‘ದಯವಿಟ್ಟು ತಪ್ಪು ತಿಳಿಯಬೇಡಿ’; ಮಧ್ಯರಾತ್ರಿ ಆದ ಬಳಿಕ ಸನ್ನಿ ಲಿಯೋನ್​ ಮನೆಗೆ ಹೋಗಿದ್ದ ಖ್ಯಾತ ಗಾಯಕ

‘ದಯವಿಟ್ಟು ತಪ್ಪು ತಿಳಿಯಬೇಡಿ’; ಮಧ್ಯರಾತ್ರಿ ಆದ ಬಳಿಕ ಸನ್ನಿ ಲಿಯೋನ್​ ಮನೆಗೆ ಹೋಗಿದ್ದ ಖ್ಯಾತ ಗಾಯಕ
ಮಿಕಾ ಸಿಂಗ್​, ಸನ್ನಿ ಲಿಯೋನ್​

ಸನ್ನಿ ಲಾಸ್​ ಏಂಜಲೀಸ್​ನಲ್ಲಿ ಮನೆ ಹೊಂದಿದ್ದಾರೆ. ಈ ಮನೆಗೆ ಮಿಕಾ ಸಿಂಗ್​ ಮುಂಜಾನೆ 4 ಗಂಟೆಗೆ ತೆರಳಿದ್ದರು. ಈ ಬಗ್ಗೆ ಮಿಕಾ ಸಿಂಗ್​ ಹೇಳಿಕೊಂಡಿದ್ದಾರೆ. ಸನ್ನಿ ನೀಡಿದ ಆತಿಥ್ಯದ ಬಗ್ಗೆಯೂ ಅವರು ಸಂತಸ ಹೊರಹಾಕಿದ್ದಾರೆ.

TV9kannada Web Team

| Edited By: Rajesh Duggumane

Jan 09, 2022 | 7:21 PM


ಸನ್ನಿ ಲಿಯೋನ್ ಅವರು ನೀಲಿ ಜಗತ್ತಿನಲ್ಲಿ ಮಿಂಚಿದವರು. ಈಗ ಅದನ್ನು ಸಂಪೂರ್ಣವಾಗಿ ತೊರೆದು ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಐಟಂ ಸಾಂಗ್​ನಲ್ಲೂ ಸನ್ನಿ ಮಿಂಚುತ್ತಿದ್ದಾರೆ. ಅವರ ಜತೆ ಯಾರಾದರೂ ಕಾಣಿಸಿಕೊಂಡರೆ ಅನೇಕರು ಅಪಾರ್ಥ ಮಾಡಿಕೊಳ್ಳುತ್ತಿದ್ದರು. ಸನ್ನಿ ಅವರನ್ನು ನೋಡುವ ದೃಷ್ಟಿ ಬದಲಾಗಿದೆ. ಅವರು ಭಾರತೀಯರಿಗೆ ಇಷ್ಟವಾಗಿದ್ದಾರೆ. ಅವರನ್ನು ಎಲ್ಲರೂ ನಟಿಯಾಗಿ ಒಪ್ಪಿಕೊಂಡಿದ್ದಾರೆ. ಸನ್ನಿ ಅಮೆರಿಕದಲ್ಲಿ ಇರುವಾಗ ಮಧ್ಯರಾತ್ರಿ ಆದ ಬಳಿಕ ಸನ್ನಿ ಮನೆಗೆ ಖ್ಯಾತ ಗಾಯಕ ಮಿಕಾ ಸಿಂಗ್ ಭೇಟಿ ನೀಡಿದ್ದರು. ಈ ವಿಚಾರ ಕಪಿಲ್ ಶರ್ಮಾ ಶೋನಲ್ಲಿ ಹೊರಬಿದ್ದಿದೆ.

‘ದಿ ಕಪಿಲ್​ ಶರ್ಮಾ ಶೋ’ನಲ್ಲಿ ಮಿಕಾ ಸಿಂಗ್​ ಹಾಗೂ ಸನ್ನಿ ಲಿಯೋನ್​ ಅವರು ಅತಿಥಿಗಳಾಗಿ ಆಗಮಿಸಿದ್ದರು. ಶನಿವಾರ ಈ ಶೋ ಪ್ರಸಾರವಾಗಿದೆ. ಸನ್ನಿ ಲಾಸ್​ ಏಂಜಲೀಸ್​ನಲ್ಲಿ ಮನೆ ಹೊಂದಿದ್ದಾರೆ. ಈ ಮನೆಗೆ ಮಿಕಾ ಸಿಂಗ್​ ಮುಂಜಾನೆ 4 ಗಂಟೆಗೆ ತೆರಳಿದ್ದರು. ಈ ಬಗ್ಗೆ ಮಿಕಾ ಸಿಂಗ್​ ಹೇಳಿಕೊಂಡಿದ್ದಾರೆ. ಸನ್ನಿ ನೀಡಿದ ಆತಿಥ್ಯದ ಬಗ್ಗೆಯೂ ಅವರು ಸಂತಸ ಹೊರಹಾಕಿದ್ದಾರೆ.

‘ನಾನು ಸನ್ನಿ ಮನೆಗೆ ಮುಂಜಾನೆ 4 ಗಂಟೆಗೆ ತೆರಳಿದ್ದೆ. ಏಕೆಂದರೆ ತಡವಾಗಿತ್ತು. ರಾತ್ರಿ 11.30ಕ್ಕೆ ಅವರ ಮನೆಗೆ ತೆರಳುವ ಆಲೋಚನೆ ನನಗೆ ಇತ್ತು. ಆದರೆ, ನಾನು ಭಾಗವಹಿಸಿದ್ದ ಶೋ ತಡವಾಗಿತ್ತು. ಅಷ್ಟು ತಡವಾಗಿ ಅವರ ಮನೆಗೆ ತೆರಳಿದ್ದೇನೆ ಎಂದು ತಪ್ಪು ತಿಳಿಯಬೇಡಿ’ ಎಂದು ಕಪಿಲ್​ ಶರ್ಮಾಗೆ ಮಿಕಾ ಸಿಂಗ್​ ಹೇಳಿದರು. ಆಗ ಎಲ್ಲರೂ ನಕ್ಕರು. ‘ಸನ್ನಿ ಮತ್ತು ಅವರ ಪತಿ ಡ್ಯಾನಿಯಲ್​ ವೆಬರ್​ ತುಂಬಾನೇ ಸ್ವೀಟ್​. ಆ ಸಮಯದಲ್ಲೂ ನನಗೋಸ್ಕರ ಪಿಜ್ಜಾ ಮಾಡಿದ್ದರು. ಅದ್ಭುತ ಕಾಫೀ ನೀಡಿದರು. ಅದು ನನಗೆ ಇನ್ನೂ ನೆನಪಿದೆ’ ಎಂದು ಅವರು ಹೇಳಿದ್ದಾರೆ.

ಮಿಕಾ ಮತ್ತು ಕಪಿಲ್ ನೆರೆಹೊರೆಯವರು. ಕೊವಿಡ್-19 ಲಾಕ್‌ಡೌನ್ ಸಮಯದಲ್ಲಿ ಪರಸ್ಪರರ ಮನೆಗೆ ಭೇಟಿ ನೀಡುತ್ತಿದ್ದರು. ಈ ವೇಳೆ ಇಬ್ಬರೂ ಒಟ್ಟಾಗಿ ಸಮಯ ಕಳೆದಿದ್ದರು.

ಇತ್ತೀಚೆಗೆ ಸನ್ನಿ ಲಿಯೋನ್​ ಹೆಜ್ಜೆ ಹಾಕಿದ್ದ ಹಾಡು ‘ಮಧುಬನ್’ ವಿವಾದ ಸೃಷ್ಟಿಸಿತ್ತು. ನಂತರ ಈ ಹಾಡಿನ ಸಾಹಿತ್ಯ ಬದಲಾಯಿಸಲಾಗಿತ್ತು.

ಇದನ್ನೂ ಓದಿ: ಹಿಂದುಗಳ ಭಾವನೆಗೆ ಧಕ್ಕೆ ತಂದ ಸನ್ನಿ ಲಿಯೋನ್​ ಹಾಡು

Sunny Leone: ಸನ್ನಿ ಲಿಯೋನ್ ಕೈಯಲ್ಲಿವೆ 7 ಸಿನಿಮಾಗಳು; ನಟಿಗೆ ಯಶಸ್ಸು ತಂದುಕೊಡಲಿದೆಯೇ 2022?

Follow us on

Related Stories

Most Read Stories

Click on your DTH Provider to Add TV9 Kannada