುತ್ತದೆ. ರಿತೇಶ್​ ದೇಶಮುಖ್​ ಅವರು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಯಾವಾಗಲೂ ಆ್ಯಕ್ಟೀವ್​ ಆಗಿರುತ್ತಾರೆ. ಪತ್ನಿ ಜೆನಿಲಿಯಾ ಜೊತೆ ಸೇರಿಕೊಂಡು ಅವರು ಹಲವು ಬಗೆಯ ರೀಲ್ಸ್​ ಮಾಡುತ್ತಾರೆ. ಇತರೆ ಸೆಲೆಬ್ರಿಟಿಗಳ ಜೊತೆಯಲ್ಲೂ ಅವರು ವಿಡಿಯೋಗಳನ್ನು ಮಾಡಿ ಹಂಚಿಕೊಳ್ಳುತ್ತಾರೆ. ‘ಕಚ್ಚಾ ಬಾದಾಮ್​..’ ಹಾಡಿನ ರೀಲ್ಸ್​ಗಾಗಿ ಅವರು ಮಾಧುರಿ ದೀಕ್ಷಿತ್​ ಜೊತೆ ಕೈ ಜೋಡಿಸಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಹೀರೋಯಿನ್​ ಆಗಿ ಬ್ಯುಸಿ ಆಗಿದ್ದ ಮಾಧುರಿ ದೀಕ್ಷಿತ್​ ಅವರು ಇತ್ತೀಚೆಗೆ ಒಟಿಟಿ ವೇದಿಕೆಗೂ ಕಾಲಿಟ್ಟರು. ಅವರು ನಟಿಸಿದ ಮೊದಲ ವೆಬ್​ ಸಿರೀಸ್​ ‘ದಿ ಫೇಮ್​ ಗೇಮ್​’ ಇತ್ತೀಚೆಗೆ ರಿಲೀಸ್​ ಆಯಿತು. ಅದರಲ್ಲಿಯೂ ಕೂಡ ಅವರ ಸ್ಟಾರ್​ ನಟಿಯ ಪಾತ್ರ ಮಾಡಿದ್ದಾರೆ.

‘ಸಿನಿಮಾವನ್ನು ನಾನು ವೃತ್ತಿಯಾಗಿ ನೋಡುತ್ತೇನೆ, ಕ್ಯಾಮೆರಾ ಮುಂದೆ ನಿಂತಿದ್ದಾಗ ನಾನು ವೃತ್ತಿಪರ ನಟಿ. ನಾನೇನು ಮಾಡುತ್ತೇನೆ ಎಂಬುದು ತಿಳಿದಿರುತ್ತದೆ. ಸ್ಕ್ರಿಪ್ಟ್​ ಓದಿಕೊಂಡು ನಟಿಸುತ್ತೇನೆ. ಕ್ಯಾಮೆರಾ ಸಲುವಾಗಿ ನಾನು ಆ ಪಾತ್ರವೇ ಆಗಿ ಬದಲಾಗುತ್ತೇನೆ. ಆದರೆ ಶೂಟಿಂಗ್​ ಮುಗಿಸಿ ಮನೆಗೆ ಹೋದರೆ ನಾನು ಸಾಮಾನ್ಯ ವ್ಯಕ್ತಿಯಾಗಿ ಇರುತ್ತೇನೆ. ಯಾಕೆಂದರೆ ನಮ್ಮ ಮನೆಯಲ್ಲಿ ನನ್ನನ್ನು ಬೆಳೆಸಿದ್ದೇ ಈ ರೀತಿಯಲ್ಲಿ’ ಎಂದು ಮಾಧುರಿ ದೀಕ್ಷಿತ್​ ಇತ್ತೀಚೆಗೆ ಹೇಳಿದ್ದರು.

ಇದನ್ನೂ ಓದಿ:

Viral Video: ಮಾಧುರಿ ದೀಕ್ಷಿತ್​ ಜತೆ ಹೆಜ್ಜೆ ಹಾಕಿದ ಧನುಶ್ರೀ ವರ್ಮ; ಡ್ಯಾನ್ಸ್​ ನೋಡಿ ವಾವ್​ ಎಂದ ನೆಟ್ಟಿಗರು

ಸ್ಟಾರ್​ ನಟಿ ಆದ್ರೂ ಮಾಧುರಿ ದೀಕ್ಷಿತ್​ಗೆ ತಪ್ಪಲಿಲ್ಲ ಅಮ್ಮನ ಬೈಗುಳು; ಕಾರಣ ತಿಳಿಸಿದ ಧಕ್​ ಧಕ್​ ಸುಂದರಿ

Follow us on

Related Stories

Most Read Stories

Click on your DTH Provider to Add TV9 Kannada