ಕ್ರಿಕೆಟಿಗನ ಜತೆಗಿನ ಸಂಬಂಧದಿಂದ ಬಾಲಿವುಡ್ ನಟಿಗೆ ಮಗು; ನಾನು ತಂದೆ ಆಗ್ತೀನಿ ಎಂದು ಮುಂದೆ ಬಂದಿದ್ದ ಗೆಳೆಯ

ಸಾಕಷ್ಟು ಸಂದರ್ಶನಗಳಲ್ಲಿ ನೀನಾ ಈ ಬಗ್ಗೆ ಹೇಳಿಕೊಂಡಿದ್ದರು. ತಂದೆ ಇಲ್ಲದೆ ಮಗಳನ್ನು ಬೆಳೆಸೋದು ತುಂಬಾನೇ ಕಷ್ಟವಾಗಿತ್ತು ಎಂದು ಅವರು ಭಾವುಕರಾಗಿದ್ದರು.

ಕ್ರಿಕೆಟಿಗನ ಜತೆಗಿನ ಸಂಬಂಧದಿಂದ ಬಾಲಿವುಡ್ ನಟಿಗೆ ಮಗು; ನಾನು ತಂದೆ ಆಗ್ತೀನಿ ಎಂದು ಮುಂದೆ ಬಂದಿದ್ದ ಗೆಳೆಯ
ಮಸಾಬಾ ಗುಪ್ತಾ, ನೀನಾ ಗುಪ್ತಾ

ಹಿರಿಯ ನಟಿ ನೀನಾ ಗುಪ್ತಾ ಅವರು 1980ರಲ್ಲಿ ಮಾಜಿ ಕ್ರಿಕೆಟಿಗ ವಿವ್​ ರಿಚರ್ಡ್ಸ್​ ಜತೆ ಪ್ರೀತಿಯಲ್ಲಿದ್ದರು. ಈ ವೇಳೆ ನೀನಾ ಗುಪ್ತಾ ಗರ್ಭ ಧರಿಸಿದ್ದರು. ಆಗ ಅವರ ಗೆಳೆಯ ಸತೀಶ್​ ಕೌಶಿಕ್​ ಮದುವೆ ಆಗೋಕೆ ಮುಂದೆ ಬಂದಿದ್ದರಂತೆ. ಮಗುವಿಗೆ ನಾನು ತಂದೆ ಆಗುತ್ತೇನೆ ಎಂದು ಹೇಳಿಕೊಂಡಿದ್ದರು. ಆದರೆ, ಈ ಮನವಿಯನ್ನು ನೀನಾ ತಿರಸ್ಕರಿಸಿದ್ದರು.

‘ಸಚ್​ ಕಹೂ ತೋ’ ಆಟೋಬಯೋಗ್ರಫಿಯಲ್ಲಿ ನೀನಾ ಈ ಬಗ್ಗೆ ಬರೆದುಕೊಂಡಿದ್ದಾರೆ. ‘1980ರಲ್ಲಿ ರಿಚರ್ಡ್​ನಿಂದ ನಾನು ಗರ್ಭ ಧರಿಸಿದೆ. ನಾನು ಪ್ರೆಗ್ನೆಂಟ್​ ಇರುವಾಗಲೇ ನನ್ನ ಗೆಳೆಯ ಸತೀಶ್​ ಕೌಶಿಕ್ ಮದುವೆ ಆಗಲು ಮುಂದೆ ಬಂದರು. ಮಗು ಕಪ್ಪಗೆ ಹುಟ್ಟಿದರೆ ಭಯ ಬೇಡ. ನಾನು ಅದನ್ನು ನನ್ನ ಮಗು ಎಂದು ಒಪ್ಪಿಕೊಳ್ಳುತ್ತೇನೆ. ಆಗ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಹೇಳಿದ್ದರು. ಆದರೆ, ನಾನು ಇದಕ್ಕೆ ಒಪ್ಪಲಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ. ಮಗಳಿಗೆ ಮಸಾಬಾ ಗುಪ್ತಾ ಎಂದು ಹೆಸರಿಟ್ಟು ಅವರನ್ನು ನೀನಾ ಗುಪ್ತಾ ಅವರೇ ಬೆಳೆಸಿದರು. ಸದ್ಯ ಮಸಾಬಾ ಡಿಸೈನರ್​ ಆಗಿದ್ದಾರೆ.

 

View this post on Instagram

 

A post shared by Masaba (@masabagupta)

ಸಾಕಷ್ಟು ಸಂದರ್ಶನಗಳಲ್ಲಿ ನೀನಾ ಈ ಬಗ್ಗೆ ಹೇಳಿಕೊಂಡಿದ್ದರು. ತಂದೆ ಇಲ್ಲದೆ ಮಗಳನ್ನು ಬೆಳೆಸೋದು ತುಂಬಾನೇ ಕಷ್ಟವಾಗಿತ್ತು. ಮಗಳು ಬೆಳೆದು ನಿಂತರೂ ಆಕೆ ನನಗೆ ಇನ್ನೂ ಚಿಕ್ಕ ಮಗು ಎಂದು ಹೇಳಿಕೊಂಡಿದ್ದರು.

1982ರಲ್ಲೇ ನೀನಾ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಈ ಘಟನೆ ನಡೆದ ನಂತರವೂ ಚಿತ್ರರಂಗದಲ್ಲಿ ಮುಂದುವರಿದರು. ಈಗಲೂ ಸಾಕಷ್ಟು ಪೋಷಕ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಸದ್ಯ ಮೂರು ಚಿತ್ರಗಳು ಅವರ ಕೈಯಲ್ಲಿವೆ. ಇದಲ್ಲದೆ, ಕೆಲ ವೆಬ್​ ಸೀರಿಸ್​ಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ:

Pearl V Puri: ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ; ಕಿರುತೆರೆ ನಟ ಪರ್ಲ್​ ವಿ. ಪುರಿಗೆ ಸಿಕ್ತು ರಿಲೀಫ್​